For Quick Alerts
ALLOW NOTIFICATIONS  
For Daily Alerts
 

ಭಾರತದ ವೆಸ್ಟ್ ಇಂಡೀಸ್ ಪ್ರವಾಸಕ್ಕೆ ವೇಳಾಪಟ್ಟಿ ಸಿದ್ಧ: ಜುಲೈ 22ರಿಂದ ಆರಂಭವಾಗಲಿದೆ ಸರಣಿ

India Tour Of West Indies Schedule released, will Play 3 ODIs and 5 T20Is

ಐಪಿಎಲ್ ಮುಕ್ತಾಯದ ಬಳಿಕ ಭಾರತದ ಕ್ರಿಕೆಟ್ ತಂಡ ಒಂದಾದ ಬಳಿಕ ಒಂದರಂತೆ ಸರಣಿಯಲ್ಲಿ ಸಕ್ರಿಯವಾಗಲಿದೆ. ಇದೀಗ ಜುಲೈ ತಿಂಗಳಾಂತ್ಯದಲ್ಲಿ ಭಾರತೀಯ ಕ್ರಿಕೆಟ್ ತಂಡ ಕೈಗೊಳ್ಳಲಿರುವ ವೆಸ್ಟ್ ಇಂಡೀಸ್ ಸರಣಿಯ ವೇಳಾಪಟ್ಟಿ ಬಿಡುಗಡೆಯಾಗಿದೆ. ಈ ಸರಣಿಯಲ್ಲಿ ಭಾರತ ತಂಡ ಮೂರು ಏಕದಿನ ಪಂದ್ಯವನ್ನಾಡಲಿದ್ದು ಐದು ಪಂದ್ಯಗಳ ಟಿ20 ಸರಣಿಯಲ್ಲಿ ಕೂಡ ಕಾದಾಡಲಿದೆ. ಈ ವೈಟ್‌ಬಾಲ್ ಸರಣಿಯ ವೇಳಾಪಟ್ಟಿಯನ್ನು ಕ್ರಿಕೆಟ್ ವೆಸ್ಟ್ ಇಂಡೀಸ್ ಬಿಡುಗಡೆಗೊಳಿಸಿದೆ.

ಭಾರತ ಕೊನೆಯ ಬಾರಿ ವೆಸ್ಟ್ ಇಂಡೀಸ್ ಪ್ರವಾಸವನ್ನು 2019ರಲ್ಲಿ ಕೈಗೊಂಡಿತ್ತು. ಇಂಗ್ಲೆಂಡ್‌ನಲ್ಲಿ ನಡೆದ ಏಕದಿನ ವಿಶ್ವಕಪ್‌ನ ನಂತರ ಈ ಕೆರೇಬಿಯನ್ ಪ್ರವಾಸಕ್ಕೆ ತೆರಳಿದ್ದ ಭಾರತ ತಂಡ ಮೂರು ಮಾದರಿಯಲ್ಲಿಯೂ ಸರಣಿಯನ್ನು ಆಡಿದ್ದು ಮೂರು ಸರಣಿಯನ್ನು ಕೂಡ ತನ್ನ ವಶಕ್ಕೆ ಪಡೆದುಕೊಂಡಿತ್ತು. ಟೆಸ್ಟ್ ಸರಣಿಯನ್ನು 2-0 ಅಂತರದಿಂದ ಗೆದ್ದಿದ್ದರೆ ಮೂರು ಪಂದ್ಯಗಳ ಟಿ20 ಸರಣಿಯನ್ನು ಕೂಡ 3-0 ಅಂತರದಿಂದ ಗೆದ್ದಿತ್ತು. ಏಕದಿನ ಸರಣಿಯನ್ನು 2-0 ಅಂತರದಿಂದ ವಶಕ್ಕೆ ಪಡೆದಿತ್ತು. ಏಕದಿನ ಸರಣಿಯಲ್ಲಿ ಒಂದು ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು.

ಮತ್ತೊಮ್ಮೆ ವಿಂಡೀಸ್ ಪ್ರವಾಸಕ್ಕೆ ಭಾರತ ಸಜ್ಜು

ಮತ್ತೊಮ್ಮೆ ವಿಂಡೀಸ್ ಪ್ರವಾಸಕ್ಕೆ ಭಾರತ ಸಜ್ಜು

ಈಗ ಭಾರತ ಮತ್ತೊಮ್ಮೆ ವೆಸ್ಟ್ ಇಂಡೀಸ್ ಪ್ರವಾಸವನ್ನು ಕೈಗೊಳ್ಳಲು ಸಜ್ಜಾಗುತ್ತಿದೆ. ಆದರೆ ಈ ಬಾರಿ ಕೇವಲ ವೈಟ್‌ಬಾಲ್ ಸರಣಿ ಮಾತ್ರವೇ ನಡೆಯಲಿದೆ. ಜುಲೈ 22ರಿಂದ ಮೂರು ಪಂದ್ಯಗಳ ಏಕದಿನ ಸರಣಿ ಆರಂಭವಾಗಲಿದ್ದು ಪೋರ್ಟ್ ಆಫ್ ಸ್ಪೈನ್‌ನ ಕ್ವೀನ್ಸ್ ಪಾರ್ಕ್ ಓವಲ್ ಕ್ರೀಡಾಂಗಣದಲ್ಲಿ ಈ ಮೂರು ಪಂದ್ಯಗಳು ನಡೆಯಲಿದೆ. ಅದಾದ ಬಳಿಕ ಐದು ಪಂದ್ಯಗಳ ಟಿ20 ಸರಣಿ ನಡೆಯಲಿದ್ದು ಮೂರು

ಮೊದಲಿಗೆ ಏಕದಿನ ಸರಣಿ

ಮೊದಲಿಗೆ ಏಕದಿನ ಸರಣಿ

ಇನ್ನು ಐದು ಪಂದ್ಯಗಳ ಟಿ20 ಸರಣಿಯಲ್ಲಿ ಮೊದಲ ಪಂದ್ಯ ಜುಲೈ 29ರಂದು ನಡೆಯಲಿದ್ದು ದಕ್ಷಿಣ ಟ್ರಿನಿಡಾಡ್‌ನ ಬ್ರಿಯನ್ ಲಾರಾ ಕ್ರಿಕಟ್ ಅಕಾಡೆಮಿಯಲ್ಲಿ ಈ ಪಂದ್ಯ ನಡೆಯಲಿದೆ. ಅದಾದ ಬಳಿಕ ಎರಡು ಹಾಗೂ ಮೂರನೇ ಪಂದ್ಯಗಳು ಸತತವಾಗಿ ನಡೆಯಲಿದ್ದು ಆಗಸ್ಟ್ 1 ಹಾಗೂ 2ರಂದು ಸೈಂಟ್ಸ್ ಕಿಟ್ಸ್‌ನ ವಾರ್ನರ್ ಪಾರ್ಕ್‌ನಲ್ಲಿ ಈ ಪಂದ್ಯಗಳು ನಡೆಯಲಿದೆ. ಇನ್ನು ನಾಲ್ಕು ಹಾಗೂ ಐದನೇ ಪಂದ್ಯಗಳು ಕೂಡ ಸತತವಾಗಿ ನಡೆಯಲಿದ್ದು ಯುಎಸ್‌ಎಯ ಫ್ಲೋರಿಡಾದಲ್ಲಿ ಈ ಪಂದ್ಯಗಳು ಆಯೋಜನೆಯಾಗಲಿದೆ.

ಏಕದಿನ ಸರಣಿಯ ವೇಳಾಪಟ್ಟಿ ಹೀಗಿದೆ

ಏಕದಿನ ಸರಣಿಯ ವೇಳಾಪಟ್ಟಿ ಹೀಗಿದೆ

ಜುಲೈ 22: ಮೊದಲ ಏಕದಿನ - ಕ್ವೀನ್ಸ್ ಪಾರ್ಕ್ ಓವಲ್, ಟ್ರಿನಿಡಾಡ್
ಜುಲೈ 24: 2ನೇ ಏಕದಿನ - ಕ್ವೀನ್ಸ್ ಪಾರ್ಕ್ ಓವಲ್, ಟ್ರಿನಿಡಾಡ್
ಜುಲೈ 27: 3ನೇ ಏಕದಿನ - ಕ್ವೀನ್ಸ್ ಪಾರ್ಕ್ ಓವಲ್, ಟ್ರಿನಿಡಾಡ್

IPL 2022: ವೇಗದ ಶತಕ, ಅರ್ಧಶತಕ, ಹೆಚ್ಚು ಸಿಕ್ಸ್ ಬಾರಿಸಿದ್ದು ಇವರೇ; ಚೆನ್ನೈ, ಮುಂಬೈ ಆಟಗಾರರೇ ಇಲ್ಲ!

IPL 2022ರಲ್ಲಿ ಕೋಟಿ ಹಣ ಬಾಚಿದ್ದವರ ಕಥೆ ಏನಾಯ್ತು | OneIndia Kannada
ಟಿ20 ಸರಣಿಯ ವೇಳಾಪಟ್ಟಿ

ಟಿ20 ಸರಣಿಯ ವೇಳಾಪಟ್ಟಿ

ಜುಲೈ 29: ಮೊದಲನೇ T20I - ಬ್ರಿಯಾನ್ ಲಾರಾ ಕ್ರಿಕೆಟ್ ಅಕಾಡೆಮಿ, ಟ್ರಿನಿಡಾಡ್
ಆಗಸ್ಟ್ 1: 2ನೇ T20I - ವಾರ್ನರ್ ಪಾರ್ಕ್, ಸೇಂಟ್ ಕಿಟ್ಸ್
ಆಗಸ್ಟ್ 2: 3ನೇ T20I - ವಾರ್ನರ್ ಪಾರ್ಕ್, ಸೇಂಟ್ ಕಿಟ್ಸ್
ಆಗಸ್ಟ್ 6: 4ನೇ T20I - ಬ್ರೋವರ್ಡ್ ಕೌಂಟಿ ಕ್ರಿಕೆಟ್ ಸ್ಟೇಡಿಯಂ, ಲಾಡರ್ಹಿಲ್, ಫ್ಲೋರಿಡಾ, USA
ಆಗಸ್ಟ್ 7: 5ನೇ T20I - ಬ್ರೋವರ್ಡ್ ಕೌಂಟಿ ಕ್ರಿಕೆಟ್ ಸ್ಟೇಡಿಯಂ, ಲಾಡರ್ಹಿಲ್, ಫ್ಲೋರಿಡಾ, USA

Story first published: Thursday, June 2, 2022, 9:34 [IST]
Other articles published on Jun 2, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+