ಭಾರತ vs ಆಸೀಸ್: ಬೂಮ್ರಾ, ಶಮಿ ವೈಟ್‌ಬಾಲ್‌ನ ಎಲ್ಲಾ ಪಂದ್ಯ ಆಡಲ್ವಾ?

ನವದೆಹಲಿ: ಭಾರತದ ಪ್ರಮುಖ ವೇಗಿಗಳಾದ ಜಸ್‌ಪ್ರೀತ್ ಬೂಮ್ರಾ ಮತ್ತು ಮೊಹಮ್ಮದ್ ಶಮಿ ಮುಂಬರಲಿರುವ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ನಿಯಮಿತ ಓವರ್ ಕ್ರಿಕೆಟ್‌ನ ಎಲ್ಲಾ ಪಂದ್ಯಗಳನ್ನು ಆಡುವ ಸಾಧ್ಯತೆಯಿಲ್ಲ ಎನ್ನಲಾಗುತ್ತಿದೆ. ಟೆಸ್ಟ್ ಸರಣಿ ಗಮನದಲ್ಲಿಟ್ಟುಕೊಂಡು ಟೀಮ್ ಮ್ಯಾನೇಜ್ಮೆಂಟ್ ಬೂಮ್ರಾ ಮತ್ತು ಶಮಿಗೆ ಹೆಚ್ಚು ಕೆಲಸದ ಹೊರೆ ಹೊರೆಸದಿರಲು ನಿರ್ಧರಿಸಿದೆ ಎಂದು ತಿಳಿದು ಬಂದಿದೆ.
ಭಾರತ-ಆಸ್ಟ್ರೇಲಿಯಾ ಸರಣಿಯು 3 ಏಕದಿನ ಪಂದ್ಯಗಳು, 3 ಟಿ20ಐ ಪಂದ್ಯಗಳು ಮತ್ತು 4 ಟೆಸ್ಟ್ ಪಂದ್ಯಗಳನ್ನು ಒಳಗೊಂಡಿರಲಿದೆ. ಹೀಗಾಗಿ ಜಸ್‌ಪ್ರೀತ್ ಬೂಮ್ರಾ ಮತ್ತು ಮೊಹಮ್ಮದ್ ಶಮಿ ಇಬ್ಬರನ್ನೂ ನಿಯಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಎಲ್ಲಾ ಪಂದ್ಯಗಳನ್ನು ಆಡಿಸಿದರೆ ಅವರ ಮೇಲೆ ಹೆಚ್ಚಿನ ಕೆಲಸದ ಹೊರೆ ಬೀಳಲಿದೆ.
ಬೂಮ್ರಾ ಮತ್ತು ಶಮಿ ಮೇಲೆ ಹೆಚ್ಚಿನ ಒತ್ತಡ ಬೀಳದಿರಲು ಭಾರತ ಟೀಮ್ ಮ್ಯಾನೇಜ್ಮೆಂಟ್ ಒಂದು ಉಪಾಯ ಮಾಡಿದೆ. ಲಿಮಿಟೆಡ್ ಓವರ್ ಪಂದ್ಯಗಳ ವೇಳೆ ಒಂದು ಪಂದ್ಯದಲ್ಲಿ ಬೂಮ್ರಾ ಆಡಿದರೆ, ಮುಂದಿನ ಪಂದ್ಯದಲ್ಲಿ ಶಮಿಯನ್ನು ಆಡಿಸಲಾಗುತ್ತದೆ. ಆಗ ನಡು ನಡುವೆ ಇಬ್ಬರಿಗೂ ವಿಶ್ರಾಂತಿ ದೊರೆಯುತ್ತದೆ.
ಟೀಮ್ ಇಂಡಿಯಾದ ಪ್ರಮುಖ ವೇಗಿಗಳನ್ನು ಕುತೂಹಲಕಾರಿ ಟೆಸ್ಟ್ ಸರಣಿಗೂ ಬಳಸಿಕೊಳ್ಳುವುದಕ್ಕಾಗಿ ತಂಡ ನಿರ್ವಹಣಾ ಸಮಿತಿ ಈ ಉಪಾಯ ಮಾಡಿದೆ. ಲಿಮಿಟೆಡ್ ಓವರ್‌ನಲ್ಲಿ ಬೂಮ್ರಾ ಮತ್ತು ಶಮಿ ಎಲ್ಲಾ ಪಂದ್ಯಗಳನ್ನು ಆಡಿ ಸುಸ್ತಾಗುತ್ತಾರೆ. ಆಮೇಲೆ ಟೆಸ್ಟ್ ಸರಣಿಗೆ ಒಂದು ವೇಳೆ ಇಶಾಂತ್ ಶರ್ಮಾ ಲಭ್ಯರಿಲ್ಲದಿದ್ದರೆ ತಂಡದ ಬೌಲಿಂಗ್ ಬಣ ದುರ್ಬಲವಾಗುವ ಸಾಧ್ಯತೆಯಿದೆ. ಹೀಗಾಗಿ ಕೋಚ್ ರವಿ ಶಾಸ್ತ್ರಿ, ಬೌಲಿಂಗ್ ಕೋಚ್ ಭರತ್ ಅರುಣ್ ಈ ಯೋಚನೆ ಹಾಕಿಕೊಂಡಿದ್ದಾರೆ ಎಂದು ಬಲ್ಲಮೂಲವೊಂದು ತಿಳಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications