ಅಫ್ಘಾನಿಸ್ತಾನ ವಿರುದ್ಧದ ಸರಣಿಗೆ ಯುವಕರಿಗೆ ಅವಕಾಶ; ಅನುಭವಿಗಳಿಗೆ ಕಾದಿದೆಯಾ ಸಂಕಷ್ಟ?
ಭಾರತದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಡೆಯುತ್ತಿದೆ. ಈ ಲೀಗ್ ಬಳಿಕ ಮತ್ತೆ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳು ಆರಂಭವಾಗಲಿವೆ. ಜೂನ್‌ನಲ್ಲಿ ಅಫ್ಘಾನಿಸ್ತಾನ ತಂಡದ ಭಾರತದ ಪ್ರವಾಸ ಬೆಳೆಸಲಿದೆ. ಉಭಯ ತಂಡಗಳ ನಡುವೆ ಏಕೈಕ ಟೆಸ್ಟ್ ಪಂದ್ಯ ನಡೆಯಲಿದ್ದು, ಇದಾದ ಬಳಿಕ ಮೂರು ಏಕದಿನ ಪಂದ್ಯಗಳು ನಡೆಯಲಿವೆ. ಈಗಾಗಲೇ ಭಾರತೀಯ ಕ್ರಿಕೆಟ್ ನಿಯಂತ್ರಣಾ ಮಂಡಳಿ (ಬಿಸಿಸಿಐ) ಎರಡೂ ಸರಣಿಗೂ ತಂಡವನ್ನು ಪ್ರಕಟಿಸಿದೆ. ಪ್ರಕಟಿತ ತಂಡದಲ್ಲಿ ಹಲವು ಯುವ ಆಟಗಾರರು ಕಾಣಿಸಿಕೊಂಡಿದ್ದಾರೆ.
ಅಫ್ಘಾನಿಸ್ತಾನ ವಿರುದ್ಧದ ಟೆಸ್ಟ್ ಹಾಗೂ ಏಕದಿನ ಸರಣಿಗೆ ಪ್ರಕಟಿತ ಭಾರತ ತಂಡದಲ್ಲಿ ನಾಲ್ವರು ಆಟಗಾರರು ಮೊದಲ ಬಾರಿಗೆ ಅವಕಾಶವನ್ನು ಪಡೆದಿದ್ದಾರೆ. ಪ್ರಿನ್ಸ್ ಯಾದವ್, ಹರ್ಷ್ ದುಬೆ, ಮಾನವ್ ಸುತಾರ್ ಮತ್ತು ಗುರ್ನೂರ್ ಬ್ರಾರ್ ಇದೇ ಮೊದಲ ಬಾರಿಗೆ ಟೀಮ್ ಇಂಡಿಯಾ ಜೆರ್ಸಿ ತೊಡಲು ಉತ್ಸಕರಾಗಿದ್ದಾರೆ.

ಅಫ್ಘಾನಿಸ್ತಾನ ವಿರುದ್ಧದ ಟೆಸ್ಟ್ ಮತ್ತು ಏಕದಿನ ತಂಡಗಳಿಗೆ ಹರ್ಷ್ ದುಬೆ ಮತ್ತು ಗುರ್ನೂರ್ ಬ್ರಾರ್ ಅವರನ್ನು ಆಯ್ಕೆ ಮಾಡಲಾಗಿದೆ. ಪ್ರಿನ್ಸ್ ಯಾದವ್ ಅವರನ್ನು ಏಕದಿನ ಸರಣಿಗೆ ಮಾತ್ರ ಸೇರಿಸಿಸಲಾಗಿದೆ. ಮಾನವ್ ಸುತಾರ್ ಅವರನ್ನು ಟೆಸ್ಟ್ ತಂಡಕ್ಕೆ ಮಾತ್ರ ಸೇರಿಸಿಕೊಳ್ಳಲಾಗಿದೆ. ಈ ಆಟಗಾರರ ಪ್ರದರ್ಶನ ಅವರ ಭವಿಷ್ಯವನ್ನು ನಿರ್ಧರಿಸಲಿದೆ. ಈ ಯುವ ಆಟಗಾರರು ತಂಡಕ್ಕೆ ಸೇರ್ಪಡೆಯಾಗಿದ್ದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಯುವಕರಿಗೆ ಅವಕಾಶ
ಟೀಮ್ ಇಂಡಿಯಾದ ಸ್ಟಾರ್ ಆಲ್‌ರೌಂಡರ್ ಅಕ್ಷರ್ ಪಟೇಲ್ ಅವರ ಸ್ಥಾನದಲ್ಲಿ ಹರ್ಷ ದುಬೆ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಅಲ್ಲದೆ ಅಕ್ಷರ್ ಅವರನ್ನು ಕೈ ಬಿಡಲಾಗಿದೆ. ಹರ್ಷ್ ಎಡಗೈ ಸ್ಪಿನ್ನರ್ ಆಗಿದ್ದು, ಅವರು ಚೆನ್ನಾಗಿ ಬ್ಯಾಟಿಂಗ್ ಮಾಡಬಲ್ಲರು. ಇವರು ಅವಕಾಶವನ್ನು ಬಳಸಿಕೊಂಡು ಮಿಂಚಿದರೆ, ಅಕ್ಷರ್ ಪಟೇಲ್ ಮರಳುವುದು ಕಷ್ಟಕರವಾಗಿರುತ್ತದೆ.
ಸ್ಟಾರ್ ಆಲ್‌ರೌಂಡರ್ ರವೀಂದ್ರ ಜಡೇಜಾ ಅವರಿಗೂ ಸಹ ಅಫ್ಘಾನಿಸ್ತಾನ ವಿರುದ್ಧದ ಟೆಸ್ಟ್ ಸರಣಿಯಿಂದ ಕೈ ಬಿಡಲಾಗಿದೆ. ಇವರ ಸ್ಥಾನವನ್ನು ಭವಿಷ್ಯದಲ್ಲಿ ಹರ್ಷ್ ದುಬೆ ಮತ್ತು ಮಾನವ್ ಸುತಾರ್ ಭವಿಷ್ಯದಲ್ಲಿ ತುಂಬ ಬಹುದು ಎಂಬ ಲೆಕ್ಕಾಚಾರ ಶುರುವಾಗಿದೆ.

ಜಸ್ಪ್ರೀತ್ ಬುಮ್ರಾ ಅಫ್ಘಾನಿಸ್ತಾನ ವಿರುದ್ಧ ಎರಡೂ ಸ್ವರೂಪಗಳಲ್ಲಿ ಆಡುವುದಿಲ್ಲ; ಅವರಿಗೆ ವಿಶ್ರಾಂತಿ ನೀಡಲಾಗಿದೆ. ಮೊಹಮ್ಮದ್ ಸಿರಾಜ್ ಅವರನ್ನು ಟೆಸ್ಟ್ ತಂಡದಲ್ಲಿ ಸೇರಿಸಿಕೊಳ್ಳಲಾಗಿದೆ. ಆದರೆ ಇವರಿಗೆ ಏಕದಿನ ತಂಡದಲ್ಲಿ ಸ್ಥಾನ ಲಭಿಸಿಲ್ಲ. ಪಂಜಾಬ್‌ನ ಗುರ್ನೂರ್ ಬ್ರಾರ್ ಮತ್ತು ದೆಹಲಿಯ ಪ್ರಿನ್ಸ್ ಯಾದವ್ ದೇಶೀಯ ಟೂರ್ನಿಯಲ್ಲಿ ಅಮೋಘ ಪ್ರದರ್ಶನ ನೀಡಿದ್ದರಿಂದ ಇವರಿಗೆ ಬುಲಾವ್ ನೀಡಲಾಗಿದೆ. ಇವರು ಸ್ಥಿರ ಪ್ರದರ್ಶನ ನೀಡಿದಲ್ಲಿ ಸಿರಾಜ್ ಬ್ಲ್ಯೂ ಜೆರ್ಸಿ ತೊಡುವುದು ಕಷ್ಟವಾಗುತ್ತದೆ. ಇನ್ನು ಮೊಹಮ್ಮದ್ ಶಮಿ ಸಹ ಕಂ ಬ್ಯಾಕ್ ಮಾಡಲು ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಆದರೆ ಅವಕಾಶಗಳು ಸಿಗುತ್ತಿಲ್ಲ. ಒಂದು ವೇಳೆ ಈ ಆಟಗಾರರು ಸ್ಥಿರ ಪ್ರದರ್ಶನ ನೀಡಿದರೆ ಅನುಭವಿಗಳಿಗೆ ಕಷ್ಟವಾಗಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications