For Quick Alerts
ALLOW NOTIFICATIONS  
For Daily Alerts
 

IND vs AUS ODI: ಆಸೀಸ್ ವಿರುದ್ಧ ಹೆಚ್ಚು ರನ್‌ ಕಲೆ ಹಾಕಿದ ಟಾಪ್‌ 5 ಬ್ಯಾಟರ್ಸ್‌

ಸದ್ಯ ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಣ ಟೆಸ್ಟ್‌ ಸರಣಿಯ ಎರಡನೇ ಪಂದ್ಯ ನಡೆಯುತ್ತಿದೆ. ಈ ಸರಣಿಯ ಬಳಿಕ ಭಾರತ ತಂಡ ಅಕ್ಟೋಬರ್ 15 ರಂದು ಆಸ್ಟ್ರೇಲಿಯಾ ಫ್ಲೈಟ್‌ ಏರಲಿದೆ. ಈ ಪ್ರವಾಸದಲ್ಲಿ ಟೀಮ್ ಇಂಡಿಯಾ ಆರಂಭದಲ್ಲಿ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆಡಲಿದ್ದು, ಬಳಿಕ ಐದು ಪಂದ್ಯಗಳ ಟಿ20 ಸರಣಿ ಆಡಲಿದೆ. ಈ ಸರಣಿಗಾಗಿ ಈಗಾಗಲೇ ಭಾರತ ತಂಡವನ್ನು ಪ್ರಕಟಿಸಲಾಗಿದ್ದು, ಅನುಭವಿ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಐಪಿಎಲ್‌ ವೇಳೆಯಲ್ಲಿ ಟೆಸ್ಟ್‌ ಕ್ರಿಕೆಟ್‌ಗೆ, ಟಿ20 ವಿಶ್ವಕಪ್‌ ಚಾಂಪಿಯನ್ ಆದ ಬಳಿಕ ಟಿ20 ಫಾರ್ಮೆಟ್‌ಗೆ ವಿದಾಯ ಹೇಳಿದ್ದರು. ಈ ಇಬ್ಬರೂ ಸೂಪರ್ ಸ್ಟಾರ್ ಆಟಗಾರರು ಈಗ ಭಾರತದ ಪರ ಕೇವಲ ಏಕದಿನ ಫಾರ್ಮೆಟ್‌ನಲ್ಲಿ ಮಾತ್ರ ಆಡಲಿದ್ದಾರೆ. ಹೀಗಾಗಿ ಅಭಿಮಾನಿಗಳ ಚಿತ್ತ ಈ ಆಟಗಾರರ ಮೇಲೆ ನೆಟ್ಟಿದೆ. ಆಸ್ಟ್ರೇಲಿಯಾ ಬೌಲರ್‌ಗಳನ್ನು ಟೀಮ್ ಇಂಡಿಯಾದ ಅನುಭವಿ ಬ್ಯಾಟರ್‌ಗಳು ಕಾಡಿದ್ದಾರೆ. ಅದರಲ್ಲಿ ಹೆಚ್ಚು ಕಾಡಿದ ಟಾಪ್‌ 5 ಬ್ಯಾಟರ್‌ಗಳ ಪಟ್ಟಿ ಇಲ್ಲಿದೆ.

India vs Australia Top 5 Indian Batsmen with Most ODI Runs Against Australia - Tendulkar to Kohli Rohit

ಆಸ್ಟ್ರೇಲಿಯಾ ವಿರುದ್ಧದ ಪಂದ್ಯಗಳು ಎಂದರೆ ಭಾರತೀಯ ಬ್ಯಾಟರ್‌ಗಳಿಗೆ ಅಚ್ಚು ಮೆಚ್ಚು. ಆಸೀಸ್ ವಿರುದ್ಧ ಅತಿ ಹೆಚ್ಚು ರನ್ ಕಲೆ ಹಾಕಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ದಿಗ್ಗಜ ಆಟಗಾರ ಸಚಿನ್ ತೆಂಡೂಲ್ಕರ್ ಅವರಿಗೆ ಅಗ್ರ ಸ್ಥಾನ. ಇವರು ಆಸೀಸ್‌ ವಿರುದ್ಧ ಆಡಿದ 71 ಪಂದ್ಯಗಳಲ್ಲಿ 44.59ರ ಸರಾಸರಿಯಲ್ಲಿ 3077 ರನ್‌ ಕಲೆ ಹಾಕಿದ್ದಾರೆ. ಈ ವೇಳೆ 9 ಶತಕ, 15 ಅರ್ಧಶತಕಗಳನ್ನು ಬಾರಿಸಿದ್ದಾರೆ.

ಭರವಸೆ ಹೆಚ್ಚಿಸಿರುವ ವಿರಾಟ್, ರೋಹಿತ್‌

ಟೀಮ್ ಇಂಡಿಯಾದ ಮಾಜಿ ನಾಯಕರಾದ ವಿರಾಟ್‌ ಕೊಹ್ಲಿ ಹಾಗೂ ರೋಹಿತ್‌ ಶರ್ಮಾ ಅವರಿಗೆ ಈ ಸರಣಿ ಮಹತ್ವದಾಗಿದೆ. ಈ ಸರಣಿಯಲ್ಲಿ ಅವರ ಪ್ರದರ್ಶನ ಹೇಗಿರಲಿದೆ ಎಂಬುದರ ಮೇಲೆ ಅವರ ವಿಶ್ವಕಪ್‌ ಪಯಣ ನಿರ್ಧರಿಸಲಾಗುತ್ತದೆ. ವಿರಾಟ್ ಕೊಹ್ಲಿ ಆಸೀಸ್ ವಿರುದ್ಧ 50 ಪಂದ್ಯಗಳನ್ನು ಆಡಿದ್ದು, 2451 ರನ್‌ ಕಲೆ ಹಾಇದ್ದಾರೆ. ಈ ವೇಳೆ 8 ಶತಕ ಹಾಗೂ 15 ಅರ್ಧಶತಕಗಳು ಸೇರಿವೆ. ಇನ್ನು ರೋಹಿತ್ ಶರ್ಮಾ ಸಹ ಆಸ್ಟ್ರೇಲಿಯಾ ಬೌಲರ್‌ಗಳಿಗೆ ಕಾಡಿರುವ ಬ್ಯಾಟರ್‌. ಇವರು ಆಡಿರುವ 46 ಪಂದ್ಯಗಳಲ್ಲಿ 2407 ರನ್‌ ಕಲೆ ಹಾಕಿದ್ದು, 8 ಶತಕ, 9 ಅರ್ಧಶತಕ ಸೇರಿವೆ.

India vs Australia Top 5 Indian Batsmen with Most ODI Runs Against Australia - Tendulkar to Kohli Rohit

ಆಸೀಸ್‌ ವಿರುದ್ಧ ಅತಿ ಹೆಚ್ಚು ರನ್‌ ಕಲೆ ಹಾಕಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಎಂಎಸ್‌ ಧೋನಿ ಅವರಿಗೆ ನಾಲ್ಕನೇ ಸ್ಥಾನ. ಇವರು ಆಡಿದ 55 ಪಂದ್ಯಗಳಲ್ಲಿ 1660 ರನ್‌ ಕಲೆ ಹಾಕಿದ್ದಾರೆ. ಇನ್ನು ಮಾಜಿ ಆರಂಭಿಕ ಆಟಗಾರ ಶಿಖರ್‌ ಧವನ್‌ 30 ಪಂದ್ಯಗಳಲ್ಲಿ 4 ಶತಕ, 7 ಅರ್ಧಶತಕ ಸೇರಿದಂತೆ 1265 ರನ್‌ ಕಲೆ ಹಕಿದ್ದಾರೆ.

Story first published: Tuesday, October 14, 2025, 8:15 [IST]
Other articles published on Oct 14, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+