ಸಿಡ್ನಿ ಟೆಸ್ಟ್ ಪಂದ್ಯಕ್ಕಾಗಿ ಟೀಂ ಇಂಡಿಯಾದ ಸಂಭಾವ್ಯ XI

ಸಿಡ್ನಿ, ಜನವರಿ 02: ಬಾರ್ಡರ್- ಗವಾಸ್ಕರ್ ಟ್ರೋಫಿಗಾಗಿ ನಡೆಯುವ ಆಸ್ಟ್ರೇಲಿಯಾ ಹಾಗೂ ಪ್ರವಾಸಿ ಭಾರತ ವಿರುದ್ಧದ ನಾಲ್ಕು ಟೆಸ್ಟ್ ಪಂದ್ಯಗಳ ಟೆಸ್ಟ್ ಸರಣಿಯ ಅಂತಿಮ ಟೆಸ್ಟ್ ಪಂದ್ಯವು ಜನವರಿ 03ರಂದು ಸಿಡ್ನಿಯಲ್ಲಿ ಆರಂಭವಾಗಲಿದೆ. ನಾಲ್ಕನೇ ಪಂದ್ಯಕ್ಕಾಗಿ ಭಾರತ ತಂಡಗಳ ಸಂಭಾವ್ಯ XI ಪಟ್ಟಿ ಇಲ್ಲಿದೆ.
ಕೆಂಪು ಚೆಂಡಿನ ದೀರ್ಘಾವಧಿ ಆಟದಲ್ಲಿ 97 ಬಾರಿ ಉಭಯ ತಂಡಗಳು ಎದುರಾಗಿವೆ. ಭಾರತ 28 ಬಾರಿ ಹಾಗೂ ಆಸ್ಟ್ರೇಲಿಯಾ 42 ಬಾರಿ ಗೆಲುವು ಸಾಧಿಸಿದೆ. 27 ಪಂದ್ಯಗಳು ಡ್ರಾನಲ್ಲಿ ಅಂತ್ಯ ಕಂಡಿದೆ.
ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಆಸ್ಟ್ರೇಲಿಯಾ 17 ಟೆಸ್ಟ್ ಪಂದ್ಯಗಳಲ್ಲಿ 13ರಲ್ಲಿ ಗೆಲುವು, 3 ಡ್ರಾ ಸಾಧಿಸಿದೆ. ಕಳೆದ ಏಳು ಟೆಸ್ಟ್ ಪಂದ್ಯಗಳಲ್ಲಿ ಸೋಲು ಕಂಡಿಲ್ಲ.
ಅನಾರೋಗ್ಯದಿಂದ ಬಳಲುತ್ತಿರುವ ಅಶ್ವಿನ್ ಅವರು ನಾಲ್ಕನೇ ಪಂದ್ಯಕ್ಕಾಗಿ ನೆಟ್ ಅಭ್ಯಾಸದಲ್ಲಿ ತೊಡಗಿದ್ದರು. ಆದರೆ, ಫಿಟ್ನೆಸ್ ಪರೀಕ್ಷೆಯಲ್ಲಿ ವಿಫಲರಾಗಿದ್ದು, ನಾಳಿನ ಪಂದ್ಯದಲ್ಲಿ ಆಡುವ ಹನ್ನೊಂದರ ಬಳಗ ಸೇರುವುದು ಅನುಮಾನವೆನಿಸಿದೆ.

ಭಾರತದ ಆರಂಭಿಕ ಆಟಗಾರರು
ಅಭ್ಯಾಸ ಪಂದ್ಯದಲ್ಲಿ ಯುವ ಆಟಗಾರ ಪೃಥ್ವಿ ಶಾ ಅವರು ಗಾಯಗೊಂಡು ಟೆಸ್ಟ್ ಸರಣಿಗೆ ಅಲಭ್ಯರಾದರು. ಲೋಕೇಶ್ ರಾಹುಲ್ ಹಾಗೂ ಮುರಳಿ ವಿಜಯ್ ಜತೆ ಆರಂಭಿಕ ಆಟಗಾರರಾಗಿ ವಿಫಲಗೊಂಡರು. ಕಳೆದ ಪಂದ್ಯದಲ್ಲಿ ಹನುಮ ವಿಹಾರಿ ಹಾಗೂ ಮಯಾಂಕ್ ಅಗರವಾಲ್ ಕಣಕ್ಕಿಳಿದರೂ ಹನುಮ ವಿಹಾರಿ ತಾತ್ಕಾಲಿಕ ಪಾತ್ರದಲ್ಲಿ ವಿಫಲರಾದರು. ಈಗ ಕೆಎಲ್ ರಾಹುಲ್ ಗೆ ಮತ್ತೊಮ್ಮೆ ಅವಕಾಶ ಸಿಕ್ಕಿದೆ.

ಮಧ್ಯಮ ಕ್ರಮಾಂಕ ಬಲಿಷ್ಠವಾಗಿದೆ
ಮಧ್ಯಮ ಕ್ರಮಾಂಕದಲ್ಲಿ ಚೇತೇಶ್ವರ್ ಪೂಜಾರಾ, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ ಹಾಗೂ ರಿಷಬ್ ಪಂತ್ ಆಡುವ ಸಾಧ್ಯತೆಯಿದೆ. ರಿಷಬ್ ಪಂತ್ ಅವರು ಟೆಸ್ಟ್ ಕ್ರಿಕೆಟ್ ವೃತ್ತಿಪರತೆಗೆ ಹೊಂದಿಕೊಳ್ಳುತ್ತಿದ್ದು, ವಿಕೆಟ್ ಕೀಪಿಂಗ್, ಸ್ಲೇಡ್ಜಿಂಗ್ ಎಲ್ಲದರಲ್ಲೂ ಸೈ ಎನಿಸಿಕೊಂಡರೂ ಬ್ಯಾಟಿಂಗ್ ಸುಧಾರಿಸಬೇಕಿದೆ.

ಆಲ್ ರೌಂಡರ್ ಗಳ ಕೊರತೆ
ರವಿಚಂದ್ರನ್ ಅಶ್ವಿನ್, ಹಾರ್ದಿಕ್ ಪಾಂಡ್ಯ ಹಾಗೂ ರವೀಂದ್ರ ಜಡೇಜರನ್ನು ಆಲ್ ರೌಂಡರ್ ರೂಪದಲ್ಲಿ ಕಾಣಲಾಗುತ್ತಿದೆ. ಈ ಪೈಕಿ ರವೀಂದ್ರ ಜಡೇಜ ಅವರು ಬೌಲಿಂಗ್ ನಲ್ಲಿ ಮಿಂಚಿದರೂ ಬ್ಯಾಟಿಂಗ್ ನಲ್ಲಿ ವಿಫಲರಾಗಿದ್ದಾರೆ.

ಕುಲದೀಪ್ ಯಾದವ್ ಗೆ ಅವಕಾಶ ಸಿಗಬಹುದು.
ಅಶ್ವಿನ್ ಅವರು ಅಲಭ್ಯರಾಗಿರುವುದರಿಂದ ಚೈನಾಮನ್ ಕುಲದೀಪ್ ಯಾದವ್ ಅವರಿಗೆ ಅವಕಾಶ ಸಿಗುವ ಸಾಧ್ಯತೆಯಿದೆ. ಜಸ್ ಪ್ರೀತ್ ಬೂಮ್ರಾ, ಮೊಹಮ್ಮದ್ ಶಮಿ ವೇಗಿಗಳಾಗಿ ಕಣಕ್ಕಿಳಿದರೆ, ಹನುಮ ವಿಹಾರಿ ಅವರ ಬೌಲಿಂಗ್ ತಂಡಕ್ಕೆ ನೆರವಾಗಬಲ್ಲದು.

ಸಂಭಾವ್ಯ ತಂಡಗಳು
ಭಾರತ : ಲೋಕೇಶ್ ರಾಹುಲ್, ಮಯಾಂಕ್ ಅಗರವಾಲ್, ಚೇತೇಶ್ವರ್ ಪೂಜಾರಾ, ವಿರಾಟ್ ಕೊಹ್ಲಿ(ನಾಯಕ), ರಿಷಬ್ ಪಂತ್(ವಿಕೆಟ್ ಕೀಪರ್), ಅಜಿಂಕ್ಯ ರಹಾನೆ, ಹನುಮ ವಿಹಾರಿ, ಮೊಹಮ್ಮದ್ ಶಮಿ, ಜಸ್ ಪ್ರೀತ್ ಬೂಮ್ರಾ, ಕುಲದೀಪ್ ಯಾದವ್ ಹಾಗೂ ರವೀಂದ್ರ ಜಡೇಜ.
ಆಸ್ಟ್ರೇಲಿಯಾ ತಂಡ : ಟಿಮ್ ಪೈನ್ (ನಾಯಕ, ವಿಕೆಟ್ ಕೀಪರ್), ಉಸ್ಮಾನ್ ಖವಾಜ, ಪೀಟರ್ ಹ್ಯಾಂಡ್ಸ್ ಕೊಂಬ್, ಪ್ಯಾಟ್ ಕುಮಿನ್ಸ್, ನಾಥನ್ ಲಿಯಾನ್, ಶಾನ್ ಮಾರ್ಷ್, ಟ್ರಾವಿಸ್ ಹೆಡ್, ಮಿಚೆಲ್ ಮಾರ್ಷ್, ಮಿಚೆಲ್ ಸ್ಟಾರ್ಕ್ . ಫಿಂಚ್ ಆಯ್ಕೆಯಾಗುವುದು ಕಷ್ಟ. ಪೀಟರ್ ಸಿಡ್ಲ್ ಹಾಗೂ ಮಾರ್ನುಸ್ ಲಬೂಸ್ ಚಾನೆ ಗೆ ಅವಕಾಶ ಸಿಕ್ಕರೂ ಅಚ್ಚರಿ ಪಡಬೇಕಾಗಿಲ್ಲ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications