ಆಸ್ಟ್ರೇಲಿಯಾದಲ್ಲಿ 2 ವಾರಗಳ ಕ್ವಾರಂಟೈನ್‌ಗೆ ಒಳಗಾಗಲಿದೆ ಟೀಮ್ ಇಂಡಿಯಾ

ಮೆಲ್ಬರ್ನ್, ಜುಲೈ 21: ಈ ವರ್ಷದಾಂತ್ಯದಲ್ಲಿ ವಿರಾಟ್ ಕೊಹ್ಲಿ ಪಡೆ ಆಸ್ಟ್ರೇಲಿಯಾಕ್ಕೆ ಪ್ರವಾಸ ಹೊರಡಲಿದೆ. ಕ್ರಿಕೆಟ್ ಜಗತ್ತು ಅತೀ ಕುತೂಹಲದಿಂದ ಕಾಯುತ್ತಿರುವ ಪ್ರವಾಸ ಸರಣಿಯಿದು. ಈ ವೇಳೆ ಆಸ್ಟ್ರೇಲಿಯಾ ತಲುಪಿದ ಕೂಡಲೇ ಟೀಮ್ ಇಂಡಿಯಾ 2 ವಾರಗಳ ಕ್ವಾರಂಟೈನ್‌ಗೆ ಒಳಗಾಗಲಿದೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾದ ಹಂಗಾಮಿ ಮುಖ್ಯಸ್ಥ ನಿಕ್ ಹಾಕ್ಲೆ ಹೇಳಿದ್ದಾರೆ.
ಕ್ವಾರಂಟೈನ್ ಅವಧಿಯಲ್ಲಿರುವಾಗ ಆಟಗಾರರಿಗೆ ಮತ್ತು ಬೆಂಬಲ ಸಿಬ್ಬಂದಿಗೆ ಅತ್ಯುತ್ತಮ ಸೌಲಭ್ಯಗಳನ್ನು ನೀಡಲಾಗುತ್ತದೆ ಎಂದು 2020ರ ಟಿ20 ವಿಶ್ವಕಪ್ ಮುಂದೂಡಿಕೆಯನ್ನು ಘೋಷಿಸುವಾಗ ನಿಕ್ ಹಾಕ್ಲೆ ಹೇಳಿದ್ದರು. ಇದೇ ಮಾತನ್ನು ಹಾಕ್ಲೆ ಪುನರುಚ್ಛರಿಸಿದ್ದಾರೆ.
ಇಸ್‌ಪಿಎನ್ ಕ್ರಿಕ್‌ಇನ್ಫೋ ಜೊತೆ ಮಾತನಾಡಿದ ಹಾಕ್ಲೆ, 'ಇಲ್ಲಿಗೆ ಬರುವ ತಂಡಕ್ಕೆ ಎರಡು ವಾರಗಳ ಕ್ವಾರಂಟೈನ್ ಬೇಕಾದಷ್ಟು ಸಾಕು. ಕ್ವಾರಂಟೈನ್ ವೇಳೆ ಆಟಗಾರರು ಮತ್ತು ಬೆಂಬಲ ಸಿಬ್ಬಂದಿಗೆ ಅತ್ಯುತ್ತಮ ಸೌಲಭ್ಯಗಳು ದೊರೆಯಲಿದೆ ಎಂದು ನಾವು ಭರವಸೆ ನೀಡುತ್ತಿದ್ದೇವೆ,' ಎಂದಿದ್ದಾರೆ.
ಆಸ್ಟ್ರೇಲಿಯಾಕ್ಕೆ ಭಾರತದ ಪ್ರವಾಸ ಸರಣಿಗಳು ಅಕ್ಟೋಬರ್ 11ರಿಂದ ಟಿ20 ಸರಣಿಯೊಂದಿಗೆ ಆರಂಭಗೊಳ್ಳಲಿದೆ. ಪ್ರವಾಸ ಸರಣಿಯು 3 ಟಿ20ಐ ಪಂದ್ಯಗಳು, 4 ಟೆಸ್ಟ್ ಪಂದ್ಯಗಳು ಮತ್ತು 3 ಏಕದಿನ ಪಂದ್ಯಗಳನ್ನು ಒಳಗೊಂಡಿರಲಿದೆ. ಕಳೆದ ಬಾರಿ ಆಸ್ಟ್ರೇಲಿಯಾಕ್ಕೆ ಪ್ರವಾಸ ಹೋಗಿದ್ದ ಭಾರತ ಅಲ್ಲಿ ಚೊಚ್ಚಲ ಬಾರಿ ಟೆಸ್ಟ್ ಸರಣಿ ಗೆದ್ದು ಇತಿಹಾಸ ನಿರ್ಮಿಸಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications