ವಿಂಡೀಸ್ ಪ್ರವಾಸಕ್ಕೆ ಟೀಮ್ ಇಂಡಿಯಾ ಆಯ್ಕೆ ಪ್ರಕ್ರಿಯೆ ಮುಂದೂಡಿಕೆ

ಹೊಸದಿಲ್ಲಿ, ಜುಲೈ 18: ಟೀಮ್ ಇಂಡಿಯಾದ ತಂಡ ಆಯ್ಕೆ ಸಭೆಯನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು ಕಾರ್ಯದರ್ಶಿ ನಡೆಸಿಕೊಡುವ ಸಂಪ್ರದಾಯಕ್ಕೆ ಕ್ರಿಕೆಟ್ ಆಡಳಿತ ಸಮಿತಿ (ಸಿಒಎ) ಕೊಳ್ಳಿಯಿಟ್ಟಿದ್ದು, ಆಯ್ಕೆ ಸಮಿತಿ ಮುಖ್ಯಸ್ಥ ಎಂ.ಎಸ್.ಕೆ ಪ್ರಸಾದ್‌ಗೆ ಈ ಕಾರ್ಯ ನಿರ್ವಹಿಸುವಂತೆ ಸೂಚಿಸಿದೆ. ಪರಿಣಾಮ ಶುಕ್ರವಾರ ನಡೆಯಬೇಕಿದ್ದ ವಿಂಡೀಸ್ ಪ್ರವಾಸಕ್ಕೆ ಭಾರತ ತಂಡದ ಆಯ್ಕೆ ಪ್ರಕ್ರಿಯೆಯನ್ನು ಒಂದು ದಿನ ಮುಂದೂಡಲ್ಪಟ್ಟಿದೆ.
ಈ ಸಂಗತಿಗೆ ಹತ್ತಿರವಿರುವ ಮೂಲಗಳು ಹೇಳಿರುವ ಪ್ರಕಾರ ಕ್ರಿಕೆಟ್ ಆಡಳಿತ ಸಮಿತಿಯ ಈ ನಿರ್ಧಾರದಿಂದಾಗಿ ಅಂತಿಮ ಕ್ಷಣದಲ್ಲಿ ಎಲ್ಲವನ್ನೂ ಬದಲಾವಣೆ ಮಾಡುವಂತಾಗಿದೆ. "ನಿಯಮಗಳಲ್ಲಿ ಬದಲಾವಣೆ ಆಗಿರುವುದರಿಂದ ಬಿಸಿಸಿಐನ ಕಾರ್ಯದರ್ಶಿ ತಂಡ ಆಯ್ಕೆ ಸಭೆಯನ್ನು ನಡೆಸಿಕೊಡುವುದಿಲ್ಲ. ಜೊತೆಗೆ ಪಾಲ್ಗೊಳ್ಳುವಂತೂ ಇಲ್ಲ. ಹೀಗಾಗಿ ತಂಡದ ಆಯ್ಕೆ ಪ್ರಕ್ರಿಯೆ ಕೊಂಚ ತಡವಾಗಲಿದೆ," ಎಂದು ಮೂಲಗಳು ಹೇಳಿವೆ.
ಕ್ರಿಕೆಟ್ ಆಡಳಿತ ಸಮಿತಿಯ ನೂತನ ನಿಯಮದ ಪ್ರಕಾರ ಬಿಸಿಸಿಐನ ಕಾರ್ಯದರ್ಶಿಯಾಗಲಿ ಅಥವಾ ಸಿಇಒ ಆಗಲಿ ತಂಡ ಆಯ್ಕೆ ಸಭೆಯಲ್ಲಿ ಪಾಲ್ಗೊಳ್ಳುವಂತಿಲ್ಲ. ಇದಕ್ಕೂ ಮುನ್ನ ಆಯ್ಕೆದಾರರು ಆಯ್ಕೆ ಪ್ರಕ್ರಿಯೆಯಲ್ಲಿ ಯಾವುದೇ ಚೆಲ್ಲಾಟ ನಡೆಸದಂತೆ ಕಣ್ಣಿಡಲು ಬಿಸಿಸಿಐನ ಕಾರ್ಯದರ್ಶಿ ಆಯ್ಕೆ ಪ್ರಕ್ರಿಯೆಯಲ್ಲಿ ಮೇಲ್ವಿಚಾರಣೆ ನಡೆಸುವುದು ಸಂಪ್ರದಾಯವಾಗಿತ್ತು. ಇದೀಗ ಆಯ್ಕೆ ಸಮಿತಿಯ ಮೇಲೆ ಕಣ್ಣಿಡುವ ಅಗತ್ಯವಿಲ್ಲ ಎಂದು ಸಿಒಎ ಸ್ಪಷ್ಟಪಡಿಸಿದೆ.
"ಬಿಸಿಸಿಐನ ನೂತನ ಸಂವಿಧಾನ ರೂಪುಗೊಂಡ ಬಳಿಕವೂ ಕಾರ್ಯದರ್ಶಿಯೇ ತಂಡ ಆಯ್ಕೆ ಸಬೆಯನ್ನು ನಡೆಸಿಕೊಡುವ ಸಂಪ್ರದಾಯ ಮುಂದುವರಿದಿತ್ತು. ಈ ನಿಟ್ಟಿನಲ್ಲಿ ತಂಡ ಆಯ್ಕೆ ಪ್ರಕ್ರಿಯೆಯಲ್ಲಿ ಆಯ್ಕೆ ಸಮಿತಿಯು ಆಟಗಾರರ ಬದಲಾವಣೆ ಅಥವಾ ಸೇರ್ಪಡೆ ಸಲುವಾಗಿ ಕಾರ್ಯದರ್ಶಿಯ ಅಪ್ಪಣೆಗಾಗಿ ಇ-ಮೇಲ್ ಕಳುಹಿಸಬೇಕಿತ್ತು. ಇದೀಗ ಈ ರೀತಿ ಅನುಮತಿ ಕೋರುವ ಯಾವುದೇ ಅಗತ್ಯವಿಲ್ಲ," ಎಂದು ವಿನೋದ್ ರಾಯ್ ಸಾರಥ್ಯದ ಸಿಒಎ ಘೋಷಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications