ಭಾರತ vs ಆಸ್ಟ್ರೇಲಿಯಾ: ಪಂದ್ಯದ ಬಳಿಕದ ತಮಾಷೆಯ ಟ್ವೀಟ್‌ಗಳು

ಕ್ಯಾನ್ಬೆರಾ: ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ಸೋತಿದ್ದ ಟೀಮ್ ಇಂಡಿಯಾ ಟಿ20ಐ ಸರಣಿಯ ಆರಂಭಿಕ ಪಂದ್ಯದಲ್ಲೇ ಗೆಲುವು ದಾಖಲಿಸಿದೆ. ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಕನ್ಕಶನ್ ಸಬ್ಸ್‌ಟಿಟ್ಯೂಟ್ ನಿಯಮವೂ ಒಂದರ್ಥದಲ್ಲಿ ವಿರಾಟ್ ಕೊಹ್ಲಿ ಪಡೆಯ ಜಯಕ್ಕೆ ಕಾರಣವಾಗಿದೆ. ಈ ನಿಯಮದ ಮೂಲಕ ರವೀಂದ್ರ ಜಡೇಜಾ ಬದಲಿಗೆ ಮೈದಾನಕ್ಕಿಳಿದ ಸ್ಪಿನ್ನರ್ ಯುಜುವೇಂದ್ರ ಚಾಹಲ್ ಮಾರಕ ಬೌಲಿಂಗ್ ನಡೆಸಿದರು. ಪರಿಣಾಮ ಭಾರತ ತಂಡ 11 ರನ್‌ಗಳ ರೋಚಕ ಜಯ ಕಂಡಿತು.
ಕ್ಯಾನ್ಬೆರಾ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟಿದ ಭಾರತ ತಂಡ ಆಸ್ಟ್ರೇಲಿಯಾಕ್ಕೆ 162 ರನ್ ಗುರಿ ನೀಡಿತ್ತಾದರೂ, ಆಸ್ಟ್ರೇಲಿಯಾ 150 ರನ್ ಬಾರಿಸಿ ಪ್ರವಾಸಿಗರಿಗೆ ತಲೆ ಬಾಗಿದೆ.
ಪಂದ್ಯದ ಬಳಿಕ ಇತ್ತಂಡಗಳ ನಡುವಿನ ಈ ಪಂದ್ಯಕ್ಕೆ ಸಂಬಂಧಿಸಿ ತಮಾಷೆಯ ಟ್ವೀಟ್‌ಗಳು ಸಾಮಾಜಿಕ ಜಾಲತಾಣದಲ್ಲಿ ಓಡಾಡುತ್ತಿವೆ. ಅವುಗಳಲ್ಲಿ ಆಯ್ದ ಕೆಲವು ಇಲ್ಲಿವೆ.
ವಿರಾಟ್ ಕೊಹ್ಲಿ ಕ್ಯಾಚ್ ಡ್ರಾಪ್
ಪಂದ್ಯದ ವೇಳೆ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸುಲಭದ ಕ್ಯಾಚ್ ಡ್ರಾಪ್ ಮಾಡಿದ್ದರು. ದೀಪಕ್ ಚಹಾರ್ ಓವರ್‌ನಲ್ಲಿ ಡಿ ಆರ್ಸಿ ಶಾರ್ಟ್ ಅವರ ಸುಲಭ ಕ್ಯಾಚನ್ನು ಕೊಹ್ಲಿ ಕೈ ಚೆಲ್ಲಿದ್ದರು. ಇದಕ್ಕೆ ನೆಟ್ಟಿಗರು ಟ್ವೀಟ್ ಮೂಲಕ ತಮಾಷೆ ಮಾಡಿದ್ದಾರೆ.
ಜಸ್ಟಿನ್ ಲ್ಯಾಂಗರ್ ಗರಂ
ಐಸಿಸಿಯ ಕನ್ಕಶನ್ ಸಬ್ಸ್‌ಟಿಟ್ಯೂಟ್ ಮೂಲಕ ಗಾಯಕ್ಕೀಡಾಗಿದ್ದ ರವೀಂದ್ರ ಜಡೇಜಾ ಬದಲಿಗೆ ಯುಜುವೇಂದ್ರ ಚಾಹಲ್ ಮೈದಾನಕ್ಕಿಳಿದು ಬೌಲಿಂಗ್ ಮಾಡಿದ್ದು ಆಸೀಸ್ ಕೋಚ್ ಜಸ್ಟಿನ್ ಲ್ಯಾಂಗರ್‌ಗೆ ಸರಿ ಕಾಣಲಿಲ್ಲ. ಲ್ಯಾಂಗರ್ ಅವರು ಮ್ಯಾಚ್ ರೆಫರೀ ಡೇವಿಡ್ ಬೂನ್ ಜೊತೆ ವಾಗ್ವಾದ ನಡೆಸಿದ್ದರು. ಆದರೂ ಬೂನ್ ಚಾಹಲ್‌ಗೆ ಬೌಲಿಂಗ್‌ಗೆ ಅನುವು ಮಾಡಿಕೊಟ್ಟಿದ್ದರು. ಈ ಬಗ್ಗೆ ಟ್ವೀಟ್‌ಗಳು ಹರಿದಾಡುತ್ತಿವೆ.
ಕನ್ಕಶನ್ ಸಬ್ಸ್‌ಟಿಟ್ಯೂಟ್
ಕನ್ಕಶನ್ ಸಬ್ಸ್‌ಟಿಟ್ಯೂಟ್ ಮೂಲಕ ಜಡೇಜಾ ಬದಲು ಮೈದಾನಕ್ಕಿಳಿದ ಚಾಹಲ್ ಆಸ್ಟ್ರೇಲಿಯಾದ ಪ್ರಮುಖ ವಿಕೆಟ್‌ಗಳನ್ನು ಉರುಳಿಸಿದರು. ನಾಯಕ ಆ್ಯರನ್ ಫಿಂಚ್ (35 ರನ್), ಸ್ಟೀವ್ ಸ್ಮಿತ್ (12) ಮತ್ತು ಮ್ಯಾಥ್ಯೂ ವೇಡ್ (7) ವಿಕೆಟ್‌ಗಳು ಲಭಿಸಿದವು. ಚಾಹಲ್ 4 ಓವರ್‌ಗೆ 25 ರನ್ ನೀಡಿ 3 ವಿಕೆಟ್ ಮುರಿದು ಗಮನ ಸೆಳೆದಿದ್ದರು. ಪಂದ್ಯ ಕೂಡ 11 ರನ್‌ನಿಂದ ಭಾರತ ಗೆದ್ದಿತು.
ಕೆಎಲ್ ರಾಹುಲ್ ಅರ್ಧ ಶತಕ
ಕ್ಯಾನ್ಬೆರಾದ ಮನುಕಾ ಓವಲ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಭಾರತ, ಕೆಎಲ್ ರಾಹುಲ್ 51, ವಿರಾಟ್ ಕೊಹ್ಲಿ 9, ಸಂಜು ಸ್ಯಾಮ್ಸನ್ 23, ಹಾರ್ದಿಕ್ ಪಾಂಡ್ಯ 16, ರವೀಂದ್ರ ಜಡೇಜಾ 44 (23 ಎಸೆತ) ರನ್‌ನೊಂದಿಗೆ 20 ಓವರ್‌ಗೆ 7 ವಿಕೆಟ್ ಕಳೆದು 161 ರನ್ ಗಳಿಸಿತ್ತು.
ಪಂದ್ಯದ ತಿರುವಿಗೆ ಕಾರಣ
ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ, ಡಿ ಆರ್ಸಿ ಶಾರ್ಟ್ 34, ಆ್ಯರನ್ ಫಿಂಚ್ 35, ಸ್ಟೀವ್ ಸ್ಮಿತ್ 12, ಮೋಯ್ಸಸ್ ಹೆನ್ರಿಕ್ಸ್ 30, ಸೀನ್ ಬಟಾಟ್ 12, ಮಿಚೆಲ್ ಸ್ವೆಪ್ಸನ್ 12 ರನ್‌ನೊಂದಿಗೆ 20 ಓವರ್‌ಗೆ7 ವಿಕೆಟ್ ಕಳೆದು 150 ರನ್ ಬಾರಿಸಿ ಶರಣಾಯಿತು. ಭಾರತದ ಇನ್ನಿಂಗ್ಸ್‌ನಲ್ಲಿ ಗಾಯಗೊಂಡ ಜಡೇಜಾ ಅವರನ್ನು ಬದಲಿಸಿ ಚಾಹಲ್ ಅವರನ್ನು ಮೈದಾನಕ್ಕಿಳಿಸಿದ್ದು ಪಂದ್ಯದ ತಿರುವಿಗೆ ಕಾರಣವಾಯ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications