For Quick Alerts
ALLOW NOTIFICATIONS  
For Daily Alerts
 

ಭಾರತ vs ವೆಸ್ಟ್ ಇಂಡೀಸ್ ಸೀಮಿತ ಓವರ್‌ಗಳ ಸರಣಿ ಡಿಡಿ ಸ್ಪೋರ್ಟ್ಸ್‌ನಲ್ಲಿ ನೇರಪ್ರಸಾರ

India tour of west Indies: DD Sports will telecast the ODI and T20I series in India

ಜುಲೈ ತಿಂಗಳಲ್ಲಿ ಭಾರತ ಕ್ರಿಕೆಟ್ ತಂಡ ವೈಟ್‌ಬಾಲ್ ಸರಣಿಗಾಗಿ ವೆಸ್ಟ್ ಇಂಡೀಸ್‌ ಪ್ರವಾಸ ಕೈಗೊಳ್ಳಲಿದೆ. ಈ ಸರಣಿಯ ಟಿವಿ ನೇರಪ್ರಸಾರದ ಬಗೆಗಿದ್ದ ಗೊಂದಲ ಬಗೆಹರಿದಿದೆ. ಭಾರತೀಯ ಕ್ರಿಕೆಟ್ ಅಭಿಮಾನಿಗು ಈ ಸರಣಿಯನ್ನು ಡಿಡಿ ಸ್ಪೋರ್ಟ್ಸ್ ವಾಹಿನಿಯ ಮೂಲಕ ವೀಕ್ಷಣೆ ಮಾಡಬಹುದಾಗಿದೆ. ಭಾರತದ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಈ ವಿಚಾರವನ್ನು ಅಧಿಕೃತವಾಗಿ ಘೋಷಣೆ ಮಾಡಿದೆ.

ಮುಂಬರುವ ಅಕ್ಟೋಬರ್ ನವೆಂಬರ್ ತಿಂಗಳಿನಲ್ಲಿ ಆಸ್ಟ್ರೇಲಿಯಾದಲ್ಲಿ ಟಿ20 ವಿಶ್ವಕಪ್ ನಡೆಯಲಿರುವ ಕಾರಣದಿಂದಾಗಿ ಈ ಸರಣಿ ಸಾಕಷ್ಟು ಕುತೂಹಲ ಕೆರಳಿಸಿದೆ. ಈ ಮಹತ್ವದ ಟೂರ್ನಮೆಂಟ್‌ಗೆ ಪೂರ್ವತಯಾರಿಯ ಹಿನ್ನಲೆಯಲ್ಲಿ ಈ ಪ್ರವಾಸ ಬಹಳ ಮಹತ್ವದ್ದಾಗಿದೆ. ಈ ಸರಣಿಯ ಪ್ರಸಾರದ ಹಕ್ಕು ಯಾವುದೇ ಖಾಸಗಿ ವಾಹಿನಿಗಳು ಹೊಂದಿಲ್ಲದಿರುವ ಕಾರಣ ಭಾರತದಲ್ಲಿ ಟಿವಿಯಲ್ಲಿ ನೇರಪ್ರಸಾರವಾಗುವುದು ಅನುಮಾನ ಎನ್ನಲಾಗಿತ್ತು. ಒಟಿಟಿಯಲ್ಲಿ ಮಾತ್ರವೇ ಪ್ರಸಾರವಾಗಲಿದೆ ಎನ್ನಲಾಗಿತ್ತು. ಆದರೆ ಇದೀಗ ಮಾಹಿತಿ ಹಾಗೂ ಪ್ರಸಾರ ಸಚಿವಾಲಯ ಭಾರತದ ಕ್ರಿಕೆಟ್ ಪ್ರೇಮಿಗಳಿಗೆ ಖುಷಿಯ ಸುದ್ದಿ ನೀಡಿದೆ.

ಒಂದರ ಬಳಿಕ ಮತ್ತೊಂದು ಸರಣಿ ಆಡಲಿದೆ ಭಾರತ

ಒಂದರ ಬಳಿಕ ಮತ್ತೊಂದು ಸರಣಿ ಆಡಲಿದೆ ಭಾರತ

ಮುಂದಿನ ಕೆಲ ತಿಂಗಳ ಕಾಲ ಭಾರತ ಕ್ರಿಕೆಟ್ ತಂಡ ಒಂದಾದ ಬಳಿಕ ಒಂದರಂತೆ ಸರಣಿಯಲ್ಲಿ ಭಾಗಿಯಾಗಲಿದೆ. ಈಗಾಗಲೇ ಭಾರತದ ಎರಡು ಪ್ರತ್ಯೇಕ ತಂಡಗಳಾಗಿ ಇಂಗ್ಲೆಂಡ್ ಹಾಗೂ ಐರ್ಲೆಂಡ್ ಪ್ರವಾಸದಲ್ಲಿದೆ. ಇಂಗ್ಲೆಂಡ್‌ನಲ್ಲಿ ಟೆಸ್ಟ್ ಸರಣಿಯ ಒಂದು ಪಂದ್ಯ ನಡೆಯಲಿದ್ದು ಅದಾದ ಬಳಿಕ ವೈಟ್‌ಬಾಲ್ ಸರಣಿ ಆಯೋಜನೆಯಾಗಲಿದೆ. ಜುಲೈ 17ರ ವರೆಗೆ ಭಾರತ ಇಂಗ್ಲೆಂಡ್ ಪ್ರವಾಸದಲ್ಲಿರಲಿದೆ. ಅದಾದ ಬಳಿಕ ಭಾರತ ತಂಡ ಕೆರೀಬಿಯನ್ ನಾಡಿಗೆ ಹಾರಲಿದ್ದು ಮೂರು ಏಕದಿನ ಹಾಗೂ ಐದು ಟಿ20 ಸರಣಿಯಲ್ಲಿ ಭಾಗಿಯಾಗಲಿದೆ. ಈ ಸರಣಿ ಜುಲೈ 22ರಿಂದ ಆರಂಭವಾಗಲಿದ್ದು ಆಗಸ್ಟ್ 7ರ ವರೆಗೆ ನಡೆಯಲಿದೆ.

ಏಕದಿನ ಸರಣಿ

ಏಕದಿನ ಸರಣಿ

ವೆಸ್ಟ್ ಇಂಡೀಸ್ ಮತ್ತು ಭಾರತ ನಡುವಿನ ಸೀಮಿತ ಓವರ್‌ಗಳ ದ್ವಿಪಕ್ಷೀಯ ಸರಣಿ ಮೂರು ಏಕದಿನ ಹಾಗೂ ಐದು ಟಿ20 ಪಂದ್ಯಗಳನ್ನು ಒಳಗೊಂಡಿದೆ. ಮೊದಲಿಗೆ ಏಕದಿನ ಸರಣಿ ಆಯೋಜನೆಯಾಗಲಿದ್ದು ಜುಲೈ 22, 24 ಮತ್ತು 27 ರಂದು ಟ್ರಿನಿಡಾಡ್‌ನ ಕ್ವೀನ್ಸ್ ಪಾರ್ಕ್ ಓವಲ್‌ನಲ್ಲಿ ಈ ಪಂದ್ಯಗಳು ನಡೆಯಲಿದೆ.

1983ರ ವಿಶ್ವಕಪ್ ವಿಜಯೋತ್ಸವಕ್ಕೆ 39 ವರ್ಷಗಳು: ಇಡೀ ದೇಶಕ್ಕೆ ಸ್ಫೂರ್ತಿ ನೀಡಿದ್ದ ಕಪಿಲ್ ದೇವ್ ತಂಡ!

ಟಿ20 ಸರಣಿಯ ಮಾಹಿತಿ

ಟಿ20 ಸರಣಿಯ ಮಾಹಿತಿ

ಭಾರತ ಹಾಗೂ ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯ ಮೊದಲ ಪಂದ್ಯ ಜುಲೈ 29 ರಂದು ಟ್ರಿನಿಡಾಡ್‌ನ ಬ್ರಿಯಾನ್ ಲಾರಾ ಕ್ರಿಕೆಟ್ ಅಕಾಡೆಮಿಯಲ್ಲಿ ಆಯೋಜನೆಯಾಗಲಿದೆ. ಎರಡನೇ ಮತ್ತು ಮೂರನೇ ಪಂದ್ಯಗಳು ಆಗಸ್ಟ್ 1 ಮತ್ತು 2ರಂದು ನಡೆಯಲಿದ್ದು ಸೇಂಟ್ ಕಿಟ್ಸ್‌ನ ವಾರ್ನರ್ ಪಾರ್ಕ್‌ ಈ ಎರಡು ಪಂದ್ಯಗಳಿಗೆ ಆತಿಥ್ಯ ವಹಿಸಲಿದೆ. ಆಗಸ್ಟ್ 6 ಮತ್ತು 7 ರಂದು ಫ್ಲೋರಿಡಾದ ಲಾಡರ್‌ಹಿಲ್‌ನಲ್ಲಿರುವ ಬ್ರೋವರ್ಡ್ ಕೌಂಟಿ ಸ್ಟೇಡಿಯಂನಲ್ಲಿ ಅಂತಿಮ ಎರಡು ಟಿ20 ಪಂದ್ಯಗಳು ಆಯೋಜನೆಯಾಗಲಿರುವ ಕಾರಣ ಎರಡು ತಂಡಗಳು ಯುಎಸ್‌ಎಗೆ ಪ್ರಯಾಣಿಸಲಿದೆ

2019ರ ಬಳಿಕ ವಿಂಡೀಸ್‌ಗೆ ಪ್ರಯಾಣ

2019ರ ಬಳಿಕ ವಿಂಡೀಸ್‌ಗೆ ಪ್ರಯಾಣ

ಭಾರತ ಕೊನೆಯ ಬಾರಿಗೆ 2019ರಲ್ಲಿ ವೆಸ್ಟ್ ಇಂಡೀಸ್ ಪ್ರವಾಸವನ್ನು ಕೈಗೊಂಡಿತ್ತು. ಇಂಗ್ಲೆಂಡ್‌ನಲ್ಲಿ ನಡೆದ ಏಕದಿನ ವಿಶ್ವಕಪ್‌ನ ನಂತರ ಈ ಕೆರೇಬಿಯನ್ ಪ್ರವಾಸಕ್ಕೆ ತೆರಳಿದ್ದ ಭಾರತ ತಂಡ ಮೂರು ಮಾದರಿಯಲ್ಲಿಯೂ ಸರಣಿಯನ್ನು ಆಡಿದ್ದು ಮೂರು ಸರಣಿಯನ್ನು ಕೂಡ ತನ್ನ ವಶಕ್ಕೆ ತೆಗೆದುಕೊಂಡಿತ್ತು. ಟೆಸ್ಟ್ ಸರಣಿಯನ್ನು 2-0 ಅಂತರದಿಂದ ಗೆದ್ದಿದ್ದರೆ ಮೂರು ಪಂದ್ಯಗಳ ಟಿ20 ಸರಣಿಯಲ್ಲಿಯೂ 3-0 ಅಂತರದಿಂದ ಗೆಲುವು ಸಾಧಿಸಿತ್ತು. ನಂತರ ಏಕದಿನ ಸರಣಿಯನ್ನು 2-0 ಅಂತರದಿಂದ ವಶಕ್ಕೆ ಪಡೆದಿತ್ತು.

Story first published: Saturday, June 25, 2022, 15:49 [IST]
Other articles published on Jun 25, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+