ಭಾರತ-ಅಫ್ಘಾನಿಸ್ತಾನ ಟೆಸ್ಟ್: ಶತಕದೊಂದಿಗೆ ಮಿಂಚಿದ ಧವನ್, ವಿಜಯ್

ಬೆಂಗಳೂರು, ಜೂ. 14: ಬೆಂಗಳೂರಿನಲ್ಲಿ ನಡೆದ ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಐಸಿಹಾಸಿಕ ಟೆಸ್ಟ್ ಪಂದ್ಯಾಟದ ಮೊದಲ ದಿನ ಭಾರತ ತಂಡ ಶಿಖರ್ ಧವನ್ (107) ಮತ್ತು ಮುರಳಿ ವಿಜಯ್ (105) ಶತಕದ ನೆರವಿನಿಂದ 78 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 347 ರನ್ ಪೇರಿಸಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಭಾರತ ಪರ ಧವನ್, ವಿಜಯ್ ಯೊಂದಿಗೆ ಕೆಎಲ್ ರಾಹುಲ್ 54 (64) ರನ್, ಚೇತೇಶ್ವರ್ ಪೂಜಾರ 35 (52) ರನ್ ನೊಂದಿಗೆ ತಂಡದ ಮೊತ್ತ ಏರಿಸುವಲ್ಲಿ ನೆರವಾದರು. ಆದರೆ ಧವನ್, ವಿಜಯ್ ಅವರ ಎರಡೂ ಅಮೂಲ್ಯ ವಿಕೆಟ್ ಗಳು ಬೇಗನೆ ಉರುಳಿದ್ದು ಭಾರತಕ್ಕೆ ನಷ್ಟವಾಗಿ ಪರಿಣಮಿಸಿತು.
ರಾಹುಲ್, ಪೂಜಾರ ನಂತರ ಬ್ಯಾಟ್ ಎತ್ತಿಕೊಂಡ ರಹಾನೆ 10 (45), ದಿನೇಶ್ ಕಾರ್ತಿಕ್ ಅವರೂ ಬೇಗನೆ ಔಟಾದರು. ಸದ್ಯ ಹಾರ್ದಿಕ್ ಪಾಂಡ್ಯ ಮತ್ತು ಆರ್ ಅಶ್ವಿನ್ ಬ್ಯಾಟಿಂಗ್ ಮಾಡುತ್ತಿದ್ದಾರೆ.
ಅಫ್ಘಾನಿಸ್ತಾನ ಪರ ಯಮಿನ್ ಅಹ್ಮದ್ಜೈ ಅವರು ಬೌಲಿಂಗ್ ಪಾರಮ್ಯ ಮೆರೆದರು. ಕೇವಲ 32ರನ್ ಗೆ ಯಮಿನ್ 2 ವಿಕೆಟ್ ಉರುಳಿಸಿ ಭಾರತವನ್ನು ಕಾಡಿದರು. ರಾಹುಲ್ ಮತ್ತು ಧವನ್ ವಿಕೆಟ್ ಯಮಿನ್ ಪಾಲಾಯಿತು.
ಭೋಜನ ವಿರಾಮದ ವೇಳೆಗೆ ಭಾರತ 27 ಓವರ್‌ಗಳಲ್ಲಿ ಯಾವುದೇ ವಿಕೆಟ್ ಕಳೆದುಕೊಳ್ಳದೆ 158 ರನ್ ಬಾರಿಸಿತ್ತು. ಕೇವಲ 88 ಎಸೆತಗಳಲ್ಲಿ ಶತಕ ದಾಖಲಿಸಿದ ಶಿಖರ್ ಧವನ್, ಭೋಜನ ವಿರಾಮದ ವೇಳೆಗೆ 104 (91) ರನ್ ಗಳಿಸಿ ಅಜೇಯರಾಗಿ ಉಳಿದಿದ್ದರು. ನಂತರ 96 ಎಸೆತಗಳಲ್ಲಿ 107ರನ್ ಗಳಿಸಿ ಔಟಾದರು. ಧವ 19 ಬೌಂಡರ್ ಮತ್ತು 3 ಭರ್ಜರಿ ಸಿಕ್ಸರ್ ಸಿಡಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications