India vs Australia, 2nd T20I : ನಾಗ್ಪುರ ವಿಸಿಎ ಸ್ಟೇಡಿಯಂನ ಪಿಚ್ ರಿಪೋರ್ಟ್ ಹಾಗೂ ಇತರ ಮಾಹಿತಿ

ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಿನ ಟಿ20 ಸರಣಿಯ ಮೊದಲ ಪಂದ್ಯ ಮುಕ್ತಾಯವಾಗಿದ್ದು ಎರಡನೇ ಪಂದ್ಯದತ್ತ ಚಿತ್ತ ನೆಟ್ಟಿದೆ. ನಾಗ್ಪುರದ ವಿಸಿಎ ಸ್ಟೇಡಿಯಂನಲ್ಲಿ ಈ ಪಂದ್ಯ ನಡೆಯಲಿದ್ದು ಎರಡು ತಂಡಗಳು ಕೂಡ ಮೊಹಾಲಿಯಿಂದ ನಾಗ್ಪುರಕ್ಕೆ ಬಂದಿಳಿದಿದೆ. ಸರಣಿಯಲ್ಲಿ ಜೀವಂತವಾಗುಳಿಯಬೇಕಾದರೆ ಈ ಪಂದ್ಯದಲ್ಲಿ ಭಾರತ ತಂಡಕ್ಕೆ ಗೆಲುವು ಅನಿವಾರ್ಯವಾಗಿದೆ.
ಮೊದಲ ಪಂದ್ಯದಲ್ಲಿ ಮೊದಲಿಗೆ ಬ್ಯಾಟಿಂಗ್ ಮಾಡಿದ ಭಾರತ ತಂಡ ಬೃಹತ್ ಮೊತ್ತವನ್ನು ಪೇರಿಸಿದ ಹೊರತಾಗಿಯೂ ಪಂದ್ಯವನ್ನು ಗೆಲ್ಲಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಎರಡನೇ ಪಂದ್ಯದಲ್ಲಿ ಭಾರತಕ್ಕೆ ಗೆಲುವು ಮಹತ್ವದ್ದಾಗಿದೆ. ಈ ಎರಡನೇ ಪಂದ್ಯ ನಡೆಯಲಿರುವ ನಾಗ್ಪುರ ಕ್ರೀಡಾಂಗಣದ ಪಿಚ್ ರಿಪೋರ್ಟ್, ಹವಾಮಾನ ವರದು ಹಾಗೂ ಇತರ ಮಾಹಿತಿಗಳನ್ನು ನೋಡೋಣ.. ಮುಂದೆ ಓದಿ..

ನಾಗ್ಪುರದಲ್ಲಿ ಭಾರತದ ಟಿ20 ಅಂಕಿಅಂಶಗಳು
ಭಾರತ ವಿಸಿಎ ಸ್ಟೇಡಿಯಂನಲ್ಲಿ 4 ಪಂದ್ಯಗಳನ್ನು ಆಡಿದೆ. ಈ ಪೈಕಿ ಎರಡು ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದರೆ ಎರಡು ಪಂದ್ಯಗಳಲ್ಲಿ ಸೋಲು ಅನುಭವಿಸಿದೆ. ಆಸ್ಟ್ರೇಲಿಯಾ ಈ ತಾಣದಲ್ಲಿ ಈವರೆಗೆ ಒಂದೂ ಪಂದ್ಯವನ್ನು ಆಡಿಲ್ಲ.

ನಾಗ್ಪುರ ಸ್ಟೇಡಿಯಂನ ಟಿ20ಐ ದಾಖಲೆ
ಗರಿಷ್ಠ ಮೊತ್ತ: ಶ್ರೀಲಂಕಾ: 215/5
ಗರಿಷ್ಠ ಮೊತ್ತ: ಭಾರತ: 186/9
ಕಡಿಮೆ ಮೊತ್ತ: ಭಾರತ: 79 ರನ್‌ಗಳಿಗೆ ಆಲೌಟ್
ಅತಿ ಹೆಚ್ಚು ರನ್: ಎಂ ಶಹಜಾದ್ (ಅಫ್ಘಾನಿಸ್ತಾನ): 166
ಭಾರತದ ಪರವಾಗಿ ಅತಿ ಹೆಚ್ಚು ರನ್: ಕೆಎಲ್ ರಾಹುಲ್: 123
ಗರಿಷ್ಠ ಸ್ಕೋರ್: ಎಂ ನಯಿಮ್ (ಬಾಂಗ್ಲಾದೇಶ): 81
ಭಾರತದ ಪರ ಗರಿಷ್ಠ ಸ್ಕೋರ್: ಕೆಎಲ್ ರಾಹುಲ್: 71
ಹೈಯೆಸ್ಟ್ ಸಿಕ್ಸರ್: ಎಂ ಶಹಜಾದ್ (ಅಫ್ಘಾನಿಸ್ತಾನ): 7
ಭಾರತದ ಪರ ಹೈಯೆಸ್ಟ್ ಸಿಕ್ಸರ್: ಶ್ರೇಯಸ್ ಅಯ್ಯರ್ 5
ಅತ್ಯುತ್ತಮ ಜೊತೆಯಾಟ: 98 M ನಬಿ / ಎಸ್ ಶಿನ್ವಾರಿ (ಅಫ್ಘಾನಿಸ್ತಾನ) ಮತ್ತು ಎಂ ನಯೀಮ್ / ಎಂ ಮಿಥುನ್ (ಬಾಂಗ್ಲಾ)
ಭಾರತದ ಪರ ಅತ್ಯಧಿಕ ಜೊತೆಯಾಟ: ಗೌತಮ್ ಗಂಭೀರ್ / ಎಂಎಸ್ ಧೋನಿ: 61
ಹೈಯೆಸ್ಟ್ ವಿಕೆಟ್: ಎಂ ನಬಿ, ರಶೀದ್ ಖಾನ್: 8
ಭಾರತದ ಪರ ಹೈಯೆಸ್ಟ್ ವಿಕೆಟ್: ದೀಪಕ್ ಚಹಾರ್: 6
ಅತ್ಯುತ್ತಮ ಬೌಲಿಂಗ್: ದೀಪಕ್ ಚಹಾರ್: 6/7
ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಉತ್ತಮ ಆರಂಭ ಪಡೆದು, ಬಹುಬೇಗನೆ ಮರೆಯಾದ 3 ಭಾರತದ ಆಟಗಾರರು

ನಾಗ್ಪುರ ಪಿಚ್ ರಿಪೋರ್ಟ್
ನಾಗ್ಪುರ ಪಿಚ್ ಸಾಮಾನ್ಯವಾಗಿ ಬ್ಯಾಟ್ ಮತ್ತು ಬಾಲ್ ನಡುವೆ ಸ್ವಲ್ಪ ಸಮತೋಲನವನ್ನು ಹೊಂದಿರುತ್ತದೆ. ಆದರೆ ಸಾಮಾನ್ಯವಾಗಿ ಮೊದಲು ಬ್ಯಾಟಿಂಗ್ ಮಾಡುವ ತಂಡಕ್ಕೆ ಹೆಚ್ಚಿನ ಸಹಾಯ ಮಾಡುತ್ತದೆ. ಯಾಕೆಂದರೆ ಇಲ್ಲಿ ಚೇಸಿಂಗ್ ಮಾಡುವುದು ಕಠಿಣ. ಈ ಮೈದಾಣದಲ್ಲಿ ಎರಡನೇ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡಿದ ತಂಡದ ಸರಾಸರಿ 128 ರನ್ ಆಗಿದ್ದು ಮೊದಲು ಬ್ಯಾಟಿಂಗ್ ಮಾಡಿದ ತಂಡವು 180ರ ಸನಿಹದಲ್ಲಿ ಗುರಿ ನೀಡಿದರೆ ಚೇಸಿಂಗ್ ಅತ್ಯಂತ ಕಠಿಣವಾಗಿರಲಿದೆ.
Ind vs Aus: 48 ಎಸೆತ 101 ರನ್, ಭುವಿ ಮತ್ತು ಹರ್ಷಲ್ ಪಟೇಲ್‌ಗೆ ಪಂದ್ಯ ಪುರುಷೋತ್ತಮ ಪ್ರಶಸ್ತಿ!

ಹವಾಮಾನ ವರದಿ
ನಾಗ್ಪುರದಲ್ಲಿ ಪಂದ್ಯದ ದಿನ ಹಗಲು ಮಳೆಯಾಗುವ ಸಾಧ್ಯತೆಯಿದೆ. ಅಲ್ಲದೆ 79 ಶೇಕಡಾದಷ್ಟು ಮೋಡ ಕವಿದ ವಾತಾವರಣವಿರಲಿದೆ. ಆದರೆ ಪಂದ್ಯದ ಸಂದರ್ಭದಲ್ಲಿ ಮಳೆಯ ಆತಂಕವಿರುವಿದಿಲ್ಲ. ಹೀಗಾಗಿ ಮತ್ತೊಂದು ಪೂರ್ಣ ಪ್ರಮಾಣದ ಪಂದ್ಯ ನಡೆಯುವುದರಲ್ಲಿ ಅನುಮಾನವಿಲ್ಲ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications