Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಗಾಂಧಿ-ಮಂಡೇಲಾ ಕ್ರಿಕೆಟ್ ಸರಣಿ ಖಚಿತಪಡಿಸಿದ ಬಿಸಿಸಿಐ

ಮುಂಬೈ, ಸೆ. 01: ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಕ್ರಿಕೆಟ್ ಸರಣಿಯನ್ನು 'ಮಹಾತ್ಮಾ ಗಾಂಧಿ-ನೆಲ್ಸನ್ ಮಂಡೇಲಾ' ನೆನಪಿನ ಸರಣಿಯಾಗಿ ನಡೆಸಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಮತ್ತು ಕ್ರಿಕೆಟ್ ದಕ್ಷಿಣ ಆಫ್ರಿಕಾ ನಿರ್ಧರಿಸಿದೆ. ಇನ್ಮುಂದೆ ಉಭಯ ದೇಶಗಳ ನಡುವಿನ ಕ್ರಿಕೆಟ್ ಸರಣಿ ಇದೇ ಹೆಸರಲ್ಲಿ ಆಯೋಜನೆಗೊಳ್ಳಲಿದೆ.

ರಾಷ್ಟ್ರಪಿತ ಮಹಾತ್ಮ ಗಾಂಧಿ ಹಾಗೂ ನೆಲ್ಸನ್ ಮಂಡೇಲಾ ಸ್ಮರಣಾರ್ಥವಾಗಿ ಟೆಸ್ಟ್ ಸರಣಿಗೆ 'ಫ್ರೀಡಂ ಟ್ರೋಫಿ' ಎಂದು ಹೆಸರಿಡಲಾಗುತ್ತಿದೆ ಎಂದು ಬಿಸಿಸಿಐ ಅಧ್ಯಕ್ಷ ಜಗಮೋಹನ ದಾಲ್ಮಿಯಾ ಹೇಳಿದ್ದಾರೆ. ಉಭಯ ರಾಷ್ಟ್ರಗಳ ನಡುವೆ ಟೆಸ್ಟ್ ಸರಣಿಗೆ ಈ ಮಹಾನ್ ನಾಯಕರ ಹೆಸರಿಡಲು ಅನೇಕ ಬಾರಿ ಚರ್ಚೆ ನಡೆಸಲಾಗಿತ್ತು. [ಭಾರತ-ದಕ್ಷಿಣ ಆಫ್ರಿಕಾ ಸರಣಿ ದಿನಾಂಕಪಟ್ಟಿ ಪ್ರಕಟ]

India and South Africa to play for 'Gandhi-Mandela' series


ಅದರೆ, ಜಾರಿಗೆ ತರುವಲ್ಲಿ ಉಭಯ ದೇಶಗಳ ಕ್ರಿಕೆಟ್ ಮಂಡಳಿಗಳು ಸಫಲವಾಗಿರಲಿಲ್ಲ. ಈಗ ಅಧಿಕೃತವಾಗಿ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಸರಣಿಗೆ ದಿ ಮಹಾತ್ಮಾ ಗಾಂಧಿ-ನೆಲ್ಸನ್ ಮಂಡೇಲಾ ಸರಣಿ ಎಂದು ಕರೆಯಲಾಗುತ್ತಿದೆ.

ಸೆಪ್ಟೆಂಬರ್ ಅಂತ್ಯ ಭಾರತಕ್ಕೆ ಆಗಮಿಸಲಿರುವ ದಕ್ಷಿಣ ಆಫ್ರಿಕಾ ತಂಡ 72 ದಿನಗಳ ಕಾಲದ ಅವಧಿಯಲ್ಲಿ ಟಿ20, 5 ಏಕದಿನ ಹಾಗೂ 4 ಟೆಸ್ಟ್ ಪಂದ್ಯಗಳನ್ನಾಡಲಿದೆ. 'ಗಾಂಧಿ-ಮಂಡೇಲಾ' ಸರಣಿಗೆ ಅಕ್ಟೋಬರ್ 2ರಂದು ಚಾಲನೆ ಸಿಗಲಿದೆ. ಸರಣಿ ಡಿಸೆಂಬರ್ 7ರವರೆಗೆ ನಡೆಯಲಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಅನುರಾಗ್ ಠಾಕೂರ್ ಹೇಳಿದ್ದಾರೆ.[ಗಂಗೂಲಿ ದಾಖಲೆ ಮುರಿದ ಎಬಿ ಡಿ ವಿಲಿಯರ್ಸ್]

ದಕ್ಷಿಣ ಆಫ್ರಿಕಾದ ಕ್ರಿಕೆಟ್ ಮಂಡಳಿ ಅಧ್ಯಕ್ಷ ಕ್ರಿಸ್ ನೆನ್ಜಾನಿ ಈ ಬಗ್ಗೆ ಪ್ರತಿಕ್ರಿಯಿಸಿ, ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದ ಇಬ್ಬರು ಮಹಾನ್ ನಾಯಕರ ಹೆಸರಿನಲ್ಲಿ ಸರಣಿ ನಡೆಸುವುದು ಹೆಮ್ಮೆಯ ವಿಚಾರ. ನಮ್ಮ ಮೇಲೆ ದೊಡ್ಡ ಜವಾಬ್ದಾರಿ ಇದೆ ಎಂದಿದ್ದಾರೆ. (ಪಿಟಿಐ)

Story first published: Wednesday, January 3, 2018, 10:03 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+