For Quick Alerts
ALLOW NOTIFICATIONS  
For Daily Alerts
 

India vs Australia 2nd T20: ಭಾರತ ತಂಡದಲ್ಲಿ 2 ಬದಲಾವಣೆ ಸಾಧ್ಯತೆ; ಸಂಭಾವ್ಯ ಆಡುವ 11ರ ಬಳಗ

By ನಾಗೇಶ್

ಭಾರತ ಮತ್ತು ಆಸ್ಟ್ರೇಲಿಯಾ ನಡುವೆ 5 ಪಂದ್ಯಗಳ ಟಿ20 ಸರಣಿ ಆರಂಭವಾಗಿದೆ. ಈ ಸರಣಿಯ ಮೊದಲ ಪಂದ್ಯ ವಿಶಾಖಪಟ್ಟಣದಲ್ಲಿ ನಡೆದಿದ್ದು, ಇದರಲ್ಲಿ ಸೂರ್ಯಕುಮಾರ್ ಯಾದವ್ ನಾಯಕತ್ವದ ಟೀಮ್ ಇಂಡಿಯಾ 2 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ.

ಇದೀಗ ಭಾರತದ ಎರಡನೇ ಟಿ20 ಪಂದ್ಯ ಭಾನುವಾರ, ನವೆಂಬರ್ 26ರಂದು ಕೇರಳದ ರಾಜಧಾನಿ ತಿರುವನಂತಪುರಂನಲ್ಲಿ ನಡೆಯಲಿದೆ. ಈ ಎರಡನೇ ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾ ಆಡುವ ಹನ್ನೊಂದರ ಬಳಗದಲ್ಲಿ ಎರಡು ಬದಲಾವಣೆ ಮಾಡಿಕೊಳ್ಳವ ಸಾಧ್ಯತೆ ಇದೆ.

ವಿಶ್ವಕಪ್ ಬಳಿಕ ಆರಂಭವಾದ ಈ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಟಿ20 ಸರಣಿಗೆ ಭಾರತ ತಂಡದ ನಾಯಕತ್ವವನ್ನು ಸೂರ್ಯಕುಮಾರ್ ಯಾದವ್‌ಗೆ ವಹಿಸಲಾಗಿದ್ದು, ಕೋಚಿಂಗ್ ಜವಾಬ್ದಾರಿಯನ್ನು ವಿವಿಎಸ್ ಲಕ್ಷ್ಮಣ್ ವಹಿಸಿಕೊಂಡಿದ್ದಾರೆ.

india-vs-australia-2nd-t20

ಮಾಜಿ ನಾಯಕ ರಾಹುಲ್ ದ್ರಾವಿಡ್ ಅವರ ಮುಖ್ಯ ಕೋಚ್ ಅವಧಿ ಮುಗಿದಿದೆ. ಈ ಇಬ್ಬರು ಹೊಸ ನಾಯಕ ಮತ್ತು ಕೋಚ್ ಜೋಡಿಯು ವೇಗದ ಬೌಲರ್ ಅವೇಶ್ ಖಾನ್ ಮತ್ತು ಸ್ಪಿನ್ ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್ ಅವರಿಗೆ ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಆಡಲು ಅವಕಾಶ ನೀಡಬಹುದು.

ಓಪನರ್‌ಗಳಾಗಿ ಯಶಸ್ವಿ ಜೈಸ್ವಾಲ್ ಮತ್ತು ರುತುರಾಜ್ ಗಾಯಕ್ವಾಡ್ ಕಾಣಿಸಿಕೊಳ್ಳಲಿದ್ದಾರೆ. ಇದೇ ಸಮಯದಲ್ಲಿ, ಇಶಾನ್ ಕಿಶನ್ ಮತ್ತು ನಾಯಕ ಸೂರ್ಯಕುಮಾರ್ ಯಾದವ್ 3 ಮತ್ತು 4ನೇ ಕ್ರಮಾಂಕದಲ್ಲಿ ಸ್ಥಿರ ಆಟದ ಪ್ರದರ್ಶನ ನೀಡಿದ್ದರಿಂದ ಭರವಸೆ ಹೆಚ್ಚಿದೆ. ಆದ್ದರಿಂದ ಈ ಸ್ಥಾನದಲ್ಲೂ ಬದಲಾವಣೆಗೆ ಅವಕಾಶವಿಲ್ಲ.

ಮತ್ತೊಬ್ಬ ಆಲ್‌ರೌಂಡರ್ ತಿಲಕ್ ವರ್ಮಾ 5ನೇ ಕ್ರಮಾಂಕದಲ್ಲಿ ಆಡುತ್ತಾರೆ. ಅವರು ಸ್ಪಿನ್ ಬೌಲಿಂಗ್ ಮಾಡಬಹುದು. ಅವರ ಸ್ಥಾನದಲ್ಲಿ ಶಿವಂ ದುಬೆ ಆಯ್ಕೆ ತಂಡ ಸೇರಲು ತುದಿ ಗಾಲಿನಲ್ಲಿ ನಿಂತಿದ್ದಾರೆ.

india-vs-australia-2nd-t20

6ನೇ ಕ್ರಮಾಂಕದಲ್ಲಿ ರಿಂಕು ಸಿಂಗ್ ಕಳೆದ ಪಂದ್ಯದಲ್ಲಿ ಅದ್ಭುತ ಇನ್ನಿಂಗ್ಸ್‌ ಆಡಿ ತಂಡವನ್ನು ಗೆಲ್ಲಿಸಿದ್ದರಿಂದ ಅವರ ಸ್ಥಾನದಲ್ಲಿ ಬದಲಾವಣೆಗೆ ಅವಕಾಶವಿಲ್ಲ. ಅಕ್ಷರ್ ಪಟೇಲ್ ಅವರಿಗೆ 7ನೇ ಕ್ರಮಾಂಕದಲ್ಲಿ ಅವಕಾಶ ನೀಡಲಾಯಿತು ಮತ್ತು ಅವರು ಸ್ಪಿನ್‌ ಬೌಲಿಂಗ್ ನೊಂದಿಗೆ ಕೆಳ ಕ್ರಮಾಂಕದಲ್ಲಿ ಉತ್ತಮವಾಗಿ ಬ್ಯಾಟ್ ಮಾಡುತ್ತಾರೆ. ಆದ್ದರಿಂದ ಎರಡನೇ ಪಂದ್ಯದಲ್ಲಿ ಅಕ್ಷರ್ ಪಟೇಲ್ ಅವರಿಗೂ ಅವಕಾಶ ಸಿಗುವ ನಿರೀಕ್ಷೆ ಇದೆ.

4 ಓವರ್‌ಗಳಲ್ಲಿ 54 ರನ್ ನೀಡಿದ್ದ ರವಿ ಬಿಷ್ಣೋಯ್‌ಗೆ 8ನೇ ಕ್ರಮಾಂಕದಲ್ಲಿ ಅವಕಾಶ ನೀಡಲಾಯಿತು. ಈ ಪರಿಸ್ಥಿತಿಯಲ್ಲಿ, ಬಲಗೈ ಸ್ಪಿನ್ ಬೌಲಿಂಗ್ ಜೊತೆಗೆ 8ನೇ ಕ್ರಮಾಂಕದಲ್ಲಿ ಯೋಗ್ಯವಾಗಿ ಬ್ಯಾಟಿಂಗ್ ಮಾಡುವ ಆಯ್ಕೆಯನ್ನು ವಾಷಿಂಗ್ಟನ್ ಸುಂದರ್‌ಗೆ ವಹಿಸುವ ನಿರೀಕ್ಷಿಸಲಾಗಿದೆ.

ಇವರಲ್ಲದೆ ಮೂವರು ವೇಗಿಗಳಾದ ಅರ್ಶ್‌ದೀಪ್ ಸಿಂಗ್, ಮುಖೇಶ್ ಕುಮಾರ್ ಮತ್ತು ಪ್ರಸಿದ್ಧ್ ಕೃಷ್ಣ ಅವರಿಗೆ ಆಡುವ ಅವಕಾಶ ಸಿಕ್ಕಿದೆ. ಇವರುಗಳಲ್ಲಿ, ಪ್ರಸಿದ್ಧ ಕೃಷ್ಣ ಅತ್ಯಂತ ದುಬಾರಿ ಎಂದು ಸಾಬೀತಾಗಿದ್ದಾರೆ. ಆದ್ದರಿಂದ ಅವರ ಸ್ಥಾನದಲ್ಲಿ ಅವೇಶ್ ಖಾನ್‌ಗೆ ಅವಕಾಶ ಸಿಗುವ ನಿರೀಕ್ಷೆಯಿದೆ. ಮುಖೇಶ್ ಕುಮಾರ್ ತಮ್ಮ ಡೆತ್ ಓವರ್‌ ಬೌಲಿಂಗ್‌ನಿಂದ ಸಾಕಷ್ಟು ಗಮನ ಸೆಳೆದಿದ್ದರು.

Story first published: Saturday, November 25, 2023, 20:05 [IST]
Other articles published on Nov 25, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+