Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಚೊಚ್ಚಲ ರಣಜಿ ಪಂದ್ಯದಲ್ಲೇ ಶತಕ: ಸಚಿನ್, ರೋಹಿತ್‌ ಸಾಧನೆ ಪಟ್ಟಿಗೆ ಯಶ್‌ ಧುಲ್‌ ಸೇರ್ಪಡೆ

Yash Dhull

ಪ್ರತಿಷ್ಠಿತ ದೇಶೀಯ ಟೂರ್ನಿ, ರಣಜಿ ಕ್ರಿಕೆಟ್‌ನ ಚೊಚ್ಚಲ ಪಂದ್ಯದಲ್ಲೇ ಭಾರತ ಅಂಡರ್-19 ವಿಶ್ವಕಪ್‌ನ ನಾಯಕ ಯಶ್‌ ಧುಲ್‌ ಶತಕ ಸಿಡಿಸುವ ಮೂಲಕ ತನ್ನ ಅದ್ಭುತ ಫಾರ್ಮ್ ಅನ್ನು ಮುಂದುವರಿಸಿದ್ದಾರೆ.

ಗುವಾಹಟಿಯ ಬರ್ಸಾಪುರ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಎಲೈಟ್ ಎಚ್‌ ಗ್ರೂಪ್‌ನ ದೆಹಲಿ ಮತ್ತು ತಮಿಳುನಾಡು ನಡುವಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ದೆಹಲಿ ಆರಂಭದಲ್ಲೇ ಎರಡು ವಿಕೆಟ್ ಕಳೆದುಕೊಂಡಿತು. ಕೇವಲ ಏಳು ರನ್‌ಗಳಿಸುವಷ್ಟರಲ್ಲಿ ಓಪನರ್ ಧ್ರುವ್‌ ಶೋರೆ(1), ಹಿಮ್ಮತ್ ಸಿಂಗ್ (0) ಮೊದಲ ಎಸೆತದಲ್ಲಿ ಔಟಾಗುವ ಮೂಲಕ ದೆಹಲಿ ಹಿನ್ನಡೆ ಅನುಭವಿಸಿತು.

ಸಂದೀಪ್ ವಾರಿಯರ್ ಬೌಲಿಂಗ್‌ನಲ್ಲಿ ಸತತ ಎರಡು ವಿಕೆಟ್ ಕಳೆದುಕೊಂಡ ದೆಹಲಿ ತಂಡದ ಪರ ಓಪನರ್‌ ಯಶ್ ಧುಲ್‌ ಮೂರನೇ ವಿಕೆಟ್‌ಗೆ ನಿತಿಶ್ ರಾಣಾ ಜೊತೆಗೆ ಹಾಗೂ ನಾಲ್ಕನೇ ವಿಕೆಟ್‌ಗೆ ಜಾಂಟಿ ಸಿಧು ಜೊತೆಗೆ ಶತಕದ ಜೊತೆಯಾಟವಾಡುವ ಮೂಲಕ ಕುಸಿದ ತಂಡಕ್ಕೆ ಆಧಾರವಾದ್ರು. ಈ ವೇಳೆಯಲ್ಲಿ ಯಶ್‌ಧುಲ್ ಅಮೋಘ ಶತಕ ದಾಖಲಿಸುವ ಮೂಲಕ ಅಂಡರ್-19 ವಿಶ್ವಕಪ್‌ನ ಉತ್ತಮ ಫಾರ್ಮ್ ಅನ್ನು ಮುಂದುವರಿಸಿದ್ರು.

150 ಎಸೆತಗಳಲ್ಲಿ 113 ರನ್‌ ಕಲೆಹಾಕಿದ ಯಶ್ ಧುಲ್ ಇನ್ನಿಂಗ್ಸ್‌ನಲ್ಲಿ 18 ಸೊಗಸಾದ ಬೌಂಡರಿಗಳಿದ್ದವು. ಯಶ್‌ ಧುಲ್‌ಗೆ ಉತ್ತಮ ಸಾಥ್ ನೀಡಿದ ಜಾಂಟಿ ಸಿಧು 71 ರನ್ ಕಲೆಹಾಕಿದರು.

ಈ ಶತಕದ ಮೂಲಕ ಯಶ್ ಧೂಲ್ ಸಚಿನ್ ತೆಂಡೂಲ್ಕರ್, ಅಮೋಲ್ ಮುಜುಂದಾರ್, ರೋಹಿತ್ ಶರ್ಮಾ ಮತ್ತು ಇತರ ಹಲವಾರು ಲೆಜೆಂಡ್‌ಗಳನ್ನ ಒಳಗೊಂಡಿರುವ ರಣಜಿ ಟ್ರೋಫಿ ಚೊಚ್ಚಲ ಪಂದ್ಯದಲ್ಲಿ ಶತಕ ದಾಖಲಿಸಿದ ಭಾರತೀಯ ಆಟಗಾರರ ಪ್ರತಿಷ್ಠಿತ ಪಟ್ಟಿಗೆ ಧುಲ್ ಸೇರಿಕೊಂಡಿದ್ದಾರೆ.

ಅಂಡರ್-19 ವಿಶ್ವಕಪ್‌ನ ಸೆಮಿಫೈನಲ್ ಪಂದ್ಯದಲ್ಲಿ ಯಶ್‌ ದುಲ್ ಆಸ್ಟ್ರೇಲಿಯಾ ವಿರುದ್ಧ ಶತಕ ಸಿಡಿಸುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ರು. ಫೈನಲ್‌ನಲ್ಲಿ ಭಾರತ ಇಂಗ್ಲೆಂಡ್ ವಿರುದ್ಧ ಗೆಲುವು ಸಾಧಿಸಿ ಐದನೇ ಬಾರಿಗೆ ಅಂಡರ್-19 ವಿಶ್ವಕಪ್ ಮುಡಿಗೇರಿಸಿಕೊಂಡಿತು.

ಇದಾದ ಬಳಿಕ ಐಪಿಎಲ್ ಮೆಗಾ ಹರಾಜು ಪ್ರಕ್ರಿಯೆಯಲ್ಲಿ ಯಶ್ ಧುಲ್ 50 ಲಕ್ಷಕ್ಕೆ ಡೆಲ್ಲಿ ಕ್ಯಾಪಿಟಲ್ಸ್‌ಗೆ ಮಾರಾಟವಾಗಿದ್ದಾರೆ. ಭವಿಷ್ಯದ ಭರವಸೆಯ ಟೀಂ ಇಂಡಿಯಾ ಬ್ಯಾಟ್ಸ್‌ಮನ್ ಆಗಿ ಗುರುತಿಸಿಕೊಂಡಿದ್ದಾರೆ.

Story first published: Thursday, February 17, 2022, 17:53 [IST]
Other articles published on Feb 17, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+