ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಉತ್ತಮ ಆರಂಭ ಪಡೆದು, ಬಹುಬೇಗನೆ ಮರೆಯಾದ 3 ಭಾರತದ ಆಟಗಾರರು

Team india

ಟೀಂ ಇಂಡಿಯಾ ಪ್ಲೇಯಿಂಗ್ ಇಲೆವೆನ್‌ನಲ್ಲಿ ಸ್ಥಾನ ಪಡೆಯಲು ಕಠಿಣ ಪರಿಶ್ರಮ, ಸ್ಥಿರತೆ, ಪ್ರತಿಭೆ ಜೊತೆಗೆ ಅದೃಷ್ಟವೂ ಇರಬೇಕು. ಅದ್ರಲ್ಲೂ ಇಂಡಿಯನ್ ಪ್ರೀಮಿಯರ್ ಲೀಗ್ ಶುರುವಾದ ಬಳಿಕ ಭಾರತದಲ್ಲಿ ಪ್ರತಿಭೆಗಳಿಗೇನು ಕೊರತೆಯಲ್ಲ. ಟೀಂ ಇಂಡಿಯಾ ಬೆಂಚ್ ಮತ್ತಷ್ಟು ಬಲಿಷ್ಠವಾಗಿದೆ.

ಕ್ರಿಕೆಟ್‌ನಲ್ಲಿ ಬಹುಮುಖ್ಯವಾದ ವಿಚಾರ ಸ್ಥಿರತೆ ಕಾಪಾಡಿಕೊಳ್ಳುವುದು. ಕೆಲವು ಆಟಗಾರರು ತಮ್ಮ ಪ್ರತಿಭೆಯ ಮೂಲಕ ದೇಶೀಯ ಕ್ರಿಕೆಟ್‌ನಲ್ಲಿ ಅದ್ಭುತ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ಆದ್ರೆ ಸ್ಥಿರತೆಯ ಕೊರತೆಯಿಂದಾಗಿ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಬಂದಷ್ಟೇ ವೇಗದಲ್ಲಿ ತಂಡದಿಂದ ಮರೆಯಾಗುವುದನ್ನ ಕಾಣಬಹುದು.

ಅನೇಕ ಕ್ರಿಕೆಟಿಗರಿಗೆ ದೇಶೀಯ ಕ್ರಿಕೆಟ್‌ನಲ್ಲಿ ಆಡುವ ಅವಕಾಶವೇ ಸಿಗುವುದಿಲ್ಲ. ಇನ್ನು ಅವಕಾಶ ಸಿಕ್ಕವರಲ್ಲಿ ಎಲ್ಲರೂ ಮಿಂಚಲು ಸಾಧ್ಯವಾಗುವುದಿಲ್ಲ. ಆದ್ರೆ ಸಿಕ್ಕ ಅವಕಾಶದಲ್ಲಿ ಮಿಂಚಿನ ಆಟವಾಡುವ ಆಟಗಾರರಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಆಡುವ ಅವಕಾಶ ಲಭಿಸುತ್ತದೆ. ಆದ್ರೆ ಈ ಮಟ್ಟದಲ್ಲಿ ಹೆಚ್ಚು ಕಾಲ ಸ್ಥಿರತೆ ಕಾಪಾಡಿಕೊಳ್ಳುವ ಆಟಗಾರರು ತುಂಬಾ ಕಡಿಮೆ. ಹೀಗಾಗಿಯೇ ಸಿಕ್ಕಂತಹ ಚಿನ್ನದಂತಹ ಅವಕಾಶವನ್ನ ತಾವಾಗಿಯೇ ಕೈ ಚೆಲ್ಲುವುದನ್ನ ಕಾಣಬಹುದು.

ಇದೇ ರೀತಿಯಲ್ಲಿ, ತಮ್ಮ ಕೆರಿಯರ್ ಅನ್ನು ಅದ್ಭುತವಾಗಿ ಆರಂಭಿಸಿ, ಕೆಲವೇ ತಿಂಗಳು/ವರ್ಷದಲ್ಲಿ ಟೀಂ ಇಂಡಿಯಾದಿಂದ ಹೊರಬಿದ್ದಂತಹ ಭಾರತದ ಮೂವರು ಆಟಗಾರರನ್ನ ಈ ಕೆಳಗೆ ತಿಳಿಸಲಾಗಿದೆ.

ಮನೀಶ್ ಪಾಂಡೆ

ಮನೀಶ್ ಪಾಂಡೆ

ಐಪಿಎಲ್‌ನಲ್ಲಿ ಚೊಚ್ಚಲ ಶತಕ ಗಳಿಸಿದ ಭಾರತದ ಬಲಗೈ ಬ್ಯಾಟ್ಸ್‌ಮನ್ ಮನೀಶ್ ಪಾಂಡೆ ಅವರು ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಕಾಲಿಡುವ ಮೊದಲೇ ಜನಪ್ರಿಯ ಆಟಗಾರರಾಗಿದ್ದರು. ಹೀಗಾಗಿಯೇ ಅಂತರರಾಷ್ಟ್ರೀಯ ಮಟ್ಟದಲ್ಲಿ ಅವರಿಂದ ದೊಡ್ಡ ಪ್ರದರ್ಶನವನ್ನ ನಿರೀಕ್ಷಿಸಲಾಗಿತ್ತು. 2015ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಕಾಲಿಟ್ಟ ಮನೀಶ್, ಟೀಂ ಇಂಡಿಯಾದಲ್ಲಿ ಹೆಸರು ಮತ್ತು ಸ್ಥಾನಮಾನ ಉಳಿಸಿಕೊಳ್ಳಲು ಸಾಧ್ಯವಾಗದೆ ಕೆಲವೇ ವರ್ಷಗಳಲ್ಲಿ ತಂಡದಿಂದ ಹೊರಗುಳಿದರು.

2015ರಲ್ಲಿ ಜಿಂಬಾಬ್ವೆ ವಿರುದ್ಧ ಪದಾರ್ಪಣೆ ಮಾಡಿದ್ದ ಮನೀಶ್ ಪಾಂಡೆ 29 ಏಕದಿನ ಪಂದ್ಯಗಳಲ್ಲಿ ಶತಕದೊಂದಿಗೆ ಕೇವಲ 566 ರನ್ ಗಳಿಸಿದ್ದಾರೆ. ಅದೇ ಸಮಯದಲ್ಲಿ, 39 ಟಿ20 ಪಂದ್ಯಗಳಲ್ಲಿ, ಅವರು ಮೂರು ಅರ್ಧ ಶತಕಗಳ ಸಹಾಯದಿಂದ 709 ರನ್ ಗಳಿಸಿದ್ದಾರೆ. ಮನೀಷ್ 2021 ರಲ್ಲಿ ಭಾರತಕ್ಕಾಗಿ ಕೊನೆಯ ಏಕದಿನ ಪಂದ್ಯ ಮತ್ತು 2020 ರಲ್ಲಿ ಕೊನೆಯ ಟಿ20 ಆಡಿದ್ದರು.

1983ರ ಏಕದಿನ ವಿಶ್ವಕಪ್ ಯಶೋಗಾಥೆ ಕೊನೆಗಾಣಿಸಿ, 2011ರ ವಿಶ್ವಕಪ್ ಗೆಲ್ಲಿ ಎಂದು ಗಂಭೀರ್‌ಗೆ ನೀಡಿದ್ರಂತೆ ಸಂದೇಶ!

ಕೇದಾರ್ ಜಾಧವ್

ಕೇದಾರ್ ಜಾಧವ್

2014ರಲ್ಲಿ ಶ್ರೀಲಂಕಾ ವಿರುದ್ಧ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಕೇದಾರ್ ಜಾಧವ್ ಕುರಿತು, ಭಾರತ ತಂಡದ ಮ್ಯಾನೇಜ್‌ಮೆಂಟ್ ಹಾಗೂ ಕ್ರಿಕೆಟ್ ಅಭಿಮಾನಿಗಳಿಂದ ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದರು. ದೇಶೀಯ ಕ್ರಿಕೆಟ್‌ನಲ್ಲಿ ದೊಡ್ಡ ಪ್ರಭಾವ ಬೀರಿದ ಜಾಧವ್, ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಉತ್ತಮ ಆರಂಭವನ್ನು ಹೊಂದಿದ್ದರು ಆದರೆ ಶೀಘ್ರದಲ್ಲೇ ಅವರ ಜಾಗದಲ್ಲಿ ಇತರೆ ಆಟಗಾರರು ಸ್ಥಾನ ಪಡೆಯುವಲ್ಲಿ ಯಶಸ್ವಿಯಾದರು. ಜೊತೆಗೆ ಸ್ಥಿರತೆ ಉಳಿಸಿಕೊಳ್ಳಲು ಸಾಧ್ಯವಾಗದ ಕಾರಣ ಅವರನ್ನು 2020 ರಲ್ಲಿ ತಂಡದಿಂದ ಕೈಬಿಡಲಾಯಿತು.

ಜಾಧವ್ 73 ಏಕದಿನ ಪಂದ್ಯಗಳಲ್ಲಿ ಎರಡು ಶತಕ ಮತ್ತು ಆರು ಅರ್ಧ ಶತಕಗಳ ಸಹಾಯದಿಂದ 1389 ರನ್ ಗಳಿಸಿದ್ದಾರೆ. ಅದೇ ಸಮಯದಲ್ಲಿ, T20 ಅಂತರಾಷ್ಟ್ರೀಯ ಪಂದ್ಯಗಳಲ್ಲಿ, ಅವರು ಕೇವಲ 9 ಪಂದ್ಯಗಳನ್ನು ಆಡಿದರು, ಅಲ್ಲಿ ಅವರು 20.33 ಸರಾಸರಿಯಲ್ಲಿ 122 ರನ್ ಗಳಿಸಿದರು.

SA20 League 2023 Auction: 6 ತಂಡದ ಸಂಪೂರ್ಣ ಸ್ಕ್ವಾಡ್‌, ಅತಿ ಹೆಚ್ಚು ಮೊತ್ತ ಪಡೆದ ಆಟಗಾರರ ಪಟ್ಟಿ

ಪೃಥ್ವಿ ಶಾ

ಪೃಥ್ವಿ ಶಾ

ತನ್ನ 18ನೇ ವಯಸ್ಸಿನಲ್ಲಿಯೇ ಟೀಂ ಇಂಡಿಯಾ ಪರ ಟೆಸ್ಟ್ ಕ್ರಿಕೆಟ್‌ ಆಡಿದ ಪೃಥ್ವಿ ಶಾ, ಈಗಾಗಲೇ ದೇಶೀಯ ಕ್ರಿಕೆಟ್‌ ವಲಯದಲ್ಲಿ ದೊಡ್ಡ ಹೆಸರು ಮಾಡಿದ್ದಾರೆ. ಹೀಗಾಗಿಯೇ ಪೃಥ್ವಿ ಶಾನನ್ನು ಭಾರತದ ಭವಿಷ್ಯದ ಕ್ರಿಕೆಟಿಗ ಎಂದೇ ಗುರುತಿಸಲಾಗಿತ್ತು. ಜೊತೆಗೆ ತಾನು ಆಡಿದ ಮೊದಲ ಟೆಸ್ಟ್ ಪಂದ್ಯದಲ್ಲಿಯೇ ಪೃಥ್ವಿ ಶಾ ಶತಕ ದಾಖಲಿಸಿದ್ದರು.

ಇಷ್ಟಾದರೂ ಪೃಥ್ವಿ ಆಡಿರುವುದು 5 ಟೆಸ್ಟ್, 6 ಏಕದಿನ ಪಂದ್ಯ ಮತ್ತು 1 ಟಿ20 ಪಂದ್ಯವಾಗಿದೆ. 2021ರಲ್ಲಿ ಕೊನೆಯ ಬಾರಿಗೆ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದಿದ್ದ ಪೃಥ್ವಿ ಶಾ ಅಂತರಾಷ್ಟ್ರೀಯ ಮಟ್ಟದ ಸ್ಪರ್ಧೆಯಿಂದ ಹೊರಗುಳಿದಿದ್ದಾರೆ. ಆದ್ರೆ ಆತ ಇನ್ನು ಯುವ ಆಟಗಾರನಾಗಿರುವುದರಿಂದ ಆತ ಉತ್ತಮ ಫಾರ್ಮ್‌ಗೆ ಮರಳಿ ಯಾವುದೇ ಸಮಯದಲ್ಲಿ ಟೀಂ ಇಂಡಿಯಾಗೆ ಕಂಬ್ಯಾಕ್ ಮಾಡಬಹುದು.

Story first published: Tuesday, September 20, 2022, 17:11 [IST]
Other articles published on Sep 20, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X