ಏಕದಿನ ಅದ್ಭುತ ಬ್ಯಾಟಿಂಗ್‌ಗಾಗಿ ಮೈಕೆಲ್ ಬೆವನ್ ಸಾಲಿನಲ್ಲಿ ವಿರಾಟ್ ಕೊಹ್ಲಿ

ರಾಂಚಿ, ಮಾರ್ಚ್ 9: ದಾಖಲೆ ಮೇಲೆ ದಾಖಲೆ ಬರೆಯುತ್ತಿರುವ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ರಾಂಚಿಯಲ್ಲಿ 41 ನೇ ಅಂತಾರಾಷ್ಟ್ರೀಯ ಏಕದಿನ ಶತಕದ ಮೂಲಕ ಮತ್ತೊಂದು ಅಪರೂಪದ ಸಾಧನೆ ಮಾಡಿದ್ದಾರೆ. ಅತ್ಯುತ್ತಮ ಬ್ಯಾಟಿಂಗ್ ಸರಾಸರಿಗಾಗಿ ಕೊಹ್ಲಿ, ಆಸ್ಟ್ರೇಲಿಯಾದ ಕ್ರಿಕೆಟ್ ದಂತಕತೆ ಮೈಕೆಲ್ ಬೆವನ್ ಸಾಲಿನಲ್ಲಿ ಸೇರಿಕೊಂಡಿದ್ದಾರೆ.
ರಾಂಚಿಯ ಜೆಎಸ್‌ಸಿಎ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ಶುಕ್ರವಾರ (ಮಾರ್ಚ್ 8) ನಡೆದ ಭಾರತ-ಆಸ್ಟ್ರೇಲಿಯಾ ಮೂರನೇ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ 95 ಎಸೆತಗಳಿಗೆ 123 ರನ್ ಬಾರಿಸಿದ್ದರು. ಆದರೆ ಪಂದ್ಯವನ್ನು 32 ರನ್‌ಗಳಿಂದ ಗೆದ್ದುಕೊಂಡ ಕಾಂಗರೂಪಡೆ ಐದು ಪಂದ್ಯಗಳ ಏಕದಿನ ಸರಣಿಯಲ್ಲಿ 1-2ರ ಮುನ್ನಡೆ ಸಾಧಿಸಿದೆ.
ಬ್ಯಾಟಿಂಗ್ ವಿಭಾಗ ಎಚ್ಚರಿಕೆ ಆಟವಾಡಿದ್ದರೆ ಭಾರತ ತಂಡ ಮೂರನೇ ಪಂದ್ಯವನ್ನೂ ಗೆದ್ದು ಏಕದಿನ ಸರಣಿಯನ್ನು ವಶಪಡಿಸಿಕೊಳ್ಳುತ್ತಿತ್ತು. ಆದರೆ ಕೊಹ್ಲಿ ಬಿಟ್ಟು ಉಳಿದ ಆಟಗಾರರು ಗಮನಾರ್ಹ ಆಟ ತೋರದಿದ್ದುದು ತಂಡದ ಸೋಲನ್ನು ಬರೆಯಿತು.

60.09ರ ಸರಾಸರಿ
41ನೇ ಶತಕದ ಸಾಧನೆ ಕೊಹ್ಲಿ ಬ್ಯಾಟಿಂಗ್ ಸರಾಸರಿಯಲ್ಲಿನ ಹೆಚ್ಚಳಕ್ಕೆ ಕಾರಣವಾಗಿದೆ. ಒಟ್ಟು 217 ಅಂತಾರಾಷ್ಟ್ರೀಯ ಏಕದಿನ ಇನ್ನಿಂಗ್ಸ್‌ಗಳಲ್ಲಿ ಕೊಹ್ಲಿ 10,816 ರನ್‌ನೊಂದಿಗೆ 60.09ರ ಸರಾಸರಿ ಹೊಂದಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ 60ರ ಮೇಲಿನ ಬ್ಯಾಟಿಂಗ್ ಸರಾಸರಿಗಾಗಿ ವಿಶ್ವದ ಎರಡನೇ ಆಟಗಾರನಾಗಿ ಕೊಹ್ಲಿ ಗುರುತಿಸಿಕೊಂಡಿದ್ದಾರೆ.

ಬೆವನ್ ಮೊದಲ ಸ್ಥಾನ
ಈ ಯಾದಿಯಲ್ಲಿ ಆಸ್ಟ್ರೇಲಿಯಾದ ಮೈಕೆಲ್ ಬೆವನ್ ಮೊದಲ ಸ್ಥಾನದಲ್ಲಿದ್ದು, ಬೆವನ್ 102 ಇನ್ನಿಂಗ್ಸ್‌ಗಳಲ್ಲಿ 62.1 ಸರಾಸರಿ ಸಾಧನೆ ತೋರಿದ್ದರು. ಇನ್ನು ಮೂರನೇ ಸ್ಥಾನದಲ್ಲಿರುವ ವೆಸ್ಟ್ ಇಂಡೀಸ್‌ನ ವಿವಿಯನ್ ರಿಚರ್ಡ್ಸ್ 100 ಇನ್ನಿಂಗ್ಸ್‌ಗಳಲ್ಲಿ 56.88 ಸರಾಸರಿ, ಸೌತ್ ಆಫ್ರಿಕಾದ ಹಾಶಿಮ್ ಆಮ್ಲಾ 108 ಇನ್ನಿಂಗ್ಸ್‌ಗಳಲ್ಲಿ 56.73ರ ಸರಾಸರಿ ಹೊಂದಿದ್ದಾರೆ.

ಏಕದಿನದಲ್ಲಿ ಅತ್ಯಧಿಕ ಬ್ಯಾಟಿಂಗ್ ಸರಾಸರಿ ಸಾಧಕರು
1. 62.13 (102 ಇನಿಂಗ್ಸ್): ಮೈಕಲ್ ಬೆವನ್ (ಆಸೀಸ್)
2. 60.08 (217 ಇನಿಂಗ್ಸ್): ವಿರಾಟ್ ಕೊಹ್ಲಿ (ಭಾರತ)
3. 56.88 (100 ಇನಿಂಗ್ಸ್): ವಿವ್ ರಿಚರ್ಡ್ಸ್ (ವೆಸ್ಟ್ ಇಂಡೀಸ್)
4. 56.73 (108 ನೇ ಇನ್ನಿಂಗ್ಸ್): ಹಶಿಮ್ ಆಮ್ಲಾ (ದಕ್ಷಿಣ ಆಫ್ರಿಕಾ)
5. 54.90 (107 ನೇ ಇನ್ನಿಂಗ್ಸ್): ಮೈಕೆಲ್ ಹಸ್ಸಿ (ಆಸೀಸ್)
6. 54.56 (192 ಇನಿಂಗ್ಸ್): ಎಬಿ ಡಿ ವಿಲಿಯರ್ಸ್ (ದಕ್ಷಿಣ ಆಫ್ರಿಕಾ)

ಫಿಂಚ್ ದಾಖಲೆ
ಆಸ್ಟ್ರೇಲಿಯಾ ಆರಂಭಿಕ ಆಟಗಾರರಾದ ನಾಯಕ ಆ್ಯರನ್ ಫಿಂಚ್ ಮತ್ತು ಉಸ್ಮಾನ್ ಖವಾಜಾ ಉತ್ತಮ ಜೊತೆಯಾಟ ನೀಡಿದ್ದು ತಂಡದ ಗೆಲುವಿಗೆ ಕಾರಣವಾಯ್ತು. ಫಿಂಚ್ 93, ಖವಾಜಾ 104 ರನ್ ಸೇರಿಸಿ ಆಸೀಸ್ ಗೆಲುವನ್ನು ಬರೆದರು. ಈ ಪಂದ್ಯದಲ್ಲಿ ಫಿಂಚ್ 1000 ರನ್ ಪೂರೈಸಿದ ಆಸ್ಟ್ರೇಲಿಯಾ 16ನೇ ನಾಯಕನಾಗಿ ಗುರುತಿಸಿಕೊಂಡರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications