ಅಫ್ಘಾನಿಸ್ತಾನ ವಿರುದ್ಧ 402 ರನ್ ಕಲೆ ಹಾಕಿದ ಭಾರತ; ದಕ್ಷಿಣ ಆಫ್ರಿಕಾ ದಾಖಲೆ ಸಮ
ಲಕ್ನೋ: ಭರವಸೆಯ ಬ್ಯಾಟರ್ ಇಶಾನ್ ಕಿಶನ್ ಹಾಗೂ ನಾಯಕ ಶುಭಮನ್ ಗಿಲ್ ಅವರು ಬಾರಿಸಿದ ಭರ್ಜರಿ ಶತಕದ ನೆರವಿನಿಂದ ಟೀಮ್ ಇಂಡಿಯಾ ಎರಡನೇ ಏಕದಿನ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ ಬೃಹತ್ ಮೊತ್ತ ಕಲೆ ಹಾಕಿದೆ. ಈ ಮೂಲಕ ಟೀಮ್ ಇಂಡಿಯಾ ಏಕದಿನ ಕ್ರಿಕೆಟ್‌ನಲ್ಲಿ ದೊಡ್ಡ ದಾಖಲೆಯನ್ನು ಬರೆದಿದೆ.
ಎರಡನೇ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡುವ ಅವಕಾಶವನ್ನು ಪಡೆಯಿತು. ತಂಡದಲ್ಲಿ ಕೊಂಚ ಬದಲಾವಣೆಯೊಂದಿಗೆ ಕಣಕ್ಕೆ ಇಳಿದ ಭಾರತ ತಂಡಕ್ಕೆ ಆರಂಭದಲ್ಲೇ ಆಘಾತ ಎದುರಾಗಿತ್ತು. ಯುವ ಬ್ಯಾಟರ್ ಯಶಸ್ವಿ ಜೈಸ್ವಾಲ್ ಸಿಕ್ಕ ಅವಕಾಶವನ್ನು ಬಳಸಿಕೊಂಡು ಬ್ಯಾಟ್ ಮಾಡುವಲ್ಲಿ ವಿಫಲರಾದರು. ಇವರು ಆರಂಭಿಕರಾಗಿ ಕಣಕ್ಕೆ ಇಳಿದು ಕೇವಲ 9 ಎಸೆತಗಳಲ್ಲಿ 1 ಬೌಂಡರಿ ನೆರವಿನಿಂದ 4 ರನ್ ಬಾರಿಸಿ ಔಟ್ ಆದರು.

9 ರನ್‌ಗಳಿಗೆ ಒಂದು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ಅನುಭವಿ ಬ್ಯಾಟರ್ ರೋಹಿತ್ ಶರ್ಮಾ ಹಾಗೂ ನಾಯಕ ಶುಭಮನ್ ಗಿಲ್ ಆಧಾರವಾದರು. ಈ ಜೋಡಿ ಸಮಯೋಚಿತ ಬ್ಯಾಟಿಂಗ್ ನಡೆಸಿ ರನ್ ರೇಟ್ ಹಿಗ್ಗಿಸುತ್ತಾ ಸಾಗಿತು. ಈ ಜೋಡಿ 67 ಎಸೆತಗಳಲ್ಲಿ 87 ರನ್ ಸಿಡಿಸಿತು. ಈ ಹಂತದಲ್ಲಿ ಅನುಭವಿ ಬ್ಯಾಟರ್ ರೋಹಿತ್ ಶರ್ಮಾ 6 ಬೌಂಡರಿ, 2 ಸಿಕ್ಸರ್ ಸಹಾಯದಿಂದ 48 ರನ್ ಬಾರಿಸಿ ರಶೀದ್ ಖಾನ್ ಸ್ಪಿನ್ ಬೌಲಿಂಗ್ ಅರಿಯುವಲ್ಲಿ ವಿಫಲರಾಗಿ ಬೋಲ್ಡ್ ಆದರು.
ಗಿಲ್, ಇಶಾನ್ ಶತಕದ ಆಟ
ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ ಇಶಾನ್ ಕಿಶನ್ ಹಾಗೂ ನಾಯಕ ಶುಭಮನ್ ಗಿಲ್ ಜೋಡಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿತು. ಈ ಜೋಡಿ ಟಿ20 ಶೈಲಿಯಲ್ಲಿ ಬ್ಯಾಟ್ ಮಾಡಿ ಕೇವಲ 141 ಎಸೆತಗಳಲ್ಲಿ 224 ರನ್ ಸೇರಿಸಿತು. ಈ ಬ್ಯಾಟರ್‌ಗಳ ಸೊಗಸಾದ ಬ್ಯಾಟಿಂಗ್ ನೆರವಿನಿಂದ ಟೀಮ್ ಇಂಡಿಯಾ ಎರಡನೇ ಪಂದ್ಯದಲ್ಲಿ 400ಕ್ಕೂ ಹೆಚ್ಚು ರನ್ ಕಲೆ ಹಾಕಲು ನೆರವಾಯಿತು.
ಟೀಮ್ ಇಂಡಿಯಾ ನಾಯಕ ಶುಭಮನ್ ಗಿಲ್ 110 ಎಸೆತಗಳಲ್ಲಿ 22 ಬೌಂಡರಿ, 2 ಸಿಕ್ಸರ್ ಸಹಾಯದಿಂದ 154 ರನ್ ಬಾರಿಸಿದರು. ಇನ್ನು ಯುವ ಬ್ಯಾಟರ್ ಇಶಾನ್ ಕಿಶನ್ 79 ಎಸೆತಗಳಲ್ಲಿ 14 ಬೌಂಡರಿ, 7 ಸಿಕ್ಸರ್ ಸಹಾಯದಿಂದ 125 ರನ್ ಸಿಡಿಸಿ ಔಟ್ ಆದರು. ಇವರಿಬ್ಬರೂ ಬ್ಯಾಟ್ ಮಾಡುವಾಗ ಟೀಮ್ ಇಂಡಿಯಾ 450ರ ಆಸುಪಾಸಿನಲ್ಲಿ ರನ್ ಕಲೆ ಹಾಕಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ಟೀಮ್ ಇಂಡಿಯಾದ ಭರವಸೆಯ ಆಟಗಾರರು ದೊಡ್ಡ ಹೊಡೆತಗಳಿಗೆ ಮುಂದಾಗಿ ಔಟ್ ಆದರು. ಅಂತಿಮವಾಗಿ ಟೀಮ್ ಇಂಡಿಯಾ 49.5 ಓವರ್‌ಗಳಲ್ಲಿ 402 ರನ್ ಕಲೆ ಹಾಕಿ ಆಲೌಟ್ ಆಯಿತು.
ದಕ್ಷಿಣ ಆಫ್ರಿಕಾ ದಾಖಲೆ ಸಮ
ಟೀಮ್ ಇಂಡಿಯಾ ಅಫ್ಘಾನಿಸ್ತಾನ ವಿರುದ್ಧ ಏಕದಿನ ಪಂದ್ಯದಲ್ಲಿ 402 ರನ್ ಕಲೆ ಹಾಕುತ್ತಿದ್ದಂತೆ ದೊಡ್ಡ ದಾಖಲೆ ಬರೆಯಿತು. ಏಕದಿನ ಕ್ರಿಕೆಟ್‌ನಲ್ಲಿ ಟೀಮ್ ಇಂಡಿಯಾ 400ಕ್ಕೂ ಹೆಚ್ಚು ರನ್‌ಳನ್ನು 8 ಬಾರಿ ಕಲೆ ಹಾಕಿತು. ಈ ಮೂಲಕ ದಕ್ಷಿಣ ಆಫ್ರಿಕಾದ ದಾಖಲೆಯ ಸಮಕ್ಕೆ ನಿಂತಿತು. ದಕ್ಷಿಣ ಆಫ್ರಿಕಾ ಸಹ ಏಕದಿನ ಕ್ರಿಕೆಟ್‌ನಲ್ಲಿ 8 ಬಾರಿ 400ಕ್ಕೂ ಹೆಚ್ಚು ರನ್ ದಾಖಲಿಸಿದೆ.
ಏಕದಿನ ಕ್ರಿಕೆಟ್‌ನಲ್ಲಿ ಟೀಮ್ ಇಂಡಿಯಾ ಎಷ್ಟು ಬಾರಿ 400ಕ್ಕೂ ಹೆಚ್ಚು ರನ್ ಬಾರಿಸಿದೆ?
ಏಕದಿನ ಕ್ರಿಕೆಟ್‌ನಲ್ಲಿ ಭಾರತ ತಂಡ ಒಟ್ಟು 8 ಬಾರಿ 400ಕ್ಕೂ ಹೆಚ್ಚು ರನ್ ಬಾರಿಸಿದೆ.
ಏಕದಿನ ಕ್ರಿಕೆಟ್‌ನಲ್ಲಿ ಟೀಮ್ ಇಂಡಿಯಾ ಕಲೆ ಹಾಕಿದ ಗರಿಷ್ಠ ಸ್ಕೋರ್ ಏನು?
ಟೀಮ್ ಇಂಡಿಯಾ ಏಕದಿನ ಕ್ರಿಕೆಟ್‌ನಲ್ಲಿ 2011ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 50 ಓವರ್‌ಗಳಲ್ಲಿ 5 ವಿಕೆಟ್‌ಗೆ 418 ರನ್ ಕಲೆ ಹಾಕಿದ್ದು ಗರಿಷ್ಠ ಸ್ಕೋರ್ ಆಗಿದೆ.
ಏಕದಿನ ಕ್ರಿಕೆಟ್‌ನಲ್ಲಿ ಅತಿ ದೊಡ್ಡ ಮೊತ್ತವನ್ನು ಕಲೆ ಹಾಕಿದ ತಂಡ ಯಾವುದು?
ನೆದರ್‌ಲ್ಯಾಂಡ್ಸ್ ವಿರುದ್ಧ ಇಂಗ್ಲೆಂಡ್ ಜೂನ್ 17, 2022ರಲ್ಲಿ 50 ಓವರ್‌ಗಳಲ್ಲಿ 4 ವಿಕೆಟ್‌ಗೆ 498 ರನ್ ಸಿಡಿಸಿದ್ದು ಗರಿಷ್ಠ ಸ್ಕೋರ್ ಆಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications