ಬೆಂಗಳೂರು, ಜುಲೈ 1: ಟೀಂ ಇಂಡಿಯಾದ ಆಟಗಾರರಿಗೆ ಶಿಸ್ತಿನ ಪಾಠ ಮಾಡಿದ ನಂತರ ಕುಂಬ್ಳೆ ಮೇಷ್ಟ್ರು ತಮ್ಮ ಹುಡುಗರನ್ನು ಸಮುದ್ರಕ್ಕೆ ಕರೆದೊಯ್ದು ಈಜಾಟವಾಡಲು ಬಿಟ್ಟಿದ್ದಾರೆ.
ಅನಿಲ್ ಅವರ ಕಲಿ-ನಲಿ, ಆಟ-ಪಾಠ ಕ್ರಮಕ್ಕೆ ವಿರಾಟ್ ಕೊಹ್ಲಿ ಮನಸೋತಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ನಾಲ್ಕು ಟೆಸ್ಟ್ ಪಂದ್ಯಗಳ ಸರಣಿ ಜುಲೈ 21ರಿಂದ ಆರಂಭವಾಗಲಿದೆ.

ವಿರಾಟ್ ಕೊಹ್ಲಿ ನೇತೃತ್ವದ ಯುವ ಪಡೆ, ಕೋಚ್ ಅನಿಲ್ ಕುಂಬ್ಳೆ, ಸಹಾಯಕ ಸಿಬ್ಬಂದಿ ಎಲ್ಲರೂ ಸೇರಿ ಕೆರಿಬಿಯನ್ ದ್ವೀಪಗಳಿಗೆ ಭೇಟಿ ನೀಡಿದ್ದಾರೆ.
ವೆಸ್ಟ್ ಇಂಡೀಸ್ ನ ಪ್ರವಾಸಿ ಸ್ಥಳಗಳಾದ ಸೈಂಟ್ ನೇವಿಸ್ ಹಾಗೂ ಸೈಂಟ್ ಕಿಟ್ಸ್ಗೆ ಭೇಟಿ ನೀಡಿ ಬಂದಿದ್ದಾರೆ.
ಕೆಲದಿನಗಳ ಹಿಂದೆ ಯೋಗಾಭ್ಯಾಸ, ಬೀಸ್ ವಾಲಿಬಾಲ್ ಆಡುತ್ತಿದ್ದ ಚಿತ್ರಗಳನ್ನು ಹೊರ ಬಿಡಲಾಗಿತ್ತು.