IND vs AUS: ಸರಣಿಯಲ್ಲಿ ಮುನ್ನಡೆ ಯಾರಿಗೆ? ಮ್ಯಾಕ್ಸ್‌ವೆಲ್ ಮೇಲೆ ಎಲ್ಲರ ಕಣ್ಣು
ಸರಣಿಯಲ್ಲಿ ಮುನ್ನಡೆ ಸಾಧಿಸಲು ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ನಾಲ್ಕನೇ ಟಿ20 ಪಂದ್ಯ ಕ್ಯಾರಾರಾದಲ್ಲಿ ನಡೆಯಲಿದೆ. ಈಗಾಗಲೇ ಉಭಯ ತಂಡಗಳು ತಲಾ ಒಂದೊಂದು ಪಂದ್ಯವನ್ನು ಗೆದ್ದಿವೆ. ಮೂರನೇ ಟಿ20 ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡಿರುವ ಟೀಮ್ ಇಂಡಿಯಾ ಆತ್ಮವಿಶ್ವಾಸದಿಂದ ಬೀಗುತ್ತಿದೆ. ಹೀಗಾಗಿ ನಾಲ್ಕನೇ ಟಿ20 ಪಂದ್ಯದಲ್ಲೂ ಗೆಲುವು ದಾಖಲಿಸುವ ಹುಮ್ಮಸ್ಸಿನಲ್ಲಿದೆ.
ಈ ಮೈದಾನದಲ್ಲಿ ಬ್ಯಾಟರ್‌ಗಳಿಗೆ ತುಂಬ ಸಹಾಯ ಮಾಡಲಿದೆ. ಹೀಗಾಗಿ ಈ ಮೈದಾನದಲ್ಲಿ ರನ್ ಹೊಳೆಯನ್ನು ನಿರೀಕ್ಷಿಸಬಹುದಾಗಿದೆ. ಉಭಯ ತಂಡಗಳಲ್ಲಿ ಸ್ಟಾರ್ ಆಟಗಾರರು ಇದ್ದು, ಪಂದ್ಯ ರೋಚಕತೆ ಹೆಚ್ಚಿಸಿದೆ. ಟೀಮ್ ಇಂಡಿಯಾದಲ್ಲಿ ಸ್ಟಾರ್ ಆಟಗಾರರು ಅಭಿಮಾನಿಗಳನ್ನು ರಂಜಿಸಲು ಪ್ಲ್ಯಾನ್ ಮಾಡಿಕೊಂಡಿದ್ದಾರೆ.

ಟೀಮ್ ಇಂಡಿಯಾದ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ತಮ್ಮ ನೈಜ್ಯ ಆಟವನ್ನು ಆಡಲು ತಯಾರಿ ನಡೆಸಿದ್ದಾರೆ. ಇವರು ಈ ವರ್ಷದಲ್ಲಿ ಆಡುವ ಧಾಟಿಯಂತೆ ಬ್ಯಾಟ್ ಮಾಡುವ ಅನಿವಾರ್ಯತೆ ಇದೆ. ಇನ್ನು ಶುಭಮನ್ ಗಿಲ್ ಆಸ್ಟ್ರೇಲಿಯಾ ಪ್ರವಾಸದಲ್ಲಿ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ. ಇವರು ಈ ಪಂದ್ಯದಲ್ಲಿ ಬಿಗ್ ಇನಿಂಗ್ಸ್ ಕಟ್ಟಬೇಕಿದೆ. ಅಂದಾಗ ದೊಡ್ಡ ಮೊತ್ತದ ಕನಸು ನನಸಾಗುತ್ತದೆ.
ಆಲ್‌ರೌಂಡರ್‌ಗಳ ಬಲ
ಟೀಮ್ ಇಂಡಿಯಾದ ನಾಯಕ ಸೂರ್ಯಕುಮಾರ್ ಯಾದವ್ ಒಳ್ಳೆಯ ಆರಂಭವನ್ನು ಪಡೆದರೂ ಸಹ ದೊಡ್ಡ ಇನಿಂಗ್ಸ್ ಆಡುತ್ತಿಲ್ಲ. ಹೀಗಾಗಿ ಇವರ ಮೇಲೂ ಒತ್ತಡವಿದೆ. ಇನ್ನು ತಿಲಕ್ ವರ್ಮಾ ಸಮಯೋಚಿತ ಆಟವನ್ನು ಆಡಬೇಕಿದೆ. ವಿಕೆಟ್ ಕೀಪರ್ ಬ್ಯಾಟರ್ ಜಿತೇಶ್ ಶರ್ಮಾ ಫಿನಿಷರ್ ಪಾತ್ರವನ್ನು ಉತ್ತಮವಾಗಿ ನಿರ್ವಹಿಸಬೇಕಿದೆ. ಆಲ್‌ರೌಂಡರ್‌ಗಳಾ ಕಾಣಿಸಿಕೊಳ್ಳುವ ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ಶಿವಂ ದುಬೆ ತಮ್ಮ ಮೇಲೆ ತಂಡ ಇಟ್ಟ ನಂಬಿಕಗೆ ಪೂರಕವಾಗಿ ಆಟವನ್ನು ಆಡಬೇಕಿದೆ.
ವೇಗದ ಬೌಲಿಂಗ್ ನೊಗವನ್ನು ಜಸ್ಪ್ರಿತ್ ಬುಮ್ರಾ ಜೊತೆಗೆ ಅರ್ಷದೀಪ್ ಸಿಂಗ್ ಹೊರಲಿದ್ದು, ಎದುರಾಳಿಗಳನ್ನು ತಮ್ಮ ಬಿಗುವಿನ ದಾಳಿಯ ಮೂಲಕ ಕಾಡಿ ರನ್‌ಗಳಿಗೆ ಕಡಿವಾಣ ಹಾಕಬೇಕಿದೆ. ಇನ್ನು ವರುಣ್ ಚಕ್ರವರ್ತಿ ಸ್ಪಿನ್ ಪಿರ್ಕಿ ಪ್ರದರ್ಶಿಸಬೇಕಿದೆ. ಅಂದಾಗ ಸೂರ್ಯಕುಮಾರ್ ಪಡೆ ಕಾಣುತ್ತಿರುವ 2-1ರ ಮುನ್ನಡೆ ನನಸಾಗುತ್ತದೆ.
ಭಾರತದ ಸಂಭಾವ್ಯ ತಂಡ: ಅಭಿಷೇಕ್ ಶರ್ಮಾ, ಶುಭಮನ್ ಗಿಲ್, ಸೂರ್ಯಕುಮಾರ್ ಯಾದವ್ (ನಾಯಕ), ತಿಲಕ್ ವರ್ಮಾ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಜಿತೇಶ್ ಶರ್ಮಾ, ಶಿವಂ ದುಬೆ, ಅರ್ಶ್ ದೀಪ್ ಸಿಂಗ್, ವರುಣ್ ಚಕ್ರವರ್ತಿ, ಜಸ್ಪ್ರೀತ್ ಬುಮ್ರಾ

ಕಳೆದ ಪಂದ್ಯದಲ್ಲಿ ಭರವಸೆ ಮೂಡಿಸಿದ್ದ ಟೀಮ್ ಡೇವಿಡ್ ಹಾಗೂ ಮಾರ್ಕಸ್ ಸ್ಟೋಯ್ನಿಸ್ ಸ್ಥಿರ ಪ್ರದರ್ಶನ ವಿಶ್ವಾಸ ಹೊಂದಿದ್ದಾರೆ. ಟ್ರಾವಿಸ್ ಹೆಡ್, ಮಿಚೆಲ್ ಮಾರ್ಷ್ ತಮ್ಮ ಬಿರುಸಿನ ಬ್ಯಾಟಿಂಗ್ ಮೂಲಕ ಎದುರಾಳಿಗಳನ್ನು ಕಾಡಬಲ್ಲರು. ಗ್ಲೇನ್ ಮ್ಯಾಕ್ಸ್‌ವೆಲ್ ತಂಡಕ್ಕೆ ಮತ್ತೆ ಎಂಟ್ರಿ ನೀಡಿದ್ದು ತಂಡಕ್ಕೆ ಆನೆ ಬಲ ಬಂದಂತೆ ಆಗಿದೆ. ವೇಗಿಗಳು ಕರಾರುವಾಕ್ ದಾಳಿ ನಿರ್ವಹಿಸವು ಕನಸಿನಲ್ಲಿದ್ದಾರೆ. ಸರಣಿಯಲ್ಲಿ ಯಾವ ತಂಡ ಮುನ್ನಡೆ ಸಾಧಿಸಲಿದೆ ಎಂಬುದು ಕುತೂಹಲ ಮೂಡಿಸಿದೆ.
ಆಸ್ಟ್ರೇಲಿಯಾ ಸಂಭಾವ್ಯ ತಂಡ: ಮ್ಯಾಟ್ ಶಾರ್ಟ್, ಮಿಚೆಲ್ ಮಾರ್ಷ್ (ನಾಯಕ), ಜೋಶ್ ಇಂಗ್ಲಿಸ್ (ವಿಕೆಟ್ ಕೀಪರ್), ಟಿಮ್ ಡೇವಿಡ್, ಮಿಚ್ ಓವನ್, ಮಾರ್ಕಸ್ ಸ್ಟೊಯಿನಿಸ್, ಗ್ಲೆನ್ ಮ್ಯಾಕ್ಸ್ ವೆಲ್, ಕ್ಸೇವಿಯರ್ ಬಾರ್ಟ್ಲೆಟ್, ಬೆನ್ ಡ್ವಾರ್ಶುಯಿಸ್, ನಾಥನ್ ಎಲ್ಲಿಸ್, ಮ್ಯಾಟ್ ಕುಹ್ನೆಮನ್
ಪ್ರಮುಖ ದಾಖಲೆಗಳು
ಗ್ಲೇನ್ ಮ್ಯಾಕ್ಸ್‌ವೆಲ್ ಈ ಪಂದ್ಯದಲ್ಲಿ ಒಂದು ವಿಕೆಟ್ ಪಡೆದರೆ ಟಿ20 ಕ್ರಿಕೆಟ್‌ನಲ್ಲಿ 50 ವಿಕೆಟ್ ಪೂರೈಸಲಿದ್ದಾರೆ.
ನಾಥನ್ ಎಲ್ಲಿಸ್ ನಾಲ್ಕನೇ ಪಂದ್ಯದಲ್ಲಿ 3 ವಿಕೆಟ್ ಕಬಳಿಸಿದರೆ ಟಿ20 ಕ್ರಿಕೆಟ್‌ನಲ್ಲಿ 50 ವಿಕೆಟ್ ಪಡೆದ ಸಾಧನೆ ಮಾಡಲಿದ್ದಾರೆ.
ಟೀಮ್ ಇಂಡಿಯಾದ ಮಧ್ಯಮ ಕ್ರಮಾಂಕದ ಬ್ಯಾಟರ್ ತಿಲಕ್ ವರ್ಮಾ 9 ರನ್ ಬಾರಿಸಿದರೆ ಚುಟುಕು ಫಾರ್ಮೆಟ್‌ನಲ್ಲಿ 1 ಸಾವಿರ ರನ್ ಪೂರ್ಣಗೊಳಿಸಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications