ಭಾರತ-ಆಸೀಸ್ ಏಕದಿನ: ಚಿನ್ನಸ್ವಾಮಿಯಲ್ಲಿ ಸೆ. 26ರಿಂದ ಟಿಕೆಟ್ ಲಭ್ಯ
ಬೆಂಗಳೂರು, ಸೆಪ್ಟೆಂಬರ್ 23: ಇದೇ ತಿಂಗಳ 28ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಭಾರತ- ಆಸ್ಟ್ರೇಲಿಯಾ ಏಕದಿನ ಕ್ರಿಕೆಟ್ ಪಂದ್ಯದ ಟಿಕೆಟ್ ಗಳ ಕೌಂಟರ್ ಮಾರಾಟ ಸೆ. 26ರಿಂದ ಆರಂಭವಾಗಲಿದೆ.
'ಒನ್ ಇಂಡಿಯಾ'ದೊಂದಿಗೆ ಈ ವಿಚಾರ ತಿಳಿಸಿದ ಕರ್ನಾಟಕ ಕ್ರಿಕೆಟ್ ಸಂಸ್ಥೆಯ (ಕೆಎಸ್ ಸಿಎ) ವಕ್ತಾರ ವಿನಯ್ ಮೃತ್ಯುಂಜಯ ಈ ವಿಚಾರ ತಿಳಿಸಿದರು.

ಚಿನ್ನಸ್ವಾಮಿ ಕ್ರೀಡಾಂಗಣದ ಟಿಕೆಟ್ ಕೌಂಟರ್ ಗಳಲ್ಲಿ ಸೆ. 26ರ ಬೆಳಗ್ಗೆ 9:30 ಗಂಟೆಯಿಂದ ಟಿಕೆಟ್ ಗಳು ಪ್ರೇಕ್ಷಕರಿಗೆ ಲಭ್ಯವಾಗಲಿವೆ ಎಂದು ತಿಳಿಸಿದರು.
ಈಗಾಗಲೇ ಆನ್ ಲೈನ್ ಮೂಲಕವೂ ಟಿಕೆಟ್ ಮಾರಾಟಕ್ಕೆ ಅನುಕೂಲ ಕಲ್ಪಿಸಲಾಗಿದೆ. ಟಿಕೆಟ್ ಜಿನಿ ಡಾಟ್ ಕಾಮ್, ಬುಕ್ ಮೈ ಷೋ ವೆಬ್ ಸೈಟ್ ಗಳಲ್ಲಿ ಟಿಕೆಟ್ ಮಾರಾಟಕ್ಕೆ ಅನುಕೂಲ ಕಲ್ಪಿಸಲಾಗಿದೆ.
ಟಿಕೆಟ್ ಜಿನಿ, ಬುಕ್ ಮೈ ಷೋ ಮಾತ್ರವಲ್ಲದೆ, ಕೆಎಸ್ ಸಿಎ ಅಧಿಕೃತ ವೆಬ್ ಸೈಟ್ ಮೂಲಕವೂ ಟಿಕೆಟ್ ಕೊಳ್ಳಲು ಪ್ರೇಕ್ಷಕರಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಅವರು ತಿಳಿಸಿದರು.
ಇನ್ನು, ಪಂದ್ಯಕ್ಕಾಗಿ ಒದಗಿಸಿರುವ ಭದ್ರತೆಯ ಬಗ್ಗೆ ವಿವರಣೆ ನೀಡಿದ ಅವರು, ''ಈ ಹಿಂದಿನ ಅಂತಾರಾಷ್ಟ್ರೀಯ ಪಂದ್ಯಗಳಿಗೆ ಒದಗಿಸಲಾಗಿರುವ ಬಿಗಿ ಭದ್ರತೆಯನ್ನೇ ಈ ಪಂದ್ಯಕ್ಕೂ ಒದಗಿಸಲಾಗಿದೆ. ಆದರೆ, ಈ ಬಾರಿ ಪೊಲೀಸ್ ಇಲಾಖೆಯೇ ಕೆಲವಾರು ವಿಶೇಷ ಸೂಚನೆಗಳನ್ನು ನೀಡಿದ್ದು, ಅದೆಲ್ಲವನ್ನೂ ಪಾಲಿಸುತ್ತಿದ್ದೇವೆ'' ಎಂದು ತಿಳಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications