For Quick Alerts
ALLOW NOTIFICATIONS  
For Daily Alerts
 

ಭಾರತದ ವಿರುದ್ಧ ಕೊನೆಯ ಟಿ20: ಆಸ್ಟ್ರೇಲಿಯಾ ತಂಡಕ್ಕೆ ಮರಳಿದ ಮಿಚೆಲ್ ಸ್ಟಾರ್ಕ್

India vs Australia final T20 Mitchell Starc called up replacing Billy Stanlake

ಮೆಲ್ಬರ್ನ್, ನವೆಂಬರ್ 24: ಭಾರತದ ವಿರುದ್ಧ ಟಿ20 ಸರಣಿ ಗೆಲ್ಲುವ ತವಕದಲ್ಲಿರುವ ಆಸ್ಟ್ರೇಲಿಯಾ, ಕೊನೆಯ ಹಾಗೂ ಮಹತ್ವದ ಮೂರನೇ ಪಂದ್ಯಕ್ಕೆ ತನ್ನ ಪ್ರಮುಖ ವೇಗಿ ಮಿಚೆಲ್ ಸ್ಟಾರ್ಕ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ.

ಗಾಯಗೊಂಡಿರುವ ವೇಗದ ಬೌಲರ್ ಬಿಲ್ಲಿ ಸ್ಟಾನ್ಲೇಕ್ ಅವರ ಬದಲು ಮಿಚೆಲ್ ಸ್ಟಾರ್ಕ್ ಸಿಡ್ನಿಯಲ್ಲಿ ನಡೆಯಲಿರುವ ಕೊನೆಯ ಪಂದ್ಯಕ್ಕಾಗಿ ತಂಡವನ್ನು ಸೇರಿಕೊಳ್ಳಲಿದ್ದಾರೆ.

ಮೆಲ್ಬರ್ನ್ ಟಿ20ಯ ಪಂದ್ಯಕ್ಕೂ ಮುನ್ನ ನಡೆದ ಫೀಲ್ಡಿಂಗ್ ಅಭ್ಯಾಸದ ವೇಳೆ ಸ್ಟಾನ್ಲೇಕ್ ಗಾಯಗೊಂಡಿದ್ದರು. ಹೀಗಾಗಿ ಅವರ ಬದಲು ನಥಾನ್ ಕೌಲ್ಟರ್ ನೈಲ್ ಅವರನ್ನು ಆಡಿಸಲಾಗಿತ್ತು. ಗಾಯದಿಂದ ಚೇತರಿಸಿಕೊಳ್ಳಲು ಸಾಧ್ಯವಾಗದೆ ಇರುವುದರಿಂದ ಸ್ಟಾನ್ಲೇಕ್ ಅವರ ಬದಲು 13 ಆಟಗಾರರರ ಬಳಗಕ್ಕೆ ಸ್ಟಾರ್ ಅವರನ್ನು ಆಯ್ಕೆ ಮಾಡಲಾಗಿದೆ.

28 ವರ್ಷದ ಸ್ಟಾರ್ಕ್ ತಮ್ಮ ಕೊನೆಯ ಟಿ20 ಪಂದ್ಯವನ್ನು ಆಡಿದ್ದು 2016ರ ಸೆಪ್ಟೆಂಬರ್‌ನಲ್ಲಿ. ಈ ಚಟುಕು ಮಾದರಿಯಲ್ಲಿ ತವರಿನ ಮೈದಾನದಲ್ಲಿ ಆಡಿದ್ದು 2014ರಲ್ಲಿಯೇ ಕೊನೆ. ಭಾರತದ ವಿರುದ್ಧದ ಟಿ20 ಸರಣಿಗೆ ಅವರಿಗೆ ವಿಶ್ರಾಂತಿ ನೀಡಲಾಗಿತ್ತು. ಭಾರತದ ವಿರುದ್ಧದ ಟೆಸ್ಟ್ ಸರಣಿ ಮುಖ್ಯವಾಗಿದ್ದರಿಂದ ಅದಕ್ಕಾಗಿ ಅವರು ಸಿದ್ಧತೆ ನಡೆಸುತ್ತಿದ್ದರು.

ಮೂರನೇ ಹಾಗೂ ಕೊನೆಯ ಟಿ20 ಪಂದ್ಯವನ್ನು ಗೆದ್ದರೆ ಆಸ್ಟ್ರೇಲಿಯಾ ಸರಣಿಯನ್ನು ತನ್ನ ವಶಕ್ಕೆ ಪಡೆದುಕೊಳ್ಳಲಿದೆ. ಎರಡನೆಯ ಪಂದ್ಯ ಮಳೆಯ ಕಾರಣದಿಂದ ರದ್ದಾಗಿದ್ದರಿಂದ ಮೊದಲ ಪಂದ್ಯವನ್ನು ಸೋತಿದ್ದ ಭಾರತಕ್ಕೆ ಮೂರನೇ ಪಂದ್ಯವನ್ನು ಗೆದ್ದು ಸರಣಿ ಸಮ ಮಾಡಿಕೊಳ್ಳುವುದೊಂದೇ ಇರುವ ಮಾರ್ಗ.

Story first published: Saturday, November 24, 2018, 11:14 [IST]
Other articles published on Nov 24, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+