Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಆಸ್ಟ್ರೇಲಿಯಾ ವಿರುದ್ಧ 3 ಪಂದ್ಯಗಳ ಏಕದಿನ ಸರಣಿಗೆ ಭಾರತದ ಆತಿಥ್ಯ

India to host Australia in a three-match ODI series in January 2020

ನವದೆಹಲಿ, ಏಪ್ರಿಲ್ 12: ಮುಂದಿನ ವರ್ಷ ಜನವರಿಯಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಏಕದಿನ ಸರಣಿಗಾಗಿ ಮತ್ತೆ ಮುಖಾಮುಖಿಯಾಗುತ್ತಿದೆ. ಮೂರು ಪಂದ್ಯಗಳನ್ನೊಳಗೊಂಡ ಈ ಏಕದಿನ ಸರಣಿಯ ಆತಿಥ್ಯವನ್ನು ಟೀಮ್ ಇಂಡಿಯಾ ವಹಿಸಿಕೊಳ್ಳುತ್ತಿದೆ.

ಇತ್ತಂಡಗಳ ಈ ಸರಣಿ ಐಸಿಸಿ ಫ್ಯೂಚರ್ ಟೂರ್ ಪ್ರೋಗ್ರಾಮ್‌ಗೆ ಅನುಸಾರವಾಗಿ ಜನವರಿ 2020ಕ್ಕೆ ನಡೆಯಲಿದೆ. ಹೀಗಾಗಿ ಸರಣಿಯಲ್ಲಿ ಪಾಲ್ಗೊಳ್ಳುವ ಮೂಲಕ ಆಸ್ಟ್ರೇಲಿಯಾವು ತನ್ನ ಭಾರತ ಪ್ರವಾಸ ಸರಣಿಗಳನ್ನು ಸಂಪೂರ್ಣಗೊಳಿಸಿಕೊಳ್ಳಬೇಕಿದೆ.

ಮಾಹಿತಿಯ ಪ್ರಕಾರ, ಕ್ರಿಕೆಟ್ ಆಸ್ಟ್ರೇಲಿಯಾವು ಯೋಜಿತ ಈ ಏಕದಿನ ಸರಣಿಯನ್ನು 2020ರ ವರ್ಷಾಂತ್ಯಕ್ಕೆ ನಡೆಸಲು ಬಿಸಿಸಿಐಯನ್ನು ಕೋರಿಕೊಂಡಿತ್ತು. ಆದರೆ ಕ್ರಿಕೆಟ್ ಆಸ್ಟ್ರೇಲಿಯಾದ ಕೋರಿಕೆಯನ್ನು ಬಿಸಿಸಿಐ ನಿರಾಕರಿಸಿದೆ ಎಂದು ತಿಳಿದುಬಂದಿದೆ.

ಭಾರತ ವಿರುದ್ಧದ ಏಕದಿನ ಸರಣಿ ಖಾತರಿಗೊಂಡಿರುವುದರಿಂದ ನ್ಯೂಜಿಲ್ಯಾಂಡ್ ವಿರುದ್ಧ ತವರಿನಲ್ಲಿ ನಡೆಯಲಿದ್ದ ಏಕದಿನ ಸರಣಿಯನ್ನು ಕ್ರಿಕೆಟ್ ಆಸ್ಟ್ರೇಲಿಯಾ ಕೈ ಬಿಡಬೇಕಾದ ಇಕ್ಕಟ್ಟಿಗೆ ಸಿಲುಕಿದೆ ಎಂಬ ಮಾಹಿತಿ ಮೂಲಗಳಿಂದ ಲಭ್ಯವಾಗಿದೆ.

Story first published: Friday, April 12, 2019, 17:43 [IST]
Other articles published on Apr 12, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+