For Quick Alerts
ALLOW NOTIFICATIONS  
For Daily Alerts
 

ಆಸ್ಟ್ರೇಲಿಯಾಕ್ಕೆ ಭಾರತ: ಕುತೂಹಲಕಾರಿ ಸರಣಿಗಳ ಸಂಪೂರ್ಣ ವೇಳಾಪಟ್ಟಿ

India Tour of Australia 2020-21: Full Schedule

ಬೆಂಗಳೂರು: ಈ ವರ್ಷದ ಕೊನೆಯಲ್ಲಿ ವಿರಾಟ್ ಕೊಹ್ಲಿ ಪಡೆ ಆಸ್ಟ್ರೇಲಿಯಾಕ್ಕೆ ಪ್ರವಾಸ ಕೈಗೊಳ್ಳಲಿದೆ. ಆತಿಥೇಯ ಆಸ್ಟ್ರೇಲಿಯಾ ಮತ್ತು ಭಾರತ ನಡುವಿನ ಪ್ರವಾಸ ಸರಣಿಯು 3 ಟಿ20ಐ ಪಂದ್ಯಗಳು, 4 ಟೆಸ್ಟ್ ಪಂದ್ಯಗಳು ಮತ್ತು 3 ಏಕದಿನ ಪಂದ್ಯಗಳನ್ನು ಒಳಗೊಂಡಿರಲಿದೆ. ಇದರಲ್ಲಿ ಬಾರ್ಡರ್ ಗವಾಸ್ಕರ್ ಟ್ರೋಫಿ (ಭಾರತ-ಆಸ್ಟ್ರೇಲಿಯಾ ಟೆಸ್ಟ್ ಸರಣಿಗೆ ಹೀಗೆ ಕರೆಯಲಾಗುತ್ತದೆ) ಹೆಚ್ಚು ಆಕರ್ಷಣೀಯವೆನಿಸಲಿದೆ. ಕಳೆದ ವರ್ಷ ಟೀಮ್ ಇಂಡಿಯಾ ಚೊಚ್ಚಲ ಬಾರಿಗೆ ಈ ಟ್ರೋಫಿ ಜಯಿಸಿ ಇತಿಹಾಸ ನಿರ್ಮಿಸಿತ್ತು. ಆದರೆ ಕಳೆದ ವರ್ಷ ಕಾಂಗರೂ ಪಡೆಯಲ್ಲಿ ಸ್ಟೀವ್ ಸ್ಮಿತ್, ಡೇವಿಡ್ ವಾರ್ನರ್ ಇರಲಿಲ್ಲ. ಇಬ್ಬರೂ ಚೆಂಡು ವಿರೂಪ ಪ್ರಕರಣದಲ್ಲಿ ವರ್ಷದ ನಿಷೇಧಕ್ಕೆ ಗುರಿಯಾಗಿದ್ದರು.

ಕೊರೊನಾ ಹತೋಟಿಗೆ ಬಂದರೆ ವರ್ಷದ ಕೊನೆಯಲ್ಲಿ ಭಾರತ-ಆಸ್ಟ್ರೇಲಿಯಾ ಜಿದ್ದಾಜಿದ್ದಿ ಪಂದ್ಯಗಳನ್ನು ಕ್ರಿಕೆಟ್‌ ಅಭಿಮಾನಿಗಳು ಕಣ್ತುಂಬಿಕೊಳ್ಳಬಹುದಾಗಿದೆ. ಇತ್ತಂಡಗಳ ಕಾದಾಟ ಟಿ20 ಸರಣಿಯೊಂದಿಗೆ ಅಕ್ಟೋಬರ್‌ನಲ್ಲಿ ಚಾಲನೆಗೊಳ್ಳಲಿದೆ. ಈ ವರ್ಷ ಆಸ್ಟ್ರೇಲಿಯಾ ತಂಡದಲ್ಲಿ ಡೇವಿಡ್ ವಾರ್ನರ್ ಮತ್ತು ಸ್ಟೀವ್ ಸ್ಮಿತ್ ಕೂಡ ಇರಲಿರುವುದರಿಂದ ಪ್ರವಾಸ ಸರಣಿ ಕುತೂಹಲ ಮೂಡಿಸಿದೆ.

ಭಾರತ vs ಆಸ್ಟ್ರೇಲಿಯಾ ಸರಣಿಗಳ ಮಧ್ಯೆ ಅಫ್ಘಾನಿಸ್ತಾನ ತಂಡ ಕೂಡ ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಪಂದ್ಯವನ್ನಾಡಲಿದೆ. ಈ ಎಲ್ಲಾ ಪಂದ್ಯಗಳ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ.

3 ಪಂದ್ಯಗಳ ಟಿ20ಐ ಸರಣಿ

3 ಪಂದ್ಯಗಳ ಟಿ20ಐ ಸರಣಿ

* 1ನೇ ಟಿ20ಐ - ಅಕ್ಟೋಬರ್ 11, ಗಬ್ಬಾ ಸ್ಟೇಡಿಯಂ, ಬ್ರಿಸ್ಬೇನ್, 1:20 PM
* 2ನೇ ಟಿ20ಐ - ಅಕ್ಟೋಬರ್ 14, ಮನುಕಾ ಓವಲ್, ಕ್ಯಾನ್ಬೆರಾ, 1:40 PM
* 3ನೇ ಟಿ20ಐ - ಅಕ್ಟೋಬರ್ 17, ಅಡಿಲೇಡ್ ಓವಲ್, ಅಡಿಲೇಡ್, 9:00 AM

ಅಫ್ಘಾನ್ vs ಆಸೀನ್ ಟೆಸ್ಟ್

ಅಫ್ಘಾನ್ vs ಆಸೀನ್ ಟೆಸ್ಟ್

ಆಸ್ಟ್ರೇಲಿಯಾಕ್ಕೆ ಪ್ರವಾಸ ಬರಲಿರುವ ಅಫ್ಘಾನಿಸ್ತಾನ ಕ್ರಿಕೆಟ್ ತಂಡ ಆತಿಥೇಯರ ವಿರುದ್ಧ ಏಕಮಾತ್ರ ಟೆಸ್ಟ್ ಪಂದ್ಯವನ್ನಾಡಲಿದೆ. ಇದು ಸೌಹಾರ್ದ ಅಥವಾ ಪ್ರದರ್ಶನ ಪಂದ್ಯವಾಗಿರಲಿದೆ. ಈ ಪಂದ್ಯ ನವೆಂಬರ್ 21-25ರ ವರೆಗೆ ಪರ್ತ್ ಸ್ಟೇಡಿಯಂನಲ್ಲಿ ನಡೆಯಲಿದೆ.

4 ಪಂದ್ಯಗಳ ಟೆಸ್ಟ್ ಸರಣಿ

4 ಪಂದ್ಯಗಳ ಟೆಸ್ಟ್ ಸರಣಿ

* 1ನೇ ಟೆಸ್ಟ್: ಡಿಸೆಂಬರ್ 3-7, ಗಬ್ಬಾ ಕ್ರೀಡಾಂಗಣ, ಬ್ರಿಸ್ಬೇನ್, 5:30 AM.
*2ನೇ ಟೆಸ್ಟ್ (ಡೇ-ನೈಟ್ ಅಥವಾ ಪಿಂಕ್‌ ಬಾಲ್ ಟೆಸ್ಟ್): ಡಿಸೆಂಬರ್ 11-15, ಅಡಿಲೇಡ್ ಓವಲ್, ಅಡಿಲೇಡ್, 9:00 AM
*3ನೇ ಟೆಸ್ಟ್: ಡಿಸೆಂಬರ್ 26-30, ಮೆಲ್ಬರ್ನ್ ಕ್ರಿಕೆಟ್ ಮೈದಾನ, ಮೆಲ್ಬರ್ನ್, 5:00 AM
*4ನೇ ಟೆಸ್ಟ್: ಜನವರಿ 3-7, ಸಿಡ್ನಿ ಕ್ರಿಕೆಟ್ ಮೈದಾನ, ಸಿಡ್ನಿ, 5:00 AM

3 ಪಂದ್ಯಗಳ ಏಕದಿನ ಸರಣಿ

3 ಪಂದ್ಯಗಳ ಏಕದಿನ ಸರಣಿ

* 1ನೇ ಏಕದಿನ - ಜನವರಿ 12 - ಪರ್ತ್ ಕ್ರೀಡಾಂಗಣ, ಪರ್ತ್, 8:00 AM
*2ನೇ ಏಕದಿನ - ಜನವರಿ 15 - ಮೆಲ್ಬರ್ನ್ ಕ್ರಿಕೆಟ್ ಗ್ರೌಂಡ್, ಮೆಲ್ಬರ್ನ್, 7:50 AM
*3ನೇ ಏಕದಿನ - ಜನವರಿ 17 - ಸಿಡ್ನಿ ಕ್ರಿಕೆಟ್ ಗ್ರೌಂಡ್, ಸಿಡ್ನಿ, 7:50 AM

Story first published: Tuesday, June 30, 2020, 10:18 [IST]
Other articles published on Jun 30, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+