ಶ್ರೀಲಂಕಾ, ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಭಾರತ ತಂಡ ಪ್ರಕಟ

ಮುಂಬೈ, ಡಿಸೆಂಬರ್ 23: ಶ್ರೀಲಂಕಾ, ಆಸ್ಟ್ರೇಲಿಯಾ ವಿರುದ್ಧದ ಟಿ20, ಏಕದಿನ ಕ್ರಿಕೆಟ್ ಸರಣಿಗೆ ಭಾರತ ತಂಡವನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಆಯ್ಕೆ ಸಮಿತಿ ಇಂದು(ಡಿ.23) ಪ್ರಕಟಿಸಿದೆ. ನಿರೀಕ್ಷೆಯಂತೆ ಆರಂಭಿಕ ಆಟಗಾರ ಶಿಖರ್ ಧವನ್ ಹಾಗೂ ವೇಗಿ ಜಸ್ ಪ್ರೀತ್ ಬೂಮ್ರಾ ತಂಡಕ್ಕೆ ಸೇರ್ಪಡೆಯಾಗಿದ್ದಾರೆ.
ಟೀಮ್ ಇಂಡಿಯಾ ವಿರುದ್ಧ ಶ್ರೀಲಂಕಾ ಮೊದಲಿಗೆ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಪಾಲ್ಗೊಳ್ಳಲಿದೆ. ಮೊದಲ ಪಂದ್ಯ ಜನವರಿ 5 ರಂದು ಗುವಾಹಟಿಯಲ್ಲಿ ಎರಡನೇ ಪಂದ್ಯ ಇಂದೋರ್‌ನಲ್ಲಿ ಜನವರಿ 7 ರಂದು ಹಾಗೂ ಅಂತಿಮ ಟಿ20 ಪಂದ್ಯ ಪುಣೆಯಲ್ಲಿ ಜನವರಿ 10ರಂದು ನಡೆಯಲಿದೆ.
ಆಸ್ಟ್ರೇಲಿಯಾ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿ ಜನವರಿ 14 ರಂದು ಮುಂಬೈನಲ್ಲಿ ನಡೆಯಲಿದೆ. ಮಿಕ್ಕ ಎರಡು ಪಂದ್ಯಗಳು ಜನವರಿ 17 ಹಾಗೂ 19ರಂದು ನಿಗದಿಯಾಗಿದೆ.
ಟೀಮ್ ಇಂಡಿಯಾದ ಆರಂಭಿಕ ಆಟಗಾರ ಶಿಖರ್ ಧವನ್ ಕಳೆದ ಸರಣಿಯಲ್ಲಿ ಗಾಯದ ಕಾರಣಕ್ಕೆ ದೂರವಾಗಿದ್ದರು. ಧವನ್ ಬದಲಿಗೆ ಆರಂಭಿಕರಾಗಿ ಬಂದ ಕೆಎಲ್ ರಾಹುಲ್ ಅವರು ವೆಸ್ಟ್ ಇಂಡೀಸ್ ಸರಣಿಯಲ್ಲಿ ಅದ್ಭುತ ಆಟವನ್ನು ಪ್ರದರ್ಶಿಸಿದ್ದಾರೆ.
ಟೀಮ್ ಇಂಡಿಯಾದ ಪ್ರಮುಖ ವೇಗಿ ಜಸ್ಪ್ರಿತ್ ಬೂಮ್ರಾ ಗಾಯದಿಂದ ಗುಣಮುಖರಾಗಿದ್ದಾರೆ. ರೋಹಿತ್ ಶರ್ಮ ಹಾಗೂ ಮೊಹಮ್ಮದ್ ಶಮಿ ಅವರಿಗೆ ಟಿ20ಐ ಸರಣಿಯಿಂದ ವಿಶ್ರಾಂತಿ ನೀಡಲಾಗಿದೆ. ಆದರೆ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿ ಇಬ್ಬರು ತಂಡ ಸೇರಲಿದ್ದಾರೆ.
ಭಾರತ ತಂಡವಲ್ಲದೆ, ಪ್ರವಾಸಿ ತಂಡದ ವಿರುದ್ಧ 3 ಏಕದಿನ ಹಾಗೂ 2 ನಾಲ್ಕು ದಿನಗಳ ಪಂದ್ಯಗಳಿಗೆ ಭಾರತ ಎ ತಂಡವನ್ನು ಪ್ರಕಟಿಸಲಾಗಿದೆ.

ಶ್ರೀಲಂಕಾ ವಿರುದ್ಧದ ಟಿ20 ಸರಣಿಗೆ ಭಾರತ ತಂಡ
ವಿರಾಟ್ ಕೊಹ್ಲಿ(ನಾಯಕ), ಶಿಖರ್ ಧವನ್, ಕೆಎಲ್ ರಾಹುಲ್, ಶ್ರೇಯಸ್ ಅಯ್ಯರ್, ಮನೀಶ್ ಪಂಡೆ, ಸಂಜು ಸಾಮ್ಸನ್, ರಿಷಬ್ ಪಂತ್(ವಿಕೆಟ್ ಕೀಪರ್), ಶಿವಮ್ ದುಬೆ, ಯುಜುವೇಂದ್ರ ಚಾಹಲ್, ಕುಲದೀಪ್ ಯಾದವ್, ರವೀಂದ್ರ ಜಡೇಜ, ಶಾರ್ದೂಲ್ ಠಾಕೂರ್, ನವದೀಪ್ ಸೈನಿ, ಜಸ್ ಪ್ರೀತ್ ಬೂಮ್ರಾ, ವಾಷಿಂಗ್ಟನ್ ಸುಂದರ್.

ಆಸೀಸ್ ವಿರುದ್ಧದ ಏಕದಿನ ಕ್ರಿಕೆಟ್ ಸರಣಿಗೆ ಭಾರತ ತಂಡ
ವಿರಾಟ್ ಕೊಹ್ಲಿ(ನಾಯಕ), ರೋಹಿತ್ ಶರ್ಮ(ಉಪ ನಾಯಕ), ಶಿಖರ್ ಧವನ್, ಕೆಎಲ್ ರಾಹುಲ್, ಶ್ರೇಯಸ್ ಅಯ್ಯರ್, ಮನೀಶ್ ಪಾಂಡೆ, ಕೇದಾರ್ ಜಾಧವ್, ರಿಷಬ್ ಪಂತ್, ಶಿವಂ ದುಬೆ, ರವೀಂದ್ರ ಜಡೇಜ, ಯುಜುವೇಂದ್ರ ಚಾಹಲ್, ಕುಲದೀಪ್ ಯಾದವ್, ನವದೀಪ್ ಸೈನಿ, ಜಸ್ ಪ್ರೀತ್ ಬೂಮ್ರಾ, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ.

ಭಾರತ ಎ ತಂಡ ಏಕದಿನ ಸರಣಿಗೆ
ಪೃಥ್ವಿ ಶಾ, ಮಯಾಂಕ್ ಅಗರವಾಲ್, ಋತುರಾಜ್ ಗಾಯಕ್ವಾಡ್, ಶುಭ್ಮನ್ ಗಿಲ್(ನಾಯಕ), ಸೂರ್ಯಕುಮಾರ್ ಯಾದವ್, ಸಂಜು ಸಾಮ್ಸನ್, ಇಶಾನ್ ಕಿಶನ್(ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಕೃನಾಲ್ ಪಾಂಡ್ಯ, ಅಕ್ಷರ್ ಪಟೇಲ್, ರಾಹುಲ್ ಚಹಾರ್, ಸಂದೀಪ್ ವಾರಿಯರ್, ಇಶಾನ್ ಪೊರೆಲ್, ಖಲೀಲ್ ಅಹ್ಮದ್, ಮೊಹಮ್ಮದ್ ಸಿರಾಜ್.

ಮೊದಲ 4ದಿನಗಳ ಪಂದ್ಯಕ್ಕೆ ಭಾರತ ಎ ತಂಡ
ಪೃಥ್ವಿ ಶಾ, ಮಯಾಂಕ್ ಅಗರವಾಲ್, ಪ್ರಿಯಾಂಕ್ ಪಾಂಚಲ್, ಅಭಿಮನ್ಯು ಈಶ್ವರನ್, ಶುಭ್ಮನ್ ಗಿಲ್, ಹನುಮ ವಿಹಾರಿ(ನಾಯಕ), ಕೆಎಸ್ ಭರತ್ (ವಿಕೆಟ್ ಕೀಪರ್), ಶಿವಂ ದುಬೆ, ಶಬಾಜ್ ನದೀಂ, ರಾಹುಲ್ ಚಹಾರ್, ಸಂದೀಪ್ ವಾರಿಯರ್, ಅವೇಶ್ ಖಾನ್, ಮೊಹಮ್ಮದ್ ಸಿರಾಜ್, ಇಶಾನ್ ಪೊರೆಲ್, ಇಶಾನ್ ಕಿಶಾನ್.

ಎರಡನೇ 4 ದಿನಗಳ ಪಂದ್ಯಕ್ಕೆ ಭಾರತ ಎ ತಂಡ
ಪೃಥ್ವಿ ಶಾ, ಮಯಾಂಕ್ ಅಗರವಾಲ್,ಶುಭ್ಮನ್ ಗಿಲ್,ಚೇತೇಶ್ವರ್ ಪೂಜಾರಾ, ಅಜಿಂಕ್ಯ ರಹಾನೆ, ವೃದ್ಧಿಮಾನ್ ಸಹಾ(ವಿಕೆಟ್ ಕೀಪರ್), ಹನುಮ ವಿಹಾರಿ(ನಾಯಕ), ಕೆಎಸ್ ಭರತ್ (ವಿ.ಕೀ), ಶಿವಂ ದುಬೆ, ಆರ್ ಅಶ್ವಿನ್, ಶಬಾಜ್ ನದೀಂ, ಸಂದೀಪ್ ವಾರಿಯರ್, ಆವೇಶ್ ಖಾನ್, ಮೊಹಮ್ಮದ್ ಸಿರಾಜ್, ಇಶಾನ್ ಪೊರೆಲ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications