For Quick Alerts
ALLOW NOTIFICATIONS  
For Daily Alerts
 

ಭಾರತ vs ಆಸ್ಟ್ರೇಲಿಯಾ ಟಿ20: ಆಟಗಾರರಿಗೆ ಮೊದಲ ಕಿವಿ ಮಾತು ಹೇಳಿದ ನಾಯಕ ಸೂರ್ಯಕುಮಾರ್

ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಿನ ಟಿ20 ಸರಣಿ ಇಂದಿನಿಂದ ಆರಂಭವಾಗಲಿದೆ. ಐದು ಪಂದ್ಯಗಳ ಈ ಸರಣಿಗೆ ಸೂರ್ಯಕುಮಾರ್ ಯಾದವ್ ನಾಯಕನಾಗಿ ತಂಡವನ್ನು ಮುನ್ನಡೆಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಸೂರ್ಯಕುಮಾರ್ ಯಾದವ್ ಮಾಧ್ಯಮಗಳ ಜೊತೆಗೆ ಮಾತನಾಡಿದ್ದು ಆಟಗಾರರಿಂದ ತಾನು ಏನನ್ನು ನಿರೀಕ್ಷಿಸುತ್ತಿದ್ದೇನೆ ಎನ್ನುವುದನ್ನು ಹೇಳಿಕೊಂಡಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಗೆ ಸಂಪೂರ್ಣ ಯುವ ಆಟಗಾರರನ್ನು ಒಳಗೊಂಡ ತಂಡ ಕಣಕ್ಕಿಳಿಯಲಿದೆ. ಈ ತಂಡವನ್ನು ಸೂರ್ಯಕುಮಾರ್ ಯಾದವ್ ಮುನ್ನಡೆಸಲಿದ್ದಾರೆ. ಪಂದ್ಯದ ಮು್ನನಾದಿನ ಮಾಧ್ಯಮಗಳ ಜೊತೆಗೆ ಮಾತನಾಡಿದ ನಾಯಕ ಸೂರ್ಯಕುಮಾರ್ ಯಾದವ್ ಆಟಗಾರರು ನಿರ್ಭೀತ ಹಾಗೂ ನಿಸ್ವಾರ್ಥ ಆಟವನ್ನು ಆಟಬೇಕು ಎಂದಿದ್ದಾರೆ.

India vs Australia: Skipper Suryakumar expect fearless and selfless performance

ಪಂದ್ಯದ ಹಿಂದಿನ ದಿನವಾದ ನವೆಂಬರ್ 22 ಬುಧವಾರ ಮಾಧ್ಯಮಗಳ ಜೊತೆಗೆ ಮಾತನಾಡಿದ ಸೂರ್ಯಕುಮಾರ್ ಯಾದವ್ "ನಾನು ಇಂದು ಮಧ್ಯಾಹ್ನ ತಂಡವನ್ನು ಭೇಟಿ ಮಾಡಿದೆ. ಮೈದಾನಕ್ಕಿಳಿಯುವಾಗ ಎಲ್ಲರೂ ನಿಸ್ವಾರ್ಥವಾಗಿ ಕಣಕ್ಕಿಳಿಯಬೇಕು ಎಂದಿದ್ದೇನೆ. ನಾನು ಯಾವುದೇ ವೈಯಕ್ತಿಕ ಮೈಲಿಗಲ್ಲುಗಳಿಗೆ ಯೋಚಿಸುವ ಆಟಗಾರ ಅಲ್ಲ. ಆಟಗಾರರಿಗೂ ತಂಡವೇ ಮೊದಲು ಎಂದುಕೊಳ್ಳುವಂತೆ ಹೇಳಿದ್ದೇನೆ" ಎಂದಿದ್ದಾರೆ ಸೂರ್ಯಕುಮಾರ್ ಯಾದವ್.

"ಟಿ20 ವಿಶ್ವಕಪ್ ಟೂರ್ನಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಪ್ರತಿ ಪಂದ್ಯವೂ ನಮಗೆ ಬಹಳ ಮುಖ್ಯ. ಹಾಗಾಗಿ ನಾವು ನಿರ್ಬೀತಿಯಿಂದ ಆಡುವುದನ್ನು ನಾನು ಬಾಯಸುತ್ತೇನೆ" ಎಂದು ಹೇಳಿಕೆ ನೀಡಿದ್ದಾರೆ ಹಂಗಾಮಿ ನಾಯಕ ಸೂರ್ಯಕುಮಾರ್ ಯಾದವ್

ಪಂದ್ಯದ ಸಮಯ ಹಾಗೂ ನೇರಪ್ರಸಾರ ಮಾಹಿತಿ

ಭಾರತ ಹಾಗೂ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯ ಮೊದಲ ಪಂದ್ಯ ನವೆಂಬರ್ 23 ಗುರುವಾರದಂದು ವಿಶಾಖಪಟ್ಟಣಂನ ವೈಎಸ್‌ ರಾಜಶೇಖರ ರೆಡ್ಡಿ ಸ್ಟೇಡಿಯಂನಲ್ಲಿ ಆಯೋಜನೆಯಾಗಲಿದೆ. ಸಂಜೆ 7 ಗಂಟೆಗೆ ಪಂದ್ಯ ಆರಂಭವಾಗಲಿದ್ದು ಅದಕ್ಕೂ ಅರ್ಧ ಗಂಟೆ ಮುನ್ನ ಅಂದರೆ 6:30ಕ್ಕೆ ಟಾಸ್ ಪ್ರಕ್ರಿಯೆ ನಡೆಯಲಿದೆ. ಸ್ಪೋರ್ಟ್ಸ್ 18-1 ಹಾಗೂ ಸ್ಪೋರ್ಟ್ಸ 18-1 HDಯಲ್ಲಿ ಈ ಪಂದ್ಯ ನೇರಪ್ರಸಾರವಾಗಲಿದೆ. ಇನ್ನು ಜಿಯೋ ಸಿನಿಮಾದಲ್ಲಿ ಈ ಪಂದ್ಯದ ಲೈವ್‌ಸ್ಟ್ರೀಮಿಂಗ್ ಆಗಲಿದೆ.

ಟೀಮ್ ಇಂಡಿಯಾ ಸಂಭಾವ್ಯ XI: ಋತುರಾಜ್ ಗಾಯಕ್ವಾಡ್, ಇಶಾನ್ ಕಿಶನ್, ಯಶಸ್ವಿ ಜೈಸ್ವಾಲ್/ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್, ರಿಂಕು ಸಿಂಗ್, ಶಿವಂ ದುಬೆ/ಜಿತೇಶ್ ಶರ್ಮಾ, ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ಅರ್ಷದೀಪ್ ಸಿಂಗ್, ಪ್ರಸಿದ್ಧ್ ಕೃಷ್ಣ, ಮುಖೇಶ್ ಕುಮಾರ್

ಆಸ್ಟ್ರೇಲಿಯಾ ಸಂಭಾವ್ಯ XI: ಮ್ಯಾಥ್ಯೂ ವೇಡ್, ಟ್ರಾವಿಸ್ ಹೆಡ್, ಸ್ಟೀವ್ ಸ್ಮಿತ್, ಗ್ಲೆನ್ ಮ್ಯಾಕ್ಸ್‌ವೆಲ್, ಮಾರ್ಕಸ್ ಸ್ಟೊಯಿನಿಸ್, ಟಿಮ್ ಡೇವಿಡ್, ಆರನ್ ಹಾರ್ಡಿ, ನಾಥನ್ ಎಲ್ಲಿಸ್, ಕೇನ್ ರಿಚರ್ಡ್ಸನ್ / ಶಾನ್ ಅಬಾಟ್, ಜೇಸನ್ ಬೆಹ್ರೆನ್ಡಾರ್ಫ್, ಆಡಮ್ ಝಂಪಾ

Story first published: Thursday, November 23, 2023, 9:29 [IST]
Other articles published on Nov 23, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+