T20 World Cup: ಸೋತಿದ್ದು ಬಾಂಗ್ಲಾದೇಶ ನೋವಾಗಿದ್ದು ಮಾತ್ರ ಪಾಕಿಸ್ತಾನಕ್ಕೆ!

ಬುಧವಾರ ಅಡಿಲೇಡ್ ಓಬಲ್‌ನಲ್ಲಿ ನಡೆದ ಟಿ20 ವಿಶ್ವಕಪ್ 2022 ರ ಸೂಪರ್ 12 ಪಂದ್ಯದಲ್ಲಿ ಭಾರತ ಬಾಂಗ್ಲಾದೇಶದ ವಿರುದ್ಧ 5 ರನ್‌ಗಳ ರೋಚಕ ಜಯ ಸಾಧಿಸಿದೆ. ಪಂದ್ಯದಲ್ಲಿ ಬಾಂಗ್ಲಾದೇಶ ಸೋಲನುಭವಿಸಿದರು, ಪಾಕಿಸ್ತಾನ ತಂಡಕ್ಕೆ ಮಾತ್ರ ಭಾರತದ ಜಯ ಭಾರಿ ನೋವುಂಟುಮಾಡಿದೆ.
ಒಂದು ಹಂತದಲ್ಲಿ ಭಾರತ ಸೋಲುವ ಹಂತದಲ್ಲಿತ್ತು. 185 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಬಾಂಗ್ಲಾದೇಶ ಲಿಟ್ಟನ್ ದಾಸ್ ಸ್ಫೋಟಕ ಅರ್ಧಶತಕದ ನೆರವಿನಿಂದ 7 ಓವರ್ ಗಳಲ್ಲಿ 66 ರನ್ ಗಳಿಸಿತ್ತು. ಈ ಹಂತದಲ್ಲಿ ಮಳೆ ಬಂದು ಪಂದ್ಯವನ್ನು ಸ್ಥಗಿತಗೊಳಿಸಲಾಯಿತು, ಒಂದು ವೇಳೆ ಮಳೆ ಹೆಚ್ಚಾಗಿ ಪಂದ್ಯ ಮತ್ತೆ ಶುರುವಾಗದಿದ್ದರೆ, ಡಿಎಲ್‌ಎಸ್ ನಿಯಮದಂತೆ ಬಾಂಗ್ಲಾ 17 ರನ್‌ಗಳ ಜಯ ಸಾಧಿಸುತ್ತಿತ್ತು. ಈ ಹಂತದಲ್ಲಿ ಪಾಕಿಸ್ತಾನದ ಅಭಿಮಾನಿಗಳು ಭಾರಿ ಸಂಭ್ರಮದಲ್ಲಿದ್ದರು.
ಒಂದು ವೇಳೆ ಭಾರತ ಈ ಪಂದ್ಯದಲ್ಲಿ ಸೋತಿದ್ದರೆ ಪಾಕಿಸ್ತಾನಕ್ಕೆ ಸೆಮಿಫೈನಲ್ ತಲುಪುವ ಅವಕಾಶ ಹೆಚ್ಚಿರುತ್ತಿತ್ತು. ಇದಕ್ಕಾಗಿಯೇ ಬಾಂಗ್ಲಾ ಅಭಿಮಾನಿಗಳಿಗಿಂದ ಪಾಕಿಸ್ತಾನ ಅಭಿಮಾನಿಗಳೇ ಮಳೆ ಹೆಚ್ಚಾಗುವಂತೆ ಪ್ರಾರ್ಥಿಸಿದರು. ಆದರೆ, ಮಳೆ ಕೆಲವೇ ಹೊತ್ತಿನಲ್ಲಿ ನಿಂತಿತು, ಪಂದ್ಯ ಮತ್ತೆ ಆರಂಭವಾಯಿತು. ಡಿಎಲ್‌ಎಸ್ ನಿಯಮದ ಪ್ರಕಾರ 16 ಓವರ್ ಗಳಲ್ಲಿ ಬಾಂಗ್ಲಾ ಗೆಲ್ಲಲು 151 ರನ್ ಗಳಿಸಬೇಕಾಗಿತ್ತು.

ಮಳೆ ನಿಂತ ನಂತರ ಭಾರತದ ಅಸಲಿ ಆಟ
ಮಳೆಗೆ ಮೊದಲು ಬಾಂಗ್ಲಾ 7 ಓವರ್ ಗಳಲ್ಲಿ 66 ರನ್ ಗಳಿಸಿತ್ತು. ನಂತರ ಉಳಿದ ಓವರ್ ಗಳಲ್ಲಿ 85 ರನ್ ಗಳಿಸಬೇಕಿತ್ತು. ಬಾಂಗ್ಲಾದೇಶದ ಒಂದು ವಿಕೆಟ್ ಕೂಡ ಪತನವಾಗಿರಲಿಲ್ಲ, ಭಾರತಕ್ಕಿಂತ ಬಾಂಗ್ಲಾದೇಶಕ್ಕೆ ಗೆಲುವಿನ ಅವಕಾಶ ಹೆಚ್ಚಿತ್ತು. ಮಳೆ ತನ್ನ ಆಟ ನಿಲ್ಲಿಸಿದ ನಂತರ ಟೀಂ ಇಂಡಿಯಾ ತನ್ನ ಅಸಲಿ ಆಟವನ್ನು ಶುರುಮಾಡಿತು.
ಕೆಎಲ್ ರಾಹುಲ್ ಅದ್ಭುತ ರನೌಟ್ ಮಾಡುವ ಮೂಲಕ ಉತ್ತಮ ಆಟವಾಡುತ್ತಿದ್ದ ಲಿಟ್ಟನ್ ದಾಸ್‌ರನ್ನು ವಾಪಸ್ ಕಳಿಸಿದರು. ನಂತರ ಬಾಂಗ್ಲಾ ತಂಡದ ಪತನ ಆರಂಭವಾಯಿತು. ಭಾರತದ ಬೌಲರ್ ಗಳು ಉತ್ತಮ ಪ್ರದರ್ಶನ ನೀಡಿದರು. ಅಂತಿಮವಾಗಿ 16 ಓವರ್ ಗಳಲ್ಲಿ 145 ರನ್ ಗಳಿಸುವ ಮೂಲಕ 5 ರನ್‌ಗಳ ಸೋಲನುಭವಿಸಿತು.
India Vs Bangladesh: ರಾಹುಲ್‌ಗೆ ವರದಾನವಾದ ಕೊಹ್ಲಿ ಬ್ಯಾಟಿಂಗ್ ಪಾಠ

ಬಾಂಗ್ಲಾದೇಶ ಸೋತರೆ ಪಾಕಿಸ್ತಾನಕ್ಕೆ ಯಾಕೆ ನೋವು?
ಭಾರತ ಮತ್ತು ಬಾಂಗ್ಲಾದೇಶದ ವಿರುದ್ಧ ಸೋಲನುಭವಿಸಿದ ನಂತರ ಪಾಕಿಸ್ತಾನದ ಸೆಮಿಫೈನಲ್ ಹಾದಿ ಕಠಿಣವಾಗಿದೆ. ಮತ್ತೊಂದೆಡೆ ದಕ್ಷಿಣ ಆಫ್ರಿಕಾ ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಗೆಲ್ಲುವ ಅವಕಾಶವಿದ್ದಾಗ ಮಳೆಯಿಂದಾಗಿ ಪಂದ್ಯ ಫಲಿತಾಂಶವಿಲ್ಲದೆ ಕೊನೆಯಾಗುವ ಮೂಲಕ 1 ಅಂಕ ಗಳಿಸಿತು. ನಂತರದ ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ 104 ರನ್‌ಗಳ ಬೃಹತ್ ಜಯ ಸಾಧಿಸಿ 3 ಅಂಕಗಳನ್ನು ಸಂಪಾದಿಸಿತು.
ಮತ್ತೊಂದೆಡೆ ಪಾಕಿಸ್ತಾನ ನೆದರ್ಲ್ಯಾಂಡ್ಸ್ ವಿರುದ್ಧ ಗೆಲುವು ಸಾಧಿಸಿ 2 ಅಂಕ ಗಳಿಸಿತು. ಭಾರತ ದಕ್ಷಿಣ ಆಫ್ರಿಕಾ ವಿರುದ್ಧ ಗೆಲುವು ಸಾಧಿಸಿದ್ದರೆ, ಪಾಕಿಸ್ತಾನ ಉಳಿದ ಪಂದ್ಯಗಳಲ್ಲಿ ಗೆಲುವು ಸಾಧಿಸಿ ಸುಲಭವಾಗಿ ಸೆಮಿಫೈನಲ್ ತಲುಪುವ ಅವಕಾಶ ಪಡೆಯುತ್ತಿತ್ತು. ಆದರೆ, ಭಾರತ ದಕ್ಷಿಣ ಆಫ್ರಿಕಾ ವಿರುದ್ಧ ಸೋಲನುಭವಿಸಿತು. ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ ಭಾರತ ಸೋತಿದ್ದರೆ ರನ್ ರೇಟ್ ಆಧಾರದಲ್ಲಿ ಸೆಮಿಫೈನಲ್ ತಲುಪುವ ಅವಕಾಶ ಇತ್ತು ಆದರೆ, ಭಾರತ ಬಾಂಗ್ಲಾ ವಿರುದ್ಧ ಗೆಲ್ಲುವ ಮೂಲಕ ಪಾಕಿಸ್ತಾನದ ಸೆಮಿಫೈನಲ್ ಆಸೆ ಮತ್ತಷ್ಟು ಕ್ಷೀಣಿಸಿದೆ.

ಬಾಂಗ್ಲಾ, ಪಾಕಿಸ್ತಾನಕ್ಕೆ ಇನ್ನೂ ಇದೆ ಅವಕಾಶ
ಟಿ20 ವಿಶ್ವಕಪ್ 2022 ರ ಸೂಪರ್ 12 ಹಂತದಲ್ಲಿ ಕೇವಲ ಒಂದೇ ಒಂದು ಗೆಲುವನ್ನು ದಾಖಲಿಸಿದ ನೆದರ್ಲ್ಯಾಂಡ್ಸ್ ಈಗಾಗಲೇ ಸೆಮಿ-ಫೈನಲ್ ರೇಸ್‌ನಿಂದ ಹೊರಗುಳಿದಿದೆ. ಆದರೂ ರೋಹಿತ್ ನೇತೃತ್ವದ ತಂಡವು ಬಾಂಗ್ಲಾದೇಶವನ್ನು ಸೋಲಿಸಿ ಮೂರನೇ ಗೆಲುವು ದಾಖಲಿಸಿತು. ಸೂಪರ್ 12 ಹಂತ, ಟಿ20 ವಿಶ್ವಕಪ್‌ನ ಸೆಮಿಫೈನಲ್‌ಗೆ ಭಾರತ ಇನ್ನೂ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿಲ್ಲ.
ಟಿ20 ವಿಶ್ವಕಪ್‌ನ ಸೆಮಿಫೈನಲ್ ರೇಸ್‌ನಲ್ಲಿ ಭಾರತದ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವೂ ಜೀವಂತವಾಗಿದೆ. ಟಿ20 ವಿಶ್ವಕಪ್‌ನಲ್ಲಿ ಜೀವಂತವಾಗಿರಲು ಪಾಕಿಸ್ತಾನ ತನ್ನ ಉಳಿದ ಎರಡು ಪಂದ್ಯಗಳನ್ನು ಗೆಲ್ಲಲೇಬೇಕು. ಆದರೆ ಪಾಕಿಸ್ತಾನ ಮುಂದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಆಡಲಿದೆ, ನಂತರ ಭಾನುವಾರ ಅಡಿಲೇಡ್ ಓವಲ್‌ನಲ್ಲಿ ಬಾಂಗ್ಲಾ ವಿರುದ್ಧ ಸೆಣೆಸಲಿದ್ದಾರೆ. ಎರಡೂ ಪಂದ್ಯಗಳಲ್ಲಿ ಪಾಕಿಸ್ತಾನ ಗೆದ್ದರೆ, ದಕ್ಷಿಣ ಆಫ್ರಿಕಾ, ಭಾರತ ತಮ್ಮ ಮುಂದಿನ ಪಂದ್ಯದಲ್ಲಿ ಸೋತರೆ ರನ್ ರೇಟ್ ಲೆಕ್ಕಾಚಾರದಲ್ಲಿ ಸೆಮಿಫೈನಲ್ ಪ್ರವೇಶಿಸಬಹುದು. ಆದರೆ ಈ ಸಾಧ್ಯತೆ ತೀರಾ ಕಡಿಮೆ ಇದೆ. ಭಾರತ ತನ್ನ ಮುಂದಿನ ಪಂದ್ಯವನ್ನು ಜಿಂಬಾಬ್ವೆ ವಿರುದ್ಧ ಆಡಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications