Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಈ ಕಾರಣಕ್ಕಾಗಿಯೇ ಸೂರ್ಯಕುಮಾರ್ ಯಾದವ್ ಟಿ20ಯಲ್ಲಿ ಅಪಾಯಕಾರಿ ಬ್ಯಾಟರ್: ಆಕಾಶ್ ಚೋಪ್ರ

ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಭಾರತ ರೋಚಕ ಗೆಲುವು ಸಾಧಿಸಿದೆ. ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್ ಹಾಗೂ ಅಂತಿಮವಾಗಿ ರಿಂಕು ಸಿಂಗ್ ಅವರ ಅಮೋಘ ಪ್ರದರ್ಶನ ಭಾರತಕ್ಕೆ ಎರಡು ವಿಕೆಟ್‌ಗಳ ಅಂತರದ ಗೆಲುವನ್ನು ಸಾಧಿಸಲು ಕಾರಣವಾಗಿದೆ. ಈ ಪಂದ್ಯದ ಮೂಲಕ ನಾಯಕನಾಗಿ ಪದಾರ್ಪಣೆ ಮಾಡಿದ ಸೂರ್ಯಕುಮಾರ್ ಯಾದವ್ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದ್ದು 42 ಎಸೆತಗಳಲ್ಲಿ 80 ರನ್‌ಗಳನ್ನು ಬಾರಿಸಿದರು.ಭರ್ಜರಿ ನಾಲ್ಕು ಸಿಕ್ಸರ್ ಹಾಘೂ 9 ಬೌಂಡರಿ ಬಾರಿಸಿದ್ದರು ಸೂರ್ಯಕುಮಾರ್ ಯಾದವ್.

ಈ ಸ್ಪೋಟಕ ಬ್ಯಾಟಿಂಗ್ ಪ್ರದರ್ಶನದ ಬಗ್ಗೆ ಕಾಮೆಂಟೇಟರ್ ಆಕಾಶ್ ಚೋಪ್ರ ವಿಶೇಷ ಪ್ರಶಂಸೆಯ ಮಾತುಗಳನ್ನಾಡಿದ್ದಾರೆ. ಸೂರ್ಯಕುಮಾರ್ ಯಾದವ್ ಅವರನ್ನು 360 ಡಿಗ್ರಿ ಆಟಗಾರ ಎಂದ ಆಕಾಶ್ ಚೋಪ್ರ, ಚುಟುಕು ಮಾದರಿಯಲ್ಲಿ ಈ ಆಕ್ರಮಣಕಾರಿ ಆಟಗಾರ ಅತ್ಯಂತ ಹೆಚ್ಚು ಸ್ವಾತಂತ್ರ್ಯದಿಂದ ಆಡುತ್ತಾರೆ ಎಂದಿದ್ದಾರೆ.

India vs Australia: Aakash Chopra praises Suryakumar Yadav said he is a dangerous batter in T20Is

"ಆತ 360 ಡಿಗ್ರಿ ಆಟಗಾರನಾಗಿದ್ದು ಬೌಲರ್‌ಗಳು ಭಿನ್ನವಾಗಿ ಯೋಚಿಸುವಂತೆ ಮಾಡುತ್ತಾರೆ. ಅವರಿಗಾಗಿ ವಿಶೇಷ ಯೋಜನೆಗಳನ್ನು ಮಾಡಬೇಕಾಗುತ್ತದೆ. ಆತ ಚುಟುಕು ಮಾದರಿಯಲ್ಲಿ ಅತಿ ಹೆಚ್ಚು ಸ್ವಾತಂತ್ರ್ಯದಿಂದ ಆಡುತ್ತಾರೆ. ಪಿಚ್ ಕೂಡ ಆತನಿಗೆ ಬೆಂಬಲವಾಗುವಂತೆಯೇ ಇತ್ತು. ಟಿ20 ಮಾದರಿಯಲ್ಲಿ 10ರಲ್ಲಿ 9 ಬಾರಿ ಇಂಥಾ ಪಿಚ್‌ಗಳೇ ದೊರೆಯುತ್ತದೆ" ಎಂದಿದ್ದಾರೆ ಆಕಾಶ್ ಚೋಪ್ರ.

ಈ ಪಂದ್ಯದಲ್ಲಿ ಮೊದಲಿಗೆ ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ತಂಡ ಸ್ಪೋಟಕ ಪ್ರದರ್ಶನ ನೀಡಿತು.ಆರಂಭಿಕ ಆಟಗಾರ ಮ್ಯಾಥ್ಯೂ ಶಾರ್ಟ್ ಅವರನ್ನು ಬೇಗನೆ ಕಳೆದುಕೊಂಡ ಆಸ್ಟ್ರೇಲಿಯಾ ಬಳಿಕ ಸ್ಟಿವ್ ಸ್ಮಿತ್ ಹಾಗೂ ಜೋಶ್ ಇಂಗ್ಲೀಸ್ ಅವರಿಂದ ಬೃಹತ್ ಜೊತೆಯಾಟ ಪಡೆಯಿತು. 130 ರನ್‌ಗಳ ಜೊತೆಯಾಟ ಆಸಿಸ್ ಪಡೆಯನ್ನು ದೊಡ್ಡ ಮೊತ್ತದತ್ತ ಹೆಜ್ಜೆಯಿಡುವಂತೆ ಮಾಡಿತು.

ಈ ಪೈಕಿ ಸ್ಮಿತ್ 41 ಎಸೆತಗಳಲ್ಲಿ 52 ರನ್‌ಗಳನ್ನು ಗಳಿಸಿ ವಿಕೆಟ್ ಕಳೆದುಕೊಂಡರು. ಜೋಸ್ ಇಂಗ್ಲೀಸ್ ಕೇವಲ 50 ಎಸೆತಗಳನ್ನು ಎದುರಿಸಿದ್ದು 11 ಬೌಂಡರಿ ಹಾಗೂ 8 ಸಿಕ್ಸರ್‌ಗಳ ನೆರವಿನಿಂದ 110 ರನ್‌ಗಳನ್ನು ಬಾರಿಸಿದ್ದಾರೆ. ಅಂತಿಮವಾಗಿ ಆಸ್ಟ್ರೇಲಿಯಾ ನಿಗದಿತ 20 ಓವರ್‌ಗಳಲ್ಲಿ 208 ರನ್‌ಗಳನ್ನು ಕಲೆಹಾಕಿತು.

ಭಾರತ ಆಡುವ ಬಳಗ: ಋತುರಾಜ್ ಗಾಯಕ್ವಾಡ್, ಯಶಸ್ವಿ ಜೈಸ್ವಾಲ್, ಇಶಾನ್ ಕಿಶನ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್ (ನಾಯಕ), ತಿಲಕ್ ವರ್ಮಾ, ರಿಂಕು ಸಿಂಗ್, ಅಕ್ಸರ್ ಪಟೇಲ್, ರವಿ ಬಿಷ್ಣೋಯ್, ಅರ್ಷದೀಪ್ ಸಿಂಗ್, ಮುಖೇಶ್ ಕುಮಾರ್, ಪ್ರಸಿದ್ಧ್ ಕೃಷ್ಣ
ಬೆಂಚ್: ಶಿವಂ ದುಬೆ, ವಾಷಿಂಗ್ಟನ್ ಸುಂದರ್, ಅವೇಶ್ ಖಾನ್, ಜಿತೇಶ್ ಶರ್ಮಾ

ಆಸ್ಟ್ರೇಲಿಯಾ: ಮ್ಯಾಥ್ಯೂ ಶಾರ್ಟ್, ಸ್ಟೀವನ್ ಸ್ಮಿತ್, ಜೋಶ್ ಇಂಗ್ಲಿಸ್, ಆರನ್ ಹಾರ್ಡಿ, ಮಾರ್ಕಸ್ ಸ್ಟೊಯಿನಿಸ್, ಟಿಮ್ ಡೇವಿಡ್, ಮ್ಯಾಥ್ಯೂ ವೇಡ್ (ನಾಯಕ & ವಿಕೆಟ್ ಕೀಪರ್), ಸೀನ್ ಅಬಾಟ್, ನಾಥನ್ ಎಲ್ಲಿಸ್, ಜೇಸನ್ ಬೆಹ್ರೆಂಡಾರ್ಫ್, ತನ್ವೀರ್ ಸಂಘ
ಬೆಂಚ್: ಟ್ರಾವಿಸ್ ಹೆಡ್, ಗ್ಲೆನ್ ಮ್ಯಾಕ್ಸ್ವೆಲ್, ಆಡಮ್ ಝಂಪಾ, ಕೇನ್ ರಿಚರ್ಡ್ಸನ್

Story first published: Friday, November 24, 2023, 8:37 [IST]
Other articles published on Nov 24, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+