Champions Trophy 2025: ಚಾಂಪಿಯನ್ ಟ್ರೋಫಿಗಾಗಿ ಭಾರತ ತಂಡವು ಪಾಕಿಸ್ತಾನಕ್ಕೆ ಹೋಗುವುದು ಅನುಮಾನ; ಮತ್ತೆ ಹೈಬ್ರೀಡ್ ಮಾದರಿ?
ಜುಲೈ 11 ಗುರುವಾರ, 2024ರ ಟಿ20 ವಿಶ್ವಕಪ್ ಗೆದ್ದಿರುವ ಭಾರತ ತಂಡದ ಮುಂದಿನ ಗುರಿ ಚಾಂಪಿಯನ್ ಟ್ರೋಫಿ ಮೇಲಿಟ್ಟಿದೆ. ಯಾವುದೇ ಬೆಲೆ ತೆತ್ತಾದರೂ ಪಾಕಿಸ್ತಾನ ಆತಿಥ್ಯ ವಹಿಸಲಿರುವ ಈ ಟೂರ್ನಿಯ ಪ್ರಶಸ್ತಿಯನ್ನು ಭಾರತ ಮುಡಿಗೇರಿಸಿಕೊಳ್ಳಲು ರೆಡಿಯಾಗಿದೆ.
2025ರ ಚಾಂಪಿಯನ್ ಟ್ರೋಫಿಯಲ್ಲಿ ರೋಹಿತ್ ಶರ್ಮಾ ಭಾರತ ತಂಡದ ನಾಯಕತ್ವ ವಹಿಸಲಿದ್ದು, ಈ ಟೂರ್ನಿಯಲ್ಲಿ ಹಿರಿಯ ಆಟಗಾರರೊಂದಿಗೆ ಟೀಮ್ ಇಂಡಿಯಾ ಭಾಗವಹಿಸಲಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಹೇಳಿದ್ದಾರೆ.

ಇದೀಗ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯ ಮೂಲವೊಂದು ಎಎನ್‌ಐಗೆ ಮಾಹಿತಿ ನೀಡಿದ್ದು, 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿಗಾಗಿ ಭಾರತ ತಂಡವು ಪಾಕಿಸ್ತಾನಕ್ಕೆ ತೆರಳುವ ಸಾಧ್ಯತೆ ಇಲ್ಲ ಎಂದು ತಿಳಿಸಿದೆ.
ದುಬೈ ಅಥವಾ ಶ್ರೀಲಂಕಾದಲ್ಲಿ ಟೂರ್ನಿಯನ್ನು ಆಯೋಜಿಸುವಂತೆ ಐಸಿಸಿಗೆ ಬಿಸಿಸಿಐ ಮನವಿ ಮಾಡಿದೆ. ಈ ಬಗ್ಗೆ ಐಸಿಸಿ ಯಾವ ಕ್ರಮ ತೆಗೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ ಎಂದು ಹೇಳಿದೆ.
ಮತ್ತೊಂದೆಡೆ 17 ವರ್ಷಗಳ ನಂತರ ಭಾರತ ತಂಡದ ಪಾಕ್ ಪ್ರವಾಸವನ್ನು ಸಾಧ್ಯವಾಗಿಸಲು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ. ಭಾರತದ ಎಲ್ಲಾ ಪಂದ್ಯಗಳನ್ನು ಲಾಹೋರ್‌ನಲ್ಲಿ ನಡೆಸಲು ಪಿಸಿಬಿ ತಯಾರಿ ನಡೆಸುತ್ತಿದೆ.
ಈ ಹಿಂದೆ ಚಾಂಪಿಯನ್ ಟ್ರೋಫಿಗೆ ಹೈಬ್ರಿಡ್ ಮಾದರಿಯನ್ನು ಪರಿಗಣಿಸಲು ಪಿಸಿಬಿ ನಿರಾಕರಿಸಿತ್ತು. 2008ರ ಮುಂಬೈ ದಾಳಿಯ ನಂತರ, ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಬಂಧಗಳು ನಿರಂತರವಾಗಿ ಹದಗೆಡುತ್ತಿವೆ. ಅಂದಿನಿಂದ ಭಾರತ ತಂಡವು ಪಾಕಿಸ್ತಾನದಲ್ಲಿ ಕ್ರಿಕೆಟ್ ಆಡಲು ಪ್ರವಾಸ ಕೈಗೊಂಡಿಲ್ಲ.
ಮುಂದಿನ ವರ್ಷ 2025ರಲ್ಲಿ ಚಾಂಪಿಯನ್ ಟ್ರೋಫಿಗೆ ಪಾಕಿಸ್ತಾನ ಆತಿಥ್ಯ ವಹಿಸಿದೆ. ಇದಕ್ಕಾಗಿ ಪಿಸಿಬಿ ಬಹುತೇಕ ಕರಡ ವೇಳಾಪಟ್ಟಿಯನ್ನೂ ಸಿದ್ಧಪಡಿಸಿ ಐಸಿಸಿಗೆ ಸಲ್ಲಿಸಿದೆ.
ರಾಜಕೀಯ ಮತ್ತು ಭದ್ರತಾ ಕಾರಣಗಳಿಂದ ಭಾರತ ತಂಡವು ಪಾಕಿಸ್ತಾನಕ್ಕೆ ಪ್ರವಾಸ ಮಾಡದಿದ್ದರೆ, ಪಿಸಿಬಿ ಪರಿಹಾರಕ್ಕೆ ಅರ್ಹವಾಗಿರುತ್ತದೆ ಎಂದು ಮಂಡಳಿಯು ಈ ಹಿಂದೆ ಹೇಳಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications