Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಸ್ಮಿತ್ ಅಣಕಿಸಿದ ಇಶಾಂತ್, ಕಿಸಕಿಸನೆ ನಕ್ಕ ಕೊಹ್ಲಿ!

ಬೆಂಗಳೂರು, ಮಾರ್ಚ್ 05: ಆಸ್ಟ್ರೇಲಿಯಾದವರು ಸ್ಲೈಡ್ಜಿಂಗ್ ಮಾಡುತ್ತಾರೆ ಎಂಬ ಮಾತಿದೆ. ಆದರೆ, ಆಸ್ಟ್ರೇಲಿಯಾದ ನಾಯಕ ಸ್ಮಿತ್ ರನ್ನು ಭಾರತದ ವೇಗಿ ಇಶಾಂತ್ ಶರ್ಮ ಅವರು ಪಂದ್ಯದ ವೇಳೆ ಅಣಕಿಸಿದ್ದು ನೋಡಿ, ನಾಯಕ ವಿರಾಟ್ ಕೊಹ್ಲಿ ಕಿಸಕ್ಕನೆ ನಗೆಯಾಡಿದ್ದಾರೆ. ಈ ರಸನಿಮಿಷಕ್ಕೆ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣ ಸಾಕ್ಷಿಯಾಯಿತು.

ಬಾರ್ಡರ್ ಗವಾಸ್ಕರ್ ಟ್ರೋಫಿಯ 2ನೇ ಟೆಸ್ಟ್ ಪಂದ್ಯದಲ್ಲಿ ಹೀಗೊಂದು ಹಾಸ್ಯಮಯ ಪ್ರಸಂಗ ನಡೆಯಿತು. ಈ ಪ್ರಸಂಗದ ವಿಡಿಯೋವನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಹಂಚಿಕೊಂಡಿದ್ದರೆ, ಕ್ರಿಕೆಟ್ ಆಸ್ಟ್ರೇಲಿಯಾ ಕೂಡಾ ಟ್ವೀಟ್ ಮಾಡಿದೆ. ಇನ್ನು ಅಭಿಮಾನಿಗಳು, ಕಾಮೆಂಟೆಟರ್ ಗಳ ಪಾಲಿಗೆ ಈ ಪ್ರಸಂಗ ಹಾಸ್ಯ ರಸಾಯನವಾಗಿದೆ.

ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ 189 ರನ್‌ಗಳಿಸಿ ಅಲ್ಪಮೊತ್ತಕ್ಕೆ ಆಲೌಟ್ ಆಗಿದ್ದು ತಿಳಿದಿರಬಹುದು. ಆಸ್ಟ್ರೇಲಿಯಾ ತನ್ನ ಮೊದಲ ಇನ್ನಿಂಗ್ಸ್ ನಲ್ಲಿ ವಿಕೆಟ್ ಕಾಯ್ದುಕೊಂಡು ಭಾರತದ ಬೌಲರ್ ಗಳನ್ನು ಕಾಡ ತೊಡಗಿದ ಸಂದರ್ಭದಲ್ಲಿ ಇಂಥದ್ದೊಂದು ಘಟನೆ ನಡೆದಿದೆ. ಇಶಾಂತ್ -ಸ್ಮಿತ್ ನಡುವಿನ ಭಾವಾಭಿನಯದ ದೃಶ್ಯಗಳ ಬಗ್ಗೆ ಟ್ವಿಟ್ಟರ್ ನಲ್ಲಿ ಬಂದಿರುವ ಪ್ರತಿಕ್ರಿಯೆಗಳು ಇಲ್ಲಿವೆ...

ಟೆಸ್ಟ್ ಕ್ರಿಕೆಟ್ ನಲ್ಲಿ ಹಾಸ್ಯ

ಟೆಸ್ಟ್ ಕ್ರಿಕೆಟ್ ನಲ್ಲಿ ಹಾಸ್ಯ

ಇಶಾಂತ್ ಶರ್ಮ ಅವರ ಒಂದು ಎಸೆತವನ್ನು ಆಡಲು ಆಗದೆ ಸ್ಟೀವ್ ಸ್ಮಿತ್ ಹೆಣಗಾಡುತ್ತಾ ಮುಖ ಒಂದು ರೀತಿ ಮಾಡಿದರು. ಇದನ್ನು ನೋಡಿ ಇಶಾಂತ್ ಶರ್ಮ ಅಣಕಿಸಿದರು. ಆದರೆ, ಇದು ಹಾಸ್ಯಮಯ ಪ್ರಸಂಗವಾಗಿ ಎಲ್ಲರ ಗಮನಸೆಳೆಯಿತು. ಯಾವುದೇ ಗಲಾಟೆ ಎಡೆ ಮಾಡಲಿಲ್ಲ.

ಮೈದಾನದಲ್ಲಿ ಹಾಸ್ಯದ ಹೊನಲು

ಇಶಾಂತ್ ಶರ್ಮ ನೀಡಿರುವ ಭಾವಾಭಿನಯ ನೋಡಿದರೆ ಅಚ್ಚರಿಯಾಗುತ್ತದೆ. ಬಾಲಿವುಡ್ ನ ಎಷ್ಟೋ ನಟರುಗಳಿಗೆ ಅಭಿನಯವೆ ಬರುವುದಿಲ್ಲ. ಇಶಾಂತ್ ಬಾಲಿವುಡ್ ಗೆ ಬಂದರೆ ಎಲ್ಲರನ್ನು ಮೀರಿಸಬಲ್ಲರು.

ಕ್ರಿಕೆಟ್ ಆಸ್ಟ್ರೇಲಿಯಾದಿಂದ ಟ್ವೀಟ್

ಕ್ರಿಕೆಟ್ ಆಸ್ಟ್ರೇಲಿಯಾ, ಈ ಪ್ರಸಂಗದ ಬಗ್ಗೆ ಟ್ವೀಟ್ ಮಾಡಿ ಮೈದಾನದಲ್ಲಿ ಏನೇನೋ ಆಗುತ್ತಿದೆ. ನೋಡಿ ಎಂದಿದೆ.

ಮಾಜಿ ಆಟಗಾರ್ತಿ ಲಿಸಾ

ಆಸ್ಟ್ರೇಲಿಯಾದ ಮಾಜಿ ಆಟಗಾರ್ತಿ ಲೀಸಾ ಪ್ರತಿಕ್ರಿಯಿಸಿ, ಟೆಸ್ಟ್ ಕ್ರಿಕೆಟ್ ಬೋರಿಂಗ್ ಎಂದು ಯಾರು ಹೇಳಿದ್ದು, ಸ್ವಲ್ಪ ಈ ಪಂದ್ಯ ನೋಡಿ ಎಂದಿದ್ದಾರೆ.

ಕಿಸಕ್ಕೆಂದು ನಕ್ಕ ವಿರಾಟ್

ಸ್ಮಿತ್ ಹಾಗೂ ಇಶಾಂತ್ ನಡುವಿನ ಆಟ ನೋಟ ಕಂಡು ನಗು ತಡೆಯಲಾಗದೆ ಕಿಸಕ್ಕೆಂದು ನಕ್ಕ ನಾಯಕ ವಿರಾಟ್ ಕೊಹ್ಲಿ

Story first published: Wednesday, January 3, 2018, 10:04 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+