For Quick Alerts
ALLOW NOTIFICATIONS  
For Daily Alerts
 

FIH Hockey Men's Junior World Cup: ಭಾರತಕ್ಕೆ ಭರ್ಜರಿ ಜಯ

ಚೆನ್ನೈ: ಎಫ್‌ಐಎಚ್ ಪುರುಷರ ಜೂನಿಯರ್ ಹಾಕಿ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಭರ್ಜರಿ ಜಯ ಸಾಧಿಸಿದೆ. ಮಂಗಳವಾರ ನಡೆದ ಪಂದ್ಯದಲ್ಲಿ ಭಾರತ 5-0 ಗೋಲುಗಳಿಂದ ಸ್ವಿಟ್ಜರ್‌ಲ್ಯಾಂಡ್‌ ತಂಡವನ್ನು ಮಣಿಸಿತು. ಈ ಮೂಲಕ ಆತಿಥೇಯ ಭಾರತ ಬಿ ಗುಂಪಿನಲ್ಲಿ ಆಡಿದ ಮೂರು ಪಂದ್ಯಗಳಲ್ಲಿ 3 ಗೆಲುವು ದಾಖಲಿಸಿದ್ದು, 9 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದೆ.

ಭಾರತ ತಂಡದ ಪ್ರಸಕ್ತ ಟೂರ್ನಿಯಲ್ಲಿ ಅಮೋಘ ಪ್ರದರ್ಶನ ನೀಡಿತು. ಮೊದಲಾವಧಿಯ ಆರಂಭದಲ್ಲಿ ಭಾರತ ಅಮೋಘ ಪ್ರದರ್ಶನ ನೀಡಿ ಅಬ್ಬರಿಸಿತು. ಈ ವೇಳೆ ಮೊದಲ ನಿಮಿಷದಲ್ಲಿ ಚೆಂಡಿನ ಮೇಲೆ ಹಿಡಿತ ಸಾಧಿಸಿದ ಭಾರತದ ಮನ್ಮೀತ್ ಸಿಂಗ್ ಭರ್ಜರಿ ಗೋಲು ಬಾರಿಸುವ ಮೂಲಕ ತಂಡಕ್ಕೆ ಮುನ್ನಡೆ ತಂದುಕೊಟ್ಟರು. ಈ ವೇಳೆ ಸಿಕ್ಕ ಅವಕಾಶವನ್ನು ಎರಡೂ ಕೈಗಳಿಂದ ಬಳಸಿಕೊಂಡ ಮನ್ಮೀತ್ ಎದುರಾಳಿ ಗೋಲಿಯನ್ನು ವಂಚಿಸುವಲ್ಲಿ ಸಫಲರಾದರು. ಇದೇ ಅವಧಿಯ 10ನೇ ನಿಮಿಷದಲ್ಲಿ ಇವರು ಮತ್ತೊಂದು ಗೋಲು ಬಾರಿಸಿ ಅಂತರವನ್ನು ಹೆಚ್ಚಿಸಿದರು.

India Thrashes Switzerland 5-0 in FIH Junior Hockey World Cup Tops Group B

ಮೊದಲಾವಧಿಯ 12ನೇ ನಿಮಿಷದಲ್ಲಿ ಶಾರದಾ ನಂದ್ ತಿವಾರಿ ಗೋಲು ಬಾರಿಸಿ ಅಂತರವನ್ನು 3-0ಗೆ ಹೆಚ್ಚಿಸಿದರು. ಈ ಅವಧಿಯಲ್ಲಿ ಭಾರತ 3-0 ಗೋಲುಗಳಿಂದ ಮುನ್ನಡೆ ಸಾಧಿಸಿತ್ತು. ಎರಡನೇ ಅವಧಿಯ ಕೊನೆಯ ನಿಮಿಷದಲ್ಲಿ ಅರ್ಷದೀಪ್‌ ಸಿಂಗ್ ತಮ್ಮ ಮೊದಲ ಗೋಲು ಬಾರಿಸಿ ತಂಡಕ್ಕೆ ಆಧಾರವಾದರು. ಇವರು ಬಾರಿಸಿದ ಗೋಲಿನ ಪರಿಣಾಮ ಭಾರತ 4-0 ಗೋಲುಗಳ ಅಂತರವನ್ನು ಕಾಯ್ದುಕೊಂಡಿತು. ಮೂರನೇ ಅವಧಿಯ ಆಟದಲ್ಲಿ ಉಭಯ ತಂಡಗಳು ಗೋಲು ಬಾರಿಸುವಲ್ಲಿ ವಿಫಲವಾದವು.

ಕೊನೆಯ ಕ್ಷಣದ ಮಿಂಚು

ಕೊನೆಯ ಅವಧಿಯಲ್ಲಿ ಭಾರತದ ಪರ ತಿವಾರಿ ಶಾರದಾ ನಂದ್ ಮತ್ತೊಮ್ಮೆ ಗೋಲು ಪೆಟ್ಟಿಗೆಯಲ್ಲಿ ಚೆಂಡನ್ನು ನೂಕುವಲ್ಲಿ ಸಫಲರಾದರು. ಇವರು ಪಂದ್ಯ ಮುಗಿಯುವ 7 ನಿಮಿಷ ಮುಂಚೆಯೇ ಗೋಲು ಬಾರಿಸಿದ್ದರಿಂದ ಭಾರತದ ಗೆಲುವಿನ ಅಂತರ 5-0ಗೆ ಏರಿಕೆ ಆಯಿತು. ಕೊನೆಯ ಕ್ಷಣದ ವರೆಗೂ ಗೋಲು ಬಾರಿಸಿ ಅಂತರವನ್ನು ಕಡಿಮೆ ಮಾಡುವ ಸ್ವಿಟ್ಜರ್‌ಲ್ಯಾಂಡ್‌ ಆಸೆ ಫಲಿಸಲಿಲ್ಲ.

Story first published: Tuesday, December 2, 2025, 23:24 [IST]
Other articles published on Dec 2, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+