ಟೀಂ ಇಂಡಿಯಾಕ್ಕೆ ಹಾರ್ದಿಕ್ ಪಟೇಲ್ ಪ್ರತಿಭಟನೆ ಭೀತಿ
ರಾಜ್ ಕೋಟ್, ಅ.16: ಚೇತೇಶ್ವರ್ ಪೂಜಾರಾ ಅವರ ಆತಿಥ್ಯ ಸ್ವೀಕರಿಸಿ ಹೋಟೆಲ್ ಗೆ ತೆರಳಿದ ಎಂಎಸ್ ಧೋನಿ ಅಂಡ್ ಟೀಂಗೆ ಗುಜರಾತಿನ ಪ್ರತಿಭಟನಾಕಾರ ಹಾರ್ದಿಕ್ ಪಟೇಲ್ ಭೀತಿ ಎದುರಾಗಿದೆ. ಗುಜರಾತಿನಲ್ಲಿ ನಡೆಯುತ್ತಿರುವ ರಾಜಕೀಯ ಸಂಘರ್ಷ ಈಗ ಕ್ರಿಕೆಟ್ ಪಿಚ್ ಗೂ ಕಾಲಿರಿಸುತ್ತಿದ್ದು, ಭಾನುವಾರದ ಪ್ರತಿಭಟನೆಯ ಭೀತಿಯಲ್ಲೇ ಪಂದ್ಯ ಆಯೋಜನೆಗೊಂಡಿದೆ.
ಪಾಟೀದಾರ್ ಸಂಘಟನೆಯ ಹೊಸ ತಾರೆಯಾಗಿ ಬೆಳೆದಿರುವ ಯುವ ಮುಖಂಡ ಹಾರ್ದಿಕ್ ಪಟೇಲ್ ಅವರು ಅಕ್ಟೋಬರ್ 18ರಂದು ನಡೆಯಲಿರುವ ಕ್ರಿಕೆಟ್ ಪಂದ್ಯಕ್ಕೆ ಅಡ್ಡಿಪಡಿಸಲು ಮುಂದಾಗಿದ್ದಾರೆ. ಹಾರ್ದಿಕ್ ಅವರ ಟಾರ್ಗೆಟ್ ಆನಂದಿಬೇನ್ ಅವರ ಬಿಜೆಪಿ ಸರ್ಕಾರವೇ ಆಗಿದ್ದರೂ ಪ್ರತಿಭಟನೆಯ ಬಿಸಿಯನ್ನು ಕ್ರಿಕೆಟರ್ಸ್ ಸಹಿಸಿಕೊಳ್ಳಬೇಕಾಗುತ್ತದೆ.[ಟೀಂ ಇಂಡಿಯಾಕ್ಕೆ 'ಲವ್ಲಿ ಡಿನ್ನರ್' ಬಡಿಸಿದ ಪೂಜಾರಾ]
ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ (ಎಸ್ ಸಿಎ) ಈಗಾಗಲೇ ಸಾಕಷ್ಟು ಭದ್ರತಾ ಕ್ರಮಗಳನ್ನು ಅನುಸರಿಸಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ನಿಗಾ ವಹಿಸಲಾಗಿದೆ ಎಂದು ಎಸ್ ಸಿಎ ಮಾಧ್ಯಮ ವ್ಯವಸ್ಥಾಪಕ ಹಿಮಾಂಶು ಶಾ ಹೇಳಿದ್ದಾರೆ.
ಟೀಂ ಇಂಡಿಯಾಗೆ ಚೇತೇಶ್ವರ್ ಪೂಜಾರಾ ಹಾಗೂ ಅವರ ತಂದೆ ಅರವಿಂದ್ ಪೂಜಾರಾರಿಂದ ಪ್ರೀತಿಯ ಡಿನ್ನರ್ ಸಿಕ್ಕಿದೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಟ್ವೀಟ್ ಮಾಡಿದೆ. ಜೊತೆಗೆ ಟೀಂ ಇಂಡಿಯಾ ಉಳಿದುಕೊಳ್ಳಲಿರುವ ಹೋಟೆಲ್ ನ ಚಿತ್ರಗಳು ಇಲ್ಲಿವೆ...

ಹಾರ್ದಿಕ್ ಪಟೇಲ್ ರಿಂದ ಪ್ರತಿಭಟನೆ ಘೋಷಣೆ
ಪಾಟೀದಾರ್ ಅನಾಮತ್ ಆಂದೋಳನ್ ಸಮಿತಿ ಮುಖಂಡತ್ವವನ್ನು ವಹಿಸಿಕೊಂಡಿರುವ ಹಾರ್ದಿಕ್ ಪಟೇಲ್ ಅವರು ಭಾರಿ ಸಂಖ್ಯೆಯಲ್ಲಿ ಮೈದಾನ ಪ್ರವೇಶಿಸಿ ಸರ್ಕಾರದ ವಿರುದ್ಧ ಘೋಷಣೆ ಕೂಗುವುದಾಗಿ ಹೇಳಿದ್ದಾರೆ. ಪಟೇಲ್ ಸಮುದಾಯಕ್ಕೆ ಒಬಿಸಿ ಕೆಟಗರಿಯಲ್ಲಿ ಮೀಸಲಾತಿ ಸಿಗಬೇಕು ಎಂದು ಆಗ್ರಹಿಸುತ್ತಿದ್ದಾರೆ.

ಬಿಸಿಸಿಐ ಮನವಿ
ಬಿಸಿಸಿಐ ಪರವಾಗಿ ಎಸ್ ಇಎ ಗೌರವ ಕಾರ್ಯದರ್ಶಿ ನಿರಂಜನ್ ಶಾ ಅವರು 22 ವರ್ಷದ ಹಾರ್ದಿಕ್ ಪಟೇಲ್ ಅವರಲ್ಲಿ ಮನವಿ ಮಾಡಿಕೊಂಡು, ಪ್ರತಿಭಟನೆ ಕೈ ಬಿಡುವಂತೆ ಕೇಳಿಕೊಂಡಿದ್ದಾರೆ.

ಟೀಂ ಇಂಡಿಯಾ ತಂಗಲಿರುವ ಹೋಟೆಲ್
ಮುಖ್ಯಮಂತ್ರಿ ಆನಂದಿಬೇನ್ ಅವರು ಪಂದ್ಯ ವೀಕ್ಷಣೆ ಬರುವುದರಿಂದ ಹೆಚ್ಚಿನ ರೀತಿಯಲ್ಲಿ ಭದ್ರತೆ ಕೈಗೊಳ್ಳಲಾಗಿದೆ ಎಂದು ರಾಜ್ ಕೋಟ್ ಎಸ್ ಪಿ ಗಗನ್ ದೀಪ್ ಗಂಭೀರ್ ಹೇಳಿದ್ದಾರೆ.

ಧೋನಿ ಪಡೆಗೆ ಆತ್ಮೀಯ ಸ್ವಾಗತ ಸಿಕ್ಕಿದೆ
ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧ ಇಂದೋರ್ ನಲ್ಲಿ ಭರ್ಜರಿ ಗೆಲುವು ಸಾಧಿಸಿದ ಎಂಎಸ್ ಧೋನಿ ಪಡೆಗೆ ರಾಜ್ ಕೋಟ್ ನಲ್ಲಿ ಆತ್ಮೀಯ ಸ್ವಾಗತ ಸಿಕ್ಕಿದೆ. ಟೆಸ್ಟ್ ಆಟಗಾರ ಚೇತೇಶ್ವರ್ ಪೂಜಾರಾ ಅವರು ಟೀಂ ಇಂಡಿಯಾ ಸದಸ್ಯರಿಗೆ 'ಪ್ರೀತಿಯ ಭೋಜನ' ಬಡಿಸಿದ್ದಾರೆ.

ಮೂರನೇ ಏಕದಿನ ಪಂದ್ಯಕ್ಕಾಗಿ ತಯಾರಿ
ರಾಜ್ ಕೋಟ್ ಗೆ ಬಂದಿಳಿದಿರುವ ಎಂಎಸ್ ಧೋನಿ ನಾಯಕತ್ವದ ಭಾರತ ತಂಡ, ಭಾನುವಾರ (ಅಕ್ಟೋಬರ್ 18) ಮೂರನೇ ಏಕದಿನ ಪಂದ್ಯಕ್ಕಾಗಿ ತಯಾರಿ ನಡೆಸುತ್ತಿದೆ.

ಮೈದಾನದ ಸುತ್ತಾ ಸ್ವಾಗತ ಕಮಾನು
ಮೈದಾನದ ಸುತ್ತಾ ಸ್ವಾಗತ ಕಮಾನು, ಫ್ಲೆಕ್ಸ್, ಬ್ಯಾನರ್ ಗಳು ಹಾಕಲಾಗಿದ್ದು, ಟೀಂ ಇಂಡಿಯಾ ಹಾಗೂ ದಕ್ಷಿಣ ಆಫ್ರಿಕಾ ಆಟಗಾರರ ಚಿತ್ರಗಳನ್ನು ಹಾಕಿ ಸ್ವಾಗತಿಸಲಾಗಿದೆ.

ರಾಜ್ ಕೋಟ್ ನ ಪ್ರಮುಖ ಹೋಟೆಲ್
ರಾಜ್ ಕೋಟ್ ನ ಪ್ರಮುಖ ಹೋಟೆಲ್ ನಲ್ಲಿ ಎರಡು ತಂಡದ ಆಟಗಾರರು ನೆಲೆಸಲಿದ್ದಾರೆ. ವಿಶೇಷ ಆತಿಥ್ಯ ಅವರಿಗಾಗಿ ಕಾದಿದೆ.

ಹೋಟೆಲ್ ನ ಒಳಾಂಗಣ
ಟೀಂ ಇಂಡಿಯಾ ನೆಲೆಸಲಿರುವ ಹೋಟೆಲ್ ನ ಒಳಾಂಗಣ ಚಿತ್ರ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications