Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಬ್ಯಾಟಿಂಗ್ ಮಾಡಿದ ಚಾಹಲ್ ಕಾಲೆಳೆದ ಡೇಲ್ ಸ್ಟೇನ್: ವಿಡಿಯೋ

India vs Australia: Yuzvendra Chahal trolled by Dale Steyn

ಸಿಡ್ನಿ: ಸುದೀರ್ಘ ಪ್ರವಾಸ ಸರಣಿಗಾಗಿ ಆಸ್ಟ್ರೇಲಿಯಾದಲ್ಲಿರುವ ವಿರಾಟ್ ಕೊಹ್ಲಿ ಪಡೆ ಮುಂಬರಲಿರುವ ಕುತೂಹಲಕಾರಿ ಸರಣಿಗಳಿಗಾಗಿ ತಯಾರಿ ನಡೆಸುತ್ತಿದೆ. ಭಾರತೀಯ ಆಟಗಾರರು ನೆಟ್ ಅಭ್ಯಾಸ ನಡೆಸುತ್ತಿದ್ದಾರೆ. ಬದ್ಧ ಎದುರಾಳಿ ತಂಡಗಳೆನಿಸಿರುವ ಭಾರತ-ಆಸ್ಟ್ರೇಲಿಯಾ ತಂಡಗಳ ನಡುವಿನ ಸ್ಪರ್ಧೆ ನವೆಂಬರ್ 27ರಿಂದ ಆರಂಭವಾಗಲಿದೆ.

ಭಾರತದ ಬೌಲರ್‌ಗಳು ಮತ್ತು ಬ್ಯಾಟ್ಸ್‌ಮನ್‌ಗಳು ತಾವು ನೆಟ್ ಪ್ರ್ಯಾಕ್ಟೀಸ್ ನಡೆಸುತ್ತಿರುವ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಭಾರತದ ತರಲೆ ಆಟಗಾರ, ಲೆಗ್ ಸ್ಪಿನ್ನರ್ ಯುಜುವೇಂದ್ರ ಚಾಹಲ್ ಕೂಡ ತಾನು ಬ್ಯಾಟಿಂಗ್ ಅಭ್ಯಾಸ ನಡೆಸುತ್ತಿರುವ ವಿಡಿಯೋ ಇನ್‌ಸ್ಟಾಗ್ರಾಮ್‌ನಲ್ಲಿ ಹಾಕಿಕೊಂಡಿದ್ದಾರೆ.

ಬೌಲರ್ ಆಗಿರುವ ಚಾಹಲ್ ಬ್ಯಾಟಿಂಗ್ ಅಭ್ಯಾಸ ನಡೆಸುತ್ತಿರುವ ವಿಡಿಯೋ ಹಂಚಿಕೊಂಡು ತರಲೆ ಮಾಡಿದ್ದರೆ, ದಕ್ಷಿಣ ಆಫ್ರಿಕಾದ ಮಾರಕ ವೇಗಿ ಡೇಲ್ ಸ್ಟೇನ್ ಚಾಹಲ್ ಕಾಲೆಳೆದಿದ್ದಾರೆ. ಚಾಹಲ್ ಇನ್‌ಸ್ಟಾಗ್ರಾಮ್‌ ವಿಡಿಯೋಗೆ ಸ್ಟೇನ್ 'ಫಾಸ್ಟ್ ಆಫ್‌ ಸ್ಪಿನ್ ಎದುರಿಸುತ್ತಿದ್ದೀಯಾ?' ಎಂದು ಕಾಮೆಂಟ್ ಮಾಡಿದ್ದಾರೆ.

India vs Australia: Yuzvendra Chahal trolled by Dale Steyn

ಇದಕ್ಕೆ ಪ್ರತಿಕ್ರಿಯಿಸಿರುವ ಚಾಹಲ್, 'ಅವೆಲ್ಲ ಸೀಕ್ರೆಟ್ ಸರ್' ಎಂದು ಬರೆದಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಚಾಹಲ್ ಮತ್ತು ಸ್ಟೇನ್ ಒಂದೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆಡುತ್ತಾರೆ. ಈ ಸಾರಿ ಸ್ಟೇನ್ ಆರ್‌ಸಿಬಿ ಪರ ಹೆಚ್ಚು ಪಂದ್ಯಗಳನ್ನಾಡಿರಲಿಲ್ಲ.

Story first published: Friday, November 20, 2020, 9:35 [IST]
Other articles published on Nov 20, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+