India vs Australia: ಕನ್ನಡ ಕಾಮೆಂಟರಿಗೆ ಅಭಿಮಾನಿಗಳ ಒತ್ತಾಯ

ಬೆಂಗಳೂರು: ನವೆಂಬರ್ 27ರಿಂದ ಭಾರತ vs ಆಸ್ಟ್ರೇಲಿಯಾ ನಡುವಿನ ಕುತೂಹಲಕಾರಿ ಸರಣಿ ಆರಂಭವಾಗಲಿದೆ. ಆಸ್ಟ್ರೇಲಿಯಾಕ್ಕೆ ಪ್ರವಾಸ ಹೋಗಿರುವ ವಿರಾಟ್ ಕೊಹ್ಲಿ ಪಡೆ ಅಲ್ಲಿ ಮೂರು ಏಕದಿನ ಪಂದ್ಯಗಳು, ಮೂರು ಟಿ20ಐ ಪಂದ್ಯಗಳು ಮತ್ತು ನಾಲ್ಕು ಟೆಸ್ಟ್ ಪಂದ್ಯಗಳನ್ನಾಡಲಿದೆ.
ಭಾರತ ಮತ್ತು ಆಸ್ಟ್ರೇಲಿಯಾ ಮುಖಾಮುಖಿ ರೋಚಕತೆಯಿಂದ ಕೂಡಿರುತ್ತದೆ. ಇತ್ತಂಡಗಳ ಕದಕ ವೀಕ್ಷಿಸಲು ಕ್ರಿಕೆಟ್ ಅಭಿಮಾನಿಗಳು ಕಾಯುತ್ತಿದ್ದಾರೆ. ಆದರೆ ಕರ್ನಾಟಕದ ಕ್ರಿಕೆಟ್ ಪ್ರಿಯರಿಗೆ ಬೇಸರದ ಸಂಗತಿಯೊಂದಿಗೆ. ಭಾರತ-ಆಸ್ಟ್ರೆಲಿಯಾ ಪಂದ್ಯಗಳ ಕಾಮೆಂಟರಿ ಕನ್ನಡದಲ್ಲಿ ಬರುತ್ತಿಲ್ಲ.
ಆಸ್ಟ್ರೇಲಿಯಾಕ್ಕೆ ಭಾರತದ ಪ್ರವಾಸ ಸರಣಿಗಳ ಅಧಿಕೃತ ಪ್ರಸಾರಕ ಸೋನಿ ಪಿಕ್ಚರ್ಸ್ ಸ್ಪೋರ್ಟ್ಸ್ ಇಂಡಿಯಾ ಸರಣಿಗೆ ಸಂಬಂಧಿಸಿ ಇತ್ತೀಚೆಗೆ ಕಾಮೆಂಟೇಟರ್‌ಗಳ ಪಟ್ಟಿ ಬಿಡುಗಡೆ ಮಾಡಿತ್ತು. ಇದರಲ್ಲಿ ಹಿಂದಿ, ಇಂಗ್ಲಿಷ್, ತಮಿಳು, ತೆಲುಗು ಭಾಷೆಗಳ ಕಾಮೆಂಟೇಟರ್‌ಗಳ ಪಟ್ಟಿಯಿತ್ತು. ಆದರೆ ಕನ್ನಡ ಭಾಷೆ ಈ ಪಟ್ಟಿಯಲ್ಲಿರಲಿಲ್ಲ.
ಕನ್ನಡದ ಕಡೆಗಣನೆ ಗಮನಿಸಿದ್ದ ಭಾರತದ ಕ್ರಿಕೆಟಿಗ ಕನ್ನಡಿಗ ದೊಡ್ಡ ಗಣೇಶ್, ಕನ್ನಡವನ್ನೂ ಪರಿಗಣಿಸುವಂತೆ ಸೋನಿ ಸ್ಪೋರ್ಟ್ಸ್ ಜೊತೆ ಕೇಳಿಕೊಂಡಿದ್ದರು. ಈಗ ಚೇತನ್ ಜೀರಾಳ್ ಕೂಡ #CommentaryInKannada ಹ್ಯಾಷ್ ಟ್ಯಾಗ್ ಅಭಿಯಾನದ ಮೂಲಕ ಕನ್ನಡ ಕಾಮೆಂಟರಿಗೆ ಒತ್ತಾಯಿಸುವಂತೆ ಕೇಳಿಕೊಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications