ಆಸ್ಟ್ರೇಲಿಯಾ ಸರಣಿ: ಕೊಹ್ಲಿಗಾಗಿ ವೇಳಾಪಟ್ಟಿ ಬದಲಿಸಲು ಭಾರತದ ಮನವಿ
ಐಪಿಎಲ್ ಟೂರ್ನಿ ನವೆಂಬರ್‌ನಲ್ಲಿ ಅಂತ್ಯಗೊಳ್ಳುತ್ತಿದ್ದಂತೆಯೇ ಅಂತಾರಾಷ್ಟ್ರೀಯ ಕ್ರಿಕೆಟ್ ಟೂರ್ನಿಗಳು ಮತ್ತೆ ಚುರುಕು ಪಡೆಯುವ ನಿರೀಕ್ಷೆಯಿದೆ. ಕೋವಿಡ್ ಪಿಡುಗಿನ ಕಾರಣದಿಂದ ಭಾರತ ಸೇರಿದಂತೆ ಅನೇಕ ದೇಶಗಳು ಸುದೀರ್ಘ ಕಾಲದಿಂದ ಯಾವುದೇ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿಲ್ಲ. ಐಪಿಎಲ್ ಬಳಿಕ ಭಾರತವು ಮೊದಲ ಅಂತಾರಾಷ್ಟ್ರೀಯ ಸರಣಿ ಆಡಲು ಆಸ್ಟ್ರೇಲಿಯಾಕ್ಕೆ ತೆರಳಲಿದೆ.
ನವೆಂಬರ್ ಕೊನೆಯಲ್ಲಿ ಆಸ್ಟ್ರೇಲಿಯಾಕ್ಕೆ ತೆರಳಲಿರುವ ವಿರಾಟ್ ಕೊಹ್ಲಿ ನೇತೃತ್ವದ ತಂಡ ಮೊದಲು ಟೆಸ್ಟ್ ಸರಣಿಯನ್ನು ಆಡಲಿದೆ. ಡಿ. 3ರಿಂದ ಟೆಸ್ಟ್ ಸರಣಿ ಆರಂಭವಾಗಲಿದೆ. ಒಟ್ಟು ನಾಲ್ಕು ಟೆಸ್ಟ್, ಮೂರು ಏಕದಿನ ಪಂದ್ಯಗಳು ಮತ್ತು ಮೂರು ಟಿ20 ಪಂದ್ಯಗಳು ನಡೆಯಲಿವೆ. ಟೆಸ್ಟ್ ಹಾಗೂ ಏಕದಿನ ಪಂದ್ಯಗಳ ವೇಳಾಪಟ್ಟಿಯನ್ನು ಪ್ರಕಟಿಸಿದ್ದರೂ ಅದು ಅಧಿಕೃತವಲ್ಲ. ಹೀಗಾಹಿ, ಭಾರತವು ಈ ವೇಳಾಪಟ್ಟಿಯಲ್ಲಿ ಕೊಂಚ ಬದಲಾವಣೆ ಮಾಡುವಂತೆ ಕ್ರಿಕೆಟ್ ಆಸ್ಟ್ರೇಲಿಯಾಕ್ಕೆ (ಸಿಎ) ಮನವಿ ಮಾಡಿದೆ. ಇದಕ್ಕೆ ಕಾರಣ ನಾಯಕ ವಿರಾಟ್ ಕೊಹ್ಲಿ. ಮುಂದೆ ಓದಿ.

ಕೊನೆಯ ಟೆಸ್ಟ್ ಮುಂದೂಡಲು ಮನವಿ
ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ವರ್ಷದ ಆರಂಭದಲ್ಲಿ ಸಾಂಪ್ರದಾಯಿಕವಾಗಿ ನಡೆಯುವ ಟೆಸ್ಟ್ ಪಂದ್ಯವನ್ನು ಮುಂದೂಡುವಂತೆ ಬಿಸಿಸಿಐ ಮನವಿ ಮಾಡಿದೆ. ಸಿಡ್ನಿಯಲ್ಲಿ ನಡೆಯಲಿರುವ ನಾಲ್ಕನೆಯ ಮತ್ತು ಕೊನೆಯ ಟೆಸ್ಟ್ ಪಂದ್ಯವನ್ನು ಜನವರಿ 7ರ ಬಳಿಕ ನಡೆಸುವಂತೆ ಅದು ಕೋರಿದೆ.

ಜನವರಿಯಲ್ಲಿ ಮಗುವಿನ ನಿರೀಕ್ಷೆ
ಕೊನೆಯ ಟೆಸ್ಟ್ ಜ. 3ರಿಂದ ನಡೆಸಲು ಉದ್ದೇಶಿಸಲಾಗಿದೆ. ನಾಯಕ ವಿರಾಟ್ ಕೊಹ್ಲಿ ಈ ಪಂದ್ಯವನ್ನು ಆಡುವುದು ಅನುಮಾನ. ಏಕೆಂದರೆ ಕೊಹ್ಲಿ ಮತ್ತು ಅವರ ಪತ್ನಿ, ನಟಿ ಅನುಷ್ಕಾ ಶರ್ಮಾ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.
ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೆ ಆಘಾತ, ವೇಗಿ ಭುವಿ ಔಟ್!

ವೃತ್ತಿ ಅಥವಾ ಖಾಸಗಿ ಬದುಕು?
ತಾವು ತಂದೆ-ತಾಯಿಯಾಗುತ್ತಿರುವ ಸಂಗತಿಯನ್ನು ಕೊಹ್ಲಿ ಮತ್ತು ಅನುಷ್ಕಾ ಆಗಸ್ಟ್ ತಿಂಗಳಲ್ಲಿ ಪ್ರಕಟಿಸಿದ್ದರು. ತಮ್ಮ ಮಗು ಜನವರಿ ತಿಂಗಳಲ್ಲಿ ಬರಲಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದರು. ಅವರು ನಿರ್ದಿಷ್ಟ ದಿನಾಂಕವನ್ನು ಹೇಳದೆ ಇದ್ದರೂ ವಿರಾಟ್ ಕೊಹ್ಲಿ ಅವರ ವೈಯಕ್ತಿಕ ಮತ್ತು ವೃತ್ತಿ ಜೀವನದ ನಡುವೆ ಆಸ್ಟ್ರೇಲಿಯಾ ಪ್ರವಾಸ ಉಭಯ ಸಂಕಟವಾಗಿ ಪರಿಣಮಿಸುವ ಸಾಧ್ಯತೆ ಇದೆ.

ಕೊಹ್ಲಿ ಗೈರಾದರೆ ಭಾರತಕ್ಕೆ ಕಷ್ಟ
ಆಸ್ಟ್ರೇಲಿಯಾ ಪಿಚ್ ಭಾರತಕ್ಕೆ ಸವಾಲಿನದ್ದಾಗಿದ್ದು, ವಿರಾಟ್ ಕೊಹ್ಲಿ ನೇತೃತ್ವದ ಪಡೆ ಇಲ್ಲಿನ ಪಿಚ್‌ಗಳಲ್ಲಿ ಆಸೀಸ್ ವೇಗಿಗಳನ್ನು ಎದುರಿಸುವುದು ಸುಲಭವಲ್ಲ. ಅಲ್ಲದೆ, ಸುದೀರ್ಘ ಸಮಯದ ಬಳಿಕ ಅಂತಾರಾಷ್ಟ್ರೀಯ ಪಂದ್ಯ ಆಡುವುದು ಅವರ ಮೇಲಿನ ಒತ್ತಡ ಹೆಚ್ಚಿಸಲಿದೆ. ಹೀಗಾಗಿ ವಿರಾಟ್ ಕೊಹ್ಲಿ ಅನುಪಸ್ಥಿತಿ ಹೊಡೆತ ನೀಡುವ ಆತಂಕವಿದೆ. ಅದರಿಂದ ಬಿಸಿಸಿಐ ವೇಳಾಪಟ್ಟಿಯ ಬದಲಾವಣೆಯನ್ನು ಬಯಸಿದೆ.

ಯುಎಇದಲ್ಲಿರುವ ಅನುಷ್ಕಾ
ಪ್ರಸ್ತುತ ಯುಎಇಯಲ್ಲಿ ನಡೆಯುತ್ತಿರುವ ಐಪಿಎಲ್ ಆವೃತ್ತಿಯಲ್ಲಿ ವಿರಾಟ್ ಕೊಹ್ಲಿ ಹಾಗೂ ತಂಡದ ಆಟಗಾರರು ಭಾಗವಹಿಸಿದ್ದಾರೆ. ಅನುಷ್ಕಾ ಶರ್ಮಾ ಕೂಡ ಯುಎಇಗೆ ತೆರಳಿದ್ದಾರೆ. ಐಪಿಎಲ್ ಬಳಿಕ ಸ್ವದೇಶಕ್ಕೆ ಮರಳಲಿದ್ದು, ಭಾರತದಲ್ಲಿಯೇ ಹೆರಿಗೆ ಆಗಲಿದೆಯೇ ಅಥವಾ ಆಸ್ಟ್ರೇಲಿಯಾ ಪ್ರವಾಸಕ್ಕೂ ಅನುಷ್ಕಾ ಅವರನ್ನು ಕರೆದುಕೊಂಡು ಹೋಗಿ ಅಲ್ಲಿಯೇ ಮಗುವನ್ನು ಮೊದಲ ಬಾರಿ ಕೈಗೆತ್ತಿಕೊಳ್ಳಲಿದ್ದಾರೆಯೇ ಎನ್ನುವುದು ಸ್ಪಷ್ಟವಾಗಿಲ್ಲ. 2019ರ ವಿಶ್ವಕಪ್ ವೇಳೆ ಆಸ್ಟ್ರೇಲಿಯಾ ಕ್ರಿಕೆಟಿಗ ಡೇವಿಡ್ ವಾರ್ನರ್ ಮತ್ತು ಕ್ಯಾಂಡೈಸ್ ವಾರ್ನರ್ ತಮ್ಮ ಮೂರನೇ ಮಗುವನ್ನು ಬ್ರಿಟನ್‌ನಲ್ಲಿ ಸ್ವಾಗತಿಸಿದ್ದರು.
500 ಸ್ಟ್ರೈಕ್‌ರೇಟ್‌ನಲ್ಲಿ ಕೃನಾಲ್ ಬ್ಯಾಟಿಂಗ್ ಅಬ್ಬರ: ಐಪಿಎಲ್ ಇತಿಹಾಸದಲ್ಲೇ ಮೊದಲು

ಕ್ವಾರೆಂಟೈನ್ ಸಮಸ್ಯೆ
ಒಂದು ವೇಳೆ ಮಗುವನ್ನು ಬರಮಾಡಿಕೊಳ್ಳಲು ವಿರಾಟ್ ಕೊಹ್ಲಿ ಪ್ರವಾಸದ ನಡುವೆ ಭಾರತಕ್ಕೆ ಬಂದು ಹೋಗಬೇಕಾದರೂ ತಂಡಕ್ಕೆ ಸಮಸ್ಯೆಯಾಗಲಿದೆ. ಏಕೆಂದರೆ ಪ್ರವಾಸ ಮಧ್ಯೆ ಭಾರತಕ್ಕೆ ಬಂದು ಹೋದರೆ ಎರಡು ವಾರಗಳ ಕ್ವಾರೆಂಟೈನ್ ಅವಧಿಯನ್ನೂ ಎದುರಿಸಬೇಕಾಗುತ್ತದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications