ಬಾಕ್ಸಿಂಗ್ ಡೇ ಟೆಸ್ಟ್: ರಾಹುಲ್- ವಿಜಯ್ ಡ್ರಾಪ್, ಕನ್ನಡಿಗ ಮಯಾಂಕ್ ಪಾದಾರ್ಪಣೆ

ಮೆಲ್ಬರ್ನ್, ಡಿಸೆಂಬರ್ 25: ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಸತತ ವೈಫಲ್ಯ ಅನುಭವಿಸುತ್ತಿರುವ ಆರಂಭಿಕರಾದ ಕೆ.ಎಲ್. ರಾಹುಲ್ ಮತ್ತು ಮುರಳಿ ವಿಜಯ್ ಇಬ್ಬರನ್ನೂ ಮೂರನೇ ಟೆಸ್ಟ್‌ನಿಂದ ಕೈಬಿಡಲಾಗಿದ್ದು, ಮತ್ತೊಬ್ಬ ಕನ್ನಡಿಗ ಮಯಾಂಕ್ ಅಗರವಾಲ್ ಅವರಿಗೆ ಸ್ಥಾನ ನೀಡಲಾಗಿದೆ.
ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಮಯಾಂಕ್ ಅಗರವಾಲ್ ಜೊತೆಯಲ್ಲಿ ಮಧ್ಯಮ ಕ್ರಮಾಂಕದಲ್ಲಿ ಎರಡು ಪಂದ್ಯಗಳನ್ನು ಆಡಿರುವ ಹನುಮ ವಿಹಾರಿ ಇನ್ನಿಂಗ್ಸ್ ಆರಂಭಿಸುವ ನಿರೀಕ್ಷೆಯಿದೆ.
ಗಾಯದಿಂದ ಕಳೆದ ಪಂದ್ಯದಿಂದ ಹೊರಗುಳಿದಿದ್ದ ರೋಹಿತ್ ಶರ್ಮಾ ಮೂರನೇ ಪಂದ್ಯದ ಹನ್ನೊಂದರ ಬಳಗಕ್ಕೆ ಮರಳಿದ್ದಾರೆ. ಆದರೆ, ಆರ್. ಅಶ್ವಿನ್ ಮತ್ತು ಇತ್ತೀಚೆಗೆ ಗಾಯದಿಂದ ಚೇತರಿಸಿಕೊಂಡು ತಂಡವನ್ನು ಸೇರಿಕೊಂಡಿರುವ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರಿಗೆ ಆಡುವ ಬಳಗದಲ್ಲಿ ಸ್ಥಾನ ಸಿಕ್ಕಿಲ್ಲ.
ಕಳೆದ ಪಂದ್ಯದಲ್ಲಿ ಹನ್ನೆರಡನೆಯ ಆಟಗಾರನಾಗಿದ್ದ ಆಲ್‌ರೌಂಡರ್ ರವೀಂದ್ರ ಜಡೇಜಾ, ವೇಗಿ ಉಮೇಶ್ ಯಾದವ್ ಅವರ ಬದಲು ಆಡುತ್ತಿದ್ದಾರೆ.

295ನೇ ಆಟಗಾರ ಅಗರವಾಲ್
ಮಯಾಂಕ್ ಅಗರವಾಲ್ ಭಾರತದ ಪರ ಟೆಸ್ಟ್ ಆಡುತ್ತಿರುವ 295ನೇ ಆಟಗಾರ ಎನಿಸಿದ್ದಾರೆ. ಪೃಥ್ವಿ ಶಾ ಗಾಯದ ಸಮಸ್ಯೆಯಿಂದ ಸರಣಿಯಿಂದ ಹೊರಗುಳಿದಿದ್ದಾರೆ. ಆರಂಭಿಕರಾದ ರಾಹುಲ್ ಮತ್ತು ಮುರಳಿ ವಿಜಯ್ ಕಳಪೆ ಪ್ರದರ್ಶನ ಭಾರತಕ್ಕೆ ತಲೆನೋವಾಗಿದೆ. ಹೀಗಾಗಿ ಆಸ್ಟ್ರೇಲಿಯಾ ವಿರುದ್ಧದ ಮಹತ್ವದ ಪಂದ್ಯದಲ್ಲಿ ಪಾದಾರ್ಪಣೆ ಮಾಡುತ್ತಿರುವ ಮಯಾಂಕ್ ಮೇಲೆ ಹೆಚ್ಚಿನ ಒತ್ತಡ ಹಾಗೂ ಜವಾಬ್ದಾರಿಯಿದೆ.
ರಾಹುಲ್-ವಿಜಯ್ ವೈಫಲ್ಯ
ಈ ವರ್ಷ ಉಪಖಂಡದಾಚೆ ಮುರಳಿ ವಿಜಯ್ ಏಳು ಟೆಸ್ಟ್ ಪಂದ್ಯಗಳಲ್ಲಿ ಕೇವಲ ಒಂದು ಅರ್ಧಶತಕ ಗಳಿಸಿದ್ದಾರೆ. ಇಂಗ್ಲೆಂಡ್ ಸರಣಿಯಲ್ಲಿ ಅವರನ್ನು ಅರ್ಧದಲ್ಲಿಯೇ ಕೈಬಿಡಲಾಗಿತ್ತು. ಇಂಗ್ಲೆಂಡ್‌ನಲ್ಲಿ ಐದು ಟೆಸ್ಟ್ ಮತ್ತು ಆಸ್ಟ್ರೇಲಿಯಾ ವಿರುದ್ಧ ಎರಡು ಟೆಸ್ಟ್ ಆಡಿರುವ ರಾಹುಲ್, ಒಂದೇ ಒಂದು ಶತಕ ಗಳಿಸಿದ್ದಾರೆ. ಬಳಿಕ ಅವರ ಗರಿಷ್ಠ ರನ್ 44.
ಹೀಗಾಗಿ ಆರಂಭಿಕ ಜೋಡಿಯ ಆಯ್ಕೆಯಲ್ಲಿ ಒತ್ತಡಕ್ಕೆ ಸಿಲುಕಿರುವ ಭಾರತ, ಹನುಮ ವಿಹಾರಿ ಅವರಿಗೆ ಬಡ್ತಿ ನೀಡಲು ನಿರ್ಧರಿಸಿದೆ. ಅಜಿಂಕ್ಯ ರಹಾನೆ ಮತ್ತು ರೋಹಿತ್ ಶರ್ಮಾ ಅವರನ್ನು ಆರಂಭಿಕರಾಗಿ ಕಳುಹಿಸುವ ಆಯ್ಕೆಗಳೂ ತಂಡದ ಮುಂದಿವೆ. ಇಬ್ಬರು ಅನನುಭವಿಗಳು ಇನ್ನಿಂಗ್ಸ್ ಆರಂಭಿಸುವ ಹೊಣೆ ನಿಭಾಯಿಸಬೇಕಾಗಿದೆ.
ನಾಳೆಯಿಂದ (ಡಿ 26) ಆರಂಭವಾಗಲಿರುವ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದ ತಂಡಗಳು ಹೀಗಿವೆ.
ಆಸೀಸ್ ವಿರುದ್ಧ ಏಕದಿನ, ನ್ಯೂಜಿಲ್ಯಾಂಡ್ ವಿರುದ್ಧ ಟಿ20ಗೆ ಭಾರತ ತಂಡ ಪ್ರಕಟ
ಭಾರತ ಹನ್ನೊಂದರ ಬಳಗ
ವಿರಾಟ್ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ (ಉಪನಾಯಕ), ಮಯಾಂಕ್ ಅಗರವಾಲ್, ಹನುಮ ವಿಹಾರಿ, ಚೇತೇಶ್ವರ ಪೂಜಾರ, ರೋಹಿತ್ ಶರ್ಮಾ, ರಿಷಬ್ ಪಂತ್, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಇಶಾಂತ್ ಶರ್ಮಾ, ಜಸ್ ಪ್ರೀತ್ ಬೂಮ್ರಾ.

ಆಸ್ಟ್ರೇಲಿಯಾ ತಂಡ
ಮಾರ್ಕಸ್ ಹ್ಯಾರಿಸ್, ಆರೋನ್ ಫಿಂಚ್, ಉಸ್ಮಾನ್ ಖವಾಜಾ, ಶಾನ್ ಮಾರ್ಷ್, ಟ್ರಾವಿಸ್ ಹೆಡ್, ಮಿಚೆಲ್ ಮಾರ್ಷ್, ಟಿಮ್ ಪೈನ್ (ನಾಯಕ/ವಿಕೆಟ್ ಕೀಪರ್), ಪ್ಯಾಟ್ ಕಮಿನ್ಸ್, ಮಿಚೆಲ್ ಸ್ಟಾರ್ಕ್, ನಥಾನ್ ಲಿಯಾನ್, ಜೋಶ್ ಹ್ಯಾಜಲ್ ವುಡ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications