2ನೇ ಟೆಸ್ಟ್ : ಆಸ್ಟ್ರೇಲಿಯಾ 112ಕ್ಕೆ ಕುಸಿತ, ಭಾರತಕ್ಕೆ ವಿಜಯ
ಬೆಂಗಳೂರು, ಮಾರ್ಚ್ 07: ನಗರದ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿರುವ ಎರಡನೇ ಟೆಸ್ಟ್ ಪಂದ್ಯವನ್ನು ಗೆಲ್ಲಲು ಪ್ರವಾಸಿ ಆಸ್ಟ್ರೇಲಿಯಾ ತಂಡಕ್ಕೆ 188 ರನ್ ಗಳ ಗುರಿಯನ್ನು ಬೆನ್ನು ಹತ್ತಿದ ಆಸ್ಟ್ರೇಲಿಯಾ ತಂಡ 112 ರನ್ ಗಳಿಗೆ ಕುಸಿತ ಕಂಡಿದೆ. ಈ ಮೂಲಕ 75ರನ್ ಗಳಿಂದ ಪಂದ್ಯವನ್ನು ಗೆದ್ದ ಕೊಹ್ಲಿ ಪಡೆ 1-1 ರಲ್ಲಿ ಸರಣಿ ಸಮ ಮಾಡಿಕೊಂಡಿದೆ.
188ರನ್ ಗುರಿ ಬೆನ್ನು ಹತ್ತಿದ ಆಸ್ಟ್ರೇಲಿಯಾಕ್ಕೆ ಭಾರತೀಯ ಬೌಲರ್ ಗಳು ಆಘಾತ ನೀಡಿದರು. ಡೇವಿಡ್ ವಾರ್ನರ್ 17ರನ್ ಗಳಿಸಿ ಔಟಾದರೆ, ನಾಯಕ ಸ್ಟೀವ್ ಸ್ಮಿತ್ (28) ಹಾಗೂ ಶಾನ್ ಮಾರ್ಷ್(9) ರನ್ನು ಉಮೇಶ್ ಯಾದವ್ ಅವರು ಎಲ್ ಬಿ ಬಲೆಗೆ ಕೆಡವಿಕೊಂಡರು. [ಗ್ಯಾಲರಿ : ಬೆಂಗಳೂರಿನಲ್ಲಿ ಇಂಡೋ-ಆಸೀಸ್ ಹಣಾಹಣಿ]

ರೆನ್ಶಾ ವಿಕೆಟ್ ಇಶಾಂತ್ ಶರ್ಮ ಪಾಲಾದರೆ, ಆರ್ ಅಶ್ವಿನ್ 6 ವಿಕೆಟ್ ಕಬಳಿಸಿದರು. ಪೀಟರ್ ಹ್ಯಾಂಡ್ಸ್ ಕಂಬ್ ಅವರು 19ರನ್ ಗಳಿಸಿ ಪ್ರತಿರೋಧ ಒಡ್ಡಿದ್ದರು.

ಭಾರತ ತನ್ನ ಎರಡನೇ ಇನ್ನಿಂಗ್ಸ್ ನಲ್ಲಿ ಬ್ಯಾಟಿಂಗ್ ಕುಸಿತ ಕಂಡು 274 ಆಲೌಟ್ ಆಗಿದೆ. ಚೇತೇಶ್ವರ್ ಪೂಜಾರಾ 92 ರನ್, ಕೆಎಲ್ ರಾಹುಲ್ ಅವರು 51 ರನ್ ಗಳಿಸಿದರೆ, ರಹಾನೆ 52 ರನ್ ಗಳಿಸಿದರು. ಆಸ್ಟ್ರೇಲಿಯಾ ಪರ ಜೋಶ್ ಹೇಜಲ್ ವುಡ್ 6/57 ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿಕೊಂಡರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications