ಅಗರ್ಕರ್ 18 ವರ್ಷಗಳ ದಾಖಲೆ ಮುರಿಯಲಿದ್ದಾರೆ ಮೊಹಮ್ಮದ್ ಶಮಿ

ಸಿಡ್ನಿ: ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯ ಕಡೇಯ ಪಂದ್ಯವನ್ನಾದರೂ ಗೆದ್ದು ಕ್ಲೀನ್ ಸ್ವೀಪ್ ಮುಖಭಂಗವನ್ನು ತಪ್ಪಿಸಿಕೊಳ್ಳುವತ್ತ ಟೀಮ್ ಇಂಡಿಯಾ ಯೋಚಿಸುತ್ತಿದೆ. ಇತ್ತಂಡಗಳ ಕಡೇಯ ಏಕದಿನ ಪಂದ್ಯ ಡಿಸೆಂಬರ್ 2ರ ಬುಧವಾರ ಕ್ಯಾನ್ಬೆರಾದ ಮನುಕಾ ಓವಲ್ ಸ್ಟೇಡಿಯಂನಲ್ಲಿ ನಡೆಯಲಿದೆ.
ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ಭಾರತೀಯ ಬೌಲರ್‌ಗಳು ಅಂಥ ಪ್ರದರ್ಶನ ನೀಡಿರಲಿಲ್ಲ. ಭಾರತದ ವೇಗಿಗಳಾದ ಜಸ್‌ಪ್ರೀತ್ ಬೂಮ್ರಾ ಮತ್ತು ಮೊಹಮ್ಮದ್ ಶಮಿಯಿಂದಲೂ ಒಳ್ಳೆಯ ಬೌಲಿಂಗ್ ದಾಳಿ ಕಾಣಿಸಿರಲಿಲ್ಲ. ಬೂಮ್ರಾಗೆ ಎರಡು ಪಂದ್ಯಗಳಲ್ಲಿ 2 ವಿಕೆಟ್ ಸಿಕ್ಕಿದ್ದರೆ, ಶಮಿಗೆ 2 ಪಂದ್ಯಗಳಲ್ಲಿ 3 ವಿಕೆಟ್ ಸಿಕ್ಕಿತ್ತು.
ಆದರೆ ಶಮಿಗೆ ಕಡೇಯ ಏಕದಿನ ಪಂದ್ಯದಲ್ಲಿ ವಿಶೇಷ ದಾಖಲೆ ನಿರ್ಮಿಸುವ ಅವಕಾಶವಿದೆ. ಶಮಿ ಈಗ 79 ಏಕದಿನ ಪಂದ್ಯಗಳಲ್ಲಿ 148 ವಿಕೆಟ್ ಪಡೆದಿದ್ದಾರೆ. ಮುಂದಿನ ಪಂದ್ಯದಲ್ಲಿ 2 ವಿಕೆಟ್ ಸಿಕ್ಕರೆ ಏಕದಿನದಲ್ಲಿ ವೇಗವಾಗಿ 150 ವಿಕೆಟ್ ಪಡೆದ ಭಾರತದ ಮುಂಚೂಣಿ ಬೌಲರ್ ಆಗಿ ಅಜಿತ್ ಅಗರ್ಕರ್ ಹೆಸರಿನಲ್ಲಿರುವ ಸುಮಾರು 18 ವರ್ಷಗಳ ಹಿಂದಿನ ದಾಖಲೆ ಮುರಿಯಲಿದ್ದಾರೆ.
ಅಜಿತ್ ಅಗರ್ಕರ್ ಅವರು 97 ಪಂದ್ಯಗಳಲ್ಲಿ 150 ವಿಕೆಟ್ ಪಡೆದು ಭಾರತೀಯರ ಪರ ದಾಖಲೆ ನಿರ್ಮಿಸಿದ್ದರು. ವಿಶ್ವದಲ್ಲಿ ಅತೀ ವೇಗವಾಗಿ 150 ವಿಕೆಟ್ ಪಡೆದ 3ನೇ ವೇಗಿಯಾಗಿಯೂ ಶಮಿ ಗುರುತಿಸಿಕೊಳ್ಳಲಿದ್ದಾರೆ. ಈ ದಾಖಲೆ ಸಾಲಿನಲ್ಲಿ ಆಸ್ಟ್ರೇಲಿಯಾದ ಮಿಚೆಲ್ ಸ್ಟಾರ್ಕ್ (77 ಪಂದ್ಯಗಳು), ಪಾಕ್‌ನ ಸಕ್ಲೇನ್ ಮುಷ್ತಾಕ್ (79 ಪಂದ್ಯಗಳು) ಇದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications