2ನೇ ಟೆಸ್ಟ್ : ಚಹಾ ವಿರಾಮ, ಭಾರತಕ್ಕೆ 35 ರನ್ ಗಳ ಮುನ್ನಡೆ
ಬೆಂಗಳೂರು, ಮಾರ್ಚ್ 06: ಎಡಗೈ ಸ್ಪಿನ್ನರ್ ರವೀಂದ್ರ ಜಡೇಜ ಅವರ ಅದ್ಭುತ ಬೌಲಿಂಗ್ ನಡುವೆಯೂ ಪ್ರವಾಸಿ ಆಸ್ಟ್ರೇಲಿಯಾ ತಂಡಕ್ಕೆ 87ರನ್ ಗಳ ಮಹತ್ವದ ಮುನ್ನಡೆ ಸಿಕ್ಕಿತು. ನಂತರ ಬ್ಯಾಟಿಂಗ್ ಆರಂಭಿಸಿರುವ ಭಾರತ ಚಹಾ ವಿರಾಮದ ವೇಳೆಗೆ 35ರನ್ ಗಳ ಮುನ್ನಡೆ ಪಡೆದಿದೆ.
ಕೆಎಲ್ ರಾಹುಲ್ ಅವರು 51 ರನ್ ಗಳಿಸಿ ಔಟಾದರೆ ಮಿಕ್ಕವರು ಹೆಚ್ಚು ಹೊತ್ತು ಕ್ರೀಸ್ ನಲ್ಲಿ ಉಳಿಯಲಿಲ್ಲ. ಹೇಜಲ್ ವುಡ್ ಅವರು 3 ವಿಕೆಟ್ ಕಿತ್ತು, ಭಾರತದ ಬ್ಯಾಟ್ಸ್ ಮನ್ ಗಳ ರನ್ ಗಳಿಕೆಗೆ ಬ್ರೇಕ್ ಹಾಕಿದರು.

ಚಹಾ ವಿರಾಮದ ವೇಳೆಗೆ ರಾಹುಲ್ (51), ಅಭಿನವ್ ಮುಕುಂದ್ (16), ವಿರಾಟ್ ಕೊಹ್ಲಿ (15) ಹಾಗೂ ರವೀಂದ್ರ ಜಡೇಜ ವಿಕೆಟ್ (2) ಕಳೆದುಕೊಂಡು ಭಾರತ ಆತಂಕದ ಸ್ಥಿತಿಯಲ್ಲಿದೆ. ಈ ಸಮಯಕ್ಕೆ ಸ್ಕೋರ್ 44.2 ಓವರ್ ಗಳಲ್ಲಿ 144/4. ಪೂಜಾರಾ 42, ರಹಾನೆ 12 ಕ್ರೀಸ್ ನಲ್ಲಿದ್ದಾರೆ.
ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿರುವ ಎರಡನೇ ಟೆಸ್ಟ್ ಪಂದ್ಯದ ಮೂರನೇ ದಿನವಾದ ಇಂದು 112.4 ಓವರ್ ಗಳಲ್ಲಿ 276 ಸ್ಕೋರಿಗೆ ಆಸ್ಟ್ರೇಲಿಯಾ ಆಲೌಟ್ ಆಗಿದೆ.
ಎರಡನೇ ಇನ್ನಿಂಗ್ಸ್ ಆರಂಭಿಸಿರುವ ಭಾರತ ತಂಡ, ಮೂರನೇ ದಿನದ ಭೋಜನ ವಿರಾಮದ ವೇಳೆಗೆ 38ರನ್ ಸ್ಕೋರ್ ಮಾಡಿದ್ದು ಯಾವುದೇ ವಿಕೆಟ್ ಕಳೆದುಕೊಂಡಿಲ್ಲ. ಮೊದಲ ಇನ್ನಿಂಗ್ಸ್ ನಲ್ಲಿ ಶತಕ ವಂಚಿತ ಕೆಎಲ್ ರಾಹುಲ್ ಅವರು 20ರನ್ ಗಳಿಸಿ ಆಡುತ್ತಿದ್ದಾರೆ.

ಇದಕ್ಕೂ ಮುನ್ನ ರವೀಂದ್ರ ಜಡೇಜ ಅವರು 22.4 ಓವರ್ ಗಳಲ್ಲಿ 6/63 ವಿಕೆಟ್ ಪಡೆದಿದ್ದಲ್ಲದೆ, ಡೀಪ್ ನಲ್ಲಿ ಮಿಚೆಲ್ ಸ್ಟಾರ್ಕ್ (23) ಅವರು ನೀಡಿದ ಕ್ಯಾಚನ್ನು ಅದ್ಭುತವಾಗಿ ಹಿಡಿದರು.
Story first published: Wednesday, January 3, 2018, 10:04 [IST]
Other articles published on Jan 3, 2018
Read in English: 2nd Test: India score 38/0 at Lunch
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications