IND vs AFG: ಅಫ್ಘಾನಿಸ್ತಾನ್ ವಿರುದ್ಧ ಭಾರತಕ್ಕೆ ಇನಿಂಗ್ಸ್ ಹಾಗೂ 300 ರನ್ ಜಯ
ನ್ಯೂ ಚಂಡೀಗಢ: ಪ್ರವಾಸಿ ಅಫ್ಘಾನಿಸ್ತಾನ್ ವಿರುದ್ಧದ ಏಕೈಕ ಟೆಸ್ಟ್ ಪಂದ್ಯದಲ್ಲಿ ಭಾರತ ಭರ್ಜರಿ ಪ್ರದರ್ಶನ ನೀಡಿ ಇನಿಂಗ್ಸ್ ಹಾಗೂ 300 ರನ್‌ಗಳ ಜಯ ಸಾಧಿಸಿತು. ಟೆಸ್ಟ್ ಪಂದ್ಯ ಎರಡುವರೆ ದಿನಗಳಲ್ಲೇ ಕೊನೆಗೊಂಡಿತು. ಭಾರತ ಮೂರನೇ ದಿನದಂದು 14 ವಿಕೆಟ್ ಪಡೆದು ಅಬ್ಬರಿಸಿದೆ. ಎರಡನೇ ಇನಿಂಗ್ಸ್‌ನಲ್ಲಿ ಕುಲ್‌ದೀಪ್ ಯಾದವ್ ಹಾಗೂ ವಾಷಿಂಗ್ಟನ್ ಸುಂದರ್ ಸ್ಪಿನ್ ಮೋಡಿಗೆ ಅಫ್ಘಾನಿಸ್ತಾನ್ ಮಕಾಡೆ ಮಲಗಿದೆ.
ಟೆಸ್ಟ್ ಪಂದ್ಯದ ಮೂರನೇ ದಿನದಂದು ಅಫ್ಘಾನಿಸ್ತಾನ್ ಮೊದಲ ಇನಿಂಗ್ಸ್‌ನಲ್ಲಿ 5 ವಿಕೆಟ್‌ಗೆ 113 ರನ್‌ಗಳಿಂದ ಆಟ ಮುಂದುವರೆಸಿತು. ಆದರೆ ಭೋಜನ ವಿರಾಮಕ್ಕೂ ಮುನ್ನ ಅಫ್ಘಾನಿಸ್ತಾನ್ ಮೊದಲ ಇನಿಂಗ್ಸ್‌ನಲ್ಲಿ 152 ರನ್‌ಗಳಿಗೆ ಆಲೌಟ್ ಆಯಿತು. ಅಫ್ಘಾನಿಸ್ತಾನಕ್ಕೆ ಫಾಲೋ ಆನ್ ಹೇರಿದ ಭಾರತ 112 ರನ್‌ಗಳಿಗೆ ಕಟ್ಟಿ ಹಾಕಿ ಅಬ್ಬರಿಸಿತು.

ಮೊದಲ ಇನಿಂಗ್ಸ್‌ನಲ್ಲಿ ಮಾನವ್ ಸುತಾರ್ ಪ್ರವಾಸಿ ಅಫ್ಘಾನಿಸ್ತಾನ್ ತಂಡವನ್ನು ಬಹುವಾಗಿ ಕಾಡಿದರು. ಮಾನವ್ ತಮ್ಮ ಪದಾರ್ಪಣೆ ಪಂದ್ಯದಲ್ಲಿ ಅಮೋಘ ಬೌಲಿಂಗ್ ನಡೆಸಿ ಗಮನ ಸೆಳೆದರು. ಚೊಚ್ಚಲ ಪಂದ್ಯದಲ್ಲೇ 5 ಅಥವಾ ಅದಕ್ಕಿಂತ ಹೆಚ್ಚು ವಿಕೆಟ್ ಪಡೆದ ಮಾನವ್ ಸುತಾರ್ ಅಬ್ಬರಿಸಿದರು. ಇವರ ಪಿರ್ಕಿಗೆ ಉತ್ತರ ನೀಡುವಲ್ಲಿ ಅಫ್ಘಾನಿಸ್ತಾನ ಬ್ಯಾಟರ್‌ಗಳು ವಿಫಲರಾದರು. ಮೊದಲ ಇನಿಂಗ್ಸ್‌ನಲ್ಲಿ ಸುತಾರ್ 33 ರನ್ ನೀಡಿ 6 ವಿಕೆಟ್ ಪಡೆದರೆ, ಪ್ರಸಿದ್ಧ್ ಕೃಷ್ಣಾ 37 ರನ್ ನೀಡಿ 3 ವಿಕೆಟ್ ಕಬಳಿಸಿದರು. ಮೊದಲ ಇನಿಂಗ್ಸ್‌ನಲ್ಲಿ ಅಫ್ಘಾನಿಸ್ತಾನ್ 152 ರನ್‌ಗಳಿಗೆ ಆಲೌಟ್ ಆಯಿತು.
ಸ್ಪಿನ್ ಬಲೆಗೆ ಬಿದ್ದ ಅಫ್ಘಾನ್
412 ರನ್‌ಗಳ ಹಿನ್ನಡೆ ಅನುಭವಿಸುತ್ತಿದ್ದ ಅಫ್ಘಾನಿಸ್ತಾನ್ ತಂಡಕ್ಕೆ ಭಾರತ ಫಾಲೋ ಆನ್ ಹೇರಿತು. ಎರಡನೇ ಇನಿಂಗ್ಸ್‌ನಲ್ಲೂ ಅಫ್ಘಾನಿಸ್ತಾನ್ ಬ್ಯಾಟರ್‌ಗಳು ನೆಲಕಚ್ಚಿ ಬ್ಯಾಟ್ ಮಾಡುವಲ್ಲಿ ವಿಫಲರಾದರು. ಸೇದಿಕುಲ್ಲಾ ಅಟಲ್ 42, ರಹಮಾನುಲ್ಲಾ ಗುರ್ಬಾಜ್ 24, ರಹಮತ್ ಶಾ 13 ರನ್ ಗಳಿಸಿದ್ದು ಬಿಟ್ಟರೆ ಉಳಿದ ಬ್ಯಾಟರ್‌ಗಳು ಸಿಂಗಲ್ ಡಿಜಿಟ್‌ನಲ್ಲಿ ಆಟ ಮುಗಿಸಿದರು. ಅಫ್ಘಾನಿಸ್ತಾನ್ ಎರಡನೇ ಇನಿಂಗ್ಸ್‌ನಲ್ಲಿ 112 ರನ್‌ಗೆ ಆಲೌಟ್ ಆಯಿತು. ಶರಫುದ್ದೀನ್ ಅಶ್ರಫ್ ಗಾಯ ಗೊಂಡಿದ್ದರಿಂದ ಎರಡನೇ ಇನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡಲಿಲ್ಲ.

ಎರಡನೇ ಇನಿಂಗ್ಸ್‌ನಲ್ಲಿ ಭಾರತದ ಪರ ಸ್ಪಿನ್ ಬೌಲರ್‌ಗಳು ಕಮಾಲ್ ಬೌಲಿಂಗ್ ಪ್ರದರ್ಶನ ನೀಡಿದರು. ಮೊದಲ ಇನಿಂಗ್ಸ್‌ನಲ್ಲಿ ಕೇವಲ 1 ವಿಕೆಟ್ ಪಡೆದಿದ್ದ ವಾಷಿಂಗ್ಟನ್ ಸುಂದರ್, ಎರಡನೇ ಇನಿಂಗ್ಸ್‌ನಲ್ಲಿ 4 ವಿಕೆಟ್ ಉರುಳಿಸಿದರು. ಇನ್ನು ಭರವಸೆಯ ಸ್ಪಿನ್ ಬೌಲರ್ ಕುಲ್‌ದೀಪ್ ಯಾದವ್ 3 ವಿಕೆಟ್ ಪಡೆದು ಮಿಂಚಿದರು. ಎಡಗೈ ಸ್ಪಿನ್ ಬೌಲರ್ ಮಾನವ್ ಸುತಾರ್, ಮೊಹಮ್ಮದ್ ಸಿರಾಜ್ ತಲಾ ಒಂದು ವಿಕೆಟ್ ಪಡೆದರು.
ಭಾರತದ ದೊಡ್ಡ ಸಾಧನೆ
ಭಾರತ ತಂಡವು ತನ್ನ ಅತಿದೊಡ್ಡ ಟೆಸ್ಟ್ ಗೆಲುವು ದಾಖಲಿಸಿದೆ. ಇದಕ್ಕೂ ಮೊದಲು, ಭಾರತವು 2018 ರಲ್ಲಿ ವೆಸ್ಟ್ ಇಂಡೀಸ್ ಅನ್ನು ಇನ್ನಿಂಗ್ಸ್ ಮತ್ತು 272 ರನ್‌ಗಳಿಂದ ಸೋಲಿಸಿತು. ಭಾರತವು ಅಫ್ಘಾನಿಸ್ತಾನವನ್ನು ಇನ್ನಿಂಗ್ಸ್ ಮತ್ತು 300 ರನ್‌ಗಳಿಂದ ಸೋಲಿಸಿ ದೊಡ್ಡ ದಾಖಲೆ ಬರೆದಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications