ದ್ರಾವಿಡ್ ಕೋಚಿಂಗ್ ನಲ್ಲಿ ಧೋನಿ ಸದ್ಯಕ್ಕೆ ಆಡುತ್ತಿಲ್ಲ!
ಬೆಂಗಳೂರು, ಸೆ. 09: ಪ್ರವಾಸಿ ಬಾಂಗ್ಲಾದೇಶ 'ಎ' ತಂಡದ ವಿರುದ್ಧ ಸೆಣೆಸಲಿರುವ ಭಾರತ 'ಎ' ತಂಡವನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಬುಧವಾರ ಮಧ್ಯಾಹ್ನ ಪ್ರಕಟಿಸಿದೆ. ರಾಹುಲ್ ದ್ರಾವಿಡ್ ಅವರ ಕೋಚಿಂಗ್ ಇರುವ ತಂಡದಲ್ಲಿ ನಾಯಕರಾದ ಎಂಎಸ್ ಧೋನಿ ಹಾಗೂ ವಿರಾಟ್ ಕೊಹ್ಲಿ ಅವರು ಆಡುತ್ತಾರೆ ಎಂಬ ನಿರೀಕ್ಷೆ ಸುಳ್ಳಾಗಿದೆ.
ಏಕದಿನ ಪಂದ್ಯವಾಡುವ ಭಾರತ 'ಎ' ತಂಡಕ್ಕೆ ಉನ್ಮುಕ್ತ್ ಚಂದ್ ನಾಯಕರಾಗಿದ್ದರೆ, ಮೂರು ದಿನಗಳ ಪಂದ್ಯವಾಡುವ ತಂಡಕ್ಕೆ ಶಿಖರ್ ಧವನ್ ಕ್ಯಾಪ್ಟನ್ ಆಗಿ ಆಯ್ಕೆಯಾಗಿದ್ದಾರೆ. ಸೆಪ್ಟೆಂಬರ್ 16 ರಿಂದ ಸೆ. 29ರವರೆಗೂ ಪಂದ್ಯಾವಳಿಗಳು ನಡೆಯಲಿವೆ. [ಸೆಪ್ಟೆಂಬರ್ 16 ರಿಂದ ದ್ರಾವಿಡ್ ಕೋಚಿಂಗ್ ಪರೀಕ್ಷೆ]
ಬಾಂಗ್ಲಾದೇಶ 'ಎ' ತಂಡ ಬೆಂಗಳೂರಿನಲ್ಲಿ ಮೂರು ಏಕದಿನ ಹಾಗೂ ಏಕೈಕ ತ್ರಿದಿನ ಪಂದ್ಯವನ್ನಾಡಲಿದೆ. ಸೆ.22ರಿಂದ 24ರವರೆಗೆ ರಣಜಿ ಚಾಂಪಿಯನ್ ಕರ್ನಾಟಕ ವಿರುದ್ಧ ಮೂರು ದಿನಗಳ ಅಭ್ಯಾಸ ಪಂದ್ಯ ಆಡಲಿದೆ.
ಅಕ್ಟೋಬರ್ 2 ರಿಂದ ಆರಂಭವಾಗಲಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಗೆ ಅಭ್ಯಾಸ ನಡೆಸುವ ದೃಷ್ಟಿಯಿಂದ ಭಾರತ ತಂಡದ ಬಹುತೇಕ ಆಟಗಾರರು ಬಾಂಗ್ಲಾದೇಶ ಎ ತಂಡದ ವಿರುದ್ಧ ಕಣಕ್ಕಿಳಿಯುವ ಸಾಧ್ಯತೆಗಳಿವೆ ಎನ್ನಲಾಗಿತ್ತು. ಆದರೆ, ಹಿರಿಯ ಆಟಗಾರರ ಪೈಕಿ ಸುರೇಶ್ ರೈನಾ ಹೊರತುಪಡಿಸಿದರೆ ಉಳಿದವರಿಗೆ ಅವಕಾಶ ಕಲ್ಪಿಸಲಾಗಿಲ್ಲ.

ಎಂಎಸ್ ಧೋನಿ ಆಡುತ್ತಿಲ್ಲ
ಬಹುದಿನಗಳಿಂದ ಕ್ರಿಕೆಟ್ ದೂರ ಉಳಿದಿರುವ ಏಕದಿನ ತಂಡದ ನಾಯಕ ಎಂಎಸ್ ಧೋನಿ ಕೂಡ ಆಡಲಿದ್ದಾರೆ. ವಿರಾಟ್ ಕೊಹ್ಲಿ ಕೂಡಾ ಶ್ರೀಲಂಕಾ ಪ್ರವಾಸಕ್ಕೂ ಮುನ್ನ ತಯಾರಿ ಪಡೆದಂತೆ ಈ ಸರಣಿಯಲ್ಲೂ ಬ್ಯಾಟ್ ಬೀಸಲಿದ್ದಾರೆ ಎಂಬ ಸುದ್ದಿ ಬಂದಿತ್ತು. ಅದರೆ, ಬಿಸಿಸಿಐ ಈ ಇಬ್ಬರು ಆಟಗಾರರಿಗೆ ಭಾರತ 'ಎ' ತಂಡದಲ್ಲಿ ಸ್ಥಾನ ಕಲ್ಪಿಸಿಲ್ಲ.

ಬಾಂಗ್ಲಾ 'ಎ' ತಂಡದ ಪ್ರವಾಸದ ವೇಳಾಪಟ್ಟಿ
* ಸೆಪ್ಟೆಂಬರ್ 16 : ಬುಧವಾರ, ಮೊದಲ ಏಕದಿನ ಚಿನ್ನಸ್ವಾಮಿ ಸ್ಟೇಡಿಯಂ, ಬೆಂಗಳೂರು
* ಸೆಪ್ಟೆಂಬರ್ 18 : ಶುಕ್ರವಾರ, 2ನೇ ಏಕದಿನ ಚಿನ್ನಸ್ವಾಮಿ ಸ್ಟೇಡಿಯಂ, ಬೆಂಗಳೂರು
* ಸೆಪ್ಟೆಂಬರ್ 20 : ಭಾನುವಾರ, 3ನೇ ಏಕದಿನ ಚಿನ್ನಸ್ವಾಮಿ ಸ್ಟೇಡಿಯಂ, ಬೆಂಗಳೂರು

ಮೂರು ದಿನಗಳ ಪಂದ್ಯ
* ಸೆಪ್ಟೆಂಬರ್ 22-24 :ಮಂಗಳವಾರ- ಗುರುವಾರ ಮೂರು ದಿನಗಳ ಪಂದ್ಯ, ರಣಜಿ ಚಾಂಪಿಯನ್ ಕರ್ನಾಟಕ ತಂಡದ ವಿರುದ್ಧ, ಮೈಸೂರು
* ಸೆಪ್ಟೆಂಬರ್ 27-29 : ಭಾನುವಾರ-ಮಂಗಳವಾರ, ಮೂರು ದಿನಗಳ ಪಂದ್ಯ, ಚಿನ್ನಸ್ವಾಮಿ ಸ್ಟೇಡಿಯಂ.

ಏಕದಿನ ಪಂದ್ಯಕ್ಕೆ ಭಾರತ 'ಎ' ತಂಡ
ಉನ್ಮುಕ್ತ್ ಚಂದ್ (ನಾಯಕ), ಮಾಯಾಂಕ್ ಅಗರ್ ವಾಲ್, ಮನೀಶ್ ಪಾಂಡೆ, ಸುರೇಶ್ ರೈನಾ, ಕೇದಾರ್ ಜಾಧವ್, ಸಂಜು ಸಾಮ್ಸನ್, ಕರುಣ್ ನಾಯರ್, ಕುಲ್ ದೀಪ್ ಯಾದವ್, ಜಯಂತ್ ಯಾದವ್, ಕರಣ್ ಶರ್ಮ, ರಿಷಿ ಧವನ್, ಎಸ್ ಅರವಿಂದ್, ಧವಳ್ ಕುಲಕರ್ಣಿ, ರುಷ್ ಕಲಾರಿಯಾ,ಗುರ್ ಕೀರತ್ ಸಿಂಗ್ ಮಾನ್

ಮೂರು ದಿನಗಳ ಪಂದ್ಯಕ್ಕೆ ತಂಡ
ಶಿಖರ್ ಧವನ್ (ನಾಯಕ), ಅಭಿನವ್ ಮುಕುಂದ್, ಕರುಣ್ ನಾಯರ್, ಶ್ರೇಯಸ್ ಅಯ್ಯರ್, ಬಾಬಾ ಅಪರಾಜಿತ್, ನಮನ್ ಓಜಾ, ಜಯಂತ್ ಯಾದವ್, ವಿಜಯ್ ಶಂಕರ್ ,ರವೀಂದ್ರ ಜಡೇಜ, ಶ್ರೇಯಸ್ ಗೋಪಾಲ್, ಅಭಿಮನ್ಯು ಮಿಥುನ್, ವರುಣ್ ಅರೋನ್, ಈಶ್ವರ್ ಪಾಂಡೆ, ಶೆಲ್ಡನ್ ಜಾಕ್ಸನ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications