Ind vs Ban 3rd ODI: ವೈಟ್‌ವಾಶ್ ತಪ್ಪಿಸಿಕೊಳ್ಳುತ್ತಾ ಭಾರತ, ಸಂಭಾವ್ಯ XI, ಪಿಚ್ ರಿಪೋರ್ಟ್

ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಏಕದಿನ ಸರಣಿಯ ಅಂತಿಮ ಪಂದ್ಯ ಮಾತ್ರವೇ ಬಾಕಿಯಿದೆ. ಮೊದಲ ಎರಡು ಸರಣಿಯಲ್ಲಿ ಭಾರತ ಸೋಲು ಅನುಭವಿಸಿದ್ದು ಬಾಂಗ್ಲಾದೇಶ ಈಗಾಗಲೇ ಸರಣಿ ಗೆದ್ದಾಗಿದೆ. ಇದೀಗ ಏಕದಿನ ಸರಣಿಯ ಅಂತಿಮ ಪಂದ್ಯವನ್ನು ಗೆದ್ದು ವೈಟ್‌ವಾಶ್ ಮುಖಭಂಗದಿಂದ ತಪ್ಪಿಸಿಕೊಳ್ಳುವ ಪ್ರಯತ್ನ ನಡೆಸಲಿದೆ ಟೀಮ್ ಇಂಡಿಯಾ. ಶನಿವಾರ ಅಂತಿಮ ಏಕದಿನ ಪಂದ್ಯ ಆಯೋಜನೆಯಾಗಲಿದೆ.
ಟೀಮ್ ಇಂಡಿಯಾ ಮೊದಲ ಎರಡು ಪಂದ್ಯಗಳಲ್ಲಿ ಆಘಾತಕಾರಿ ಪ್ರದರ್ಶನ ನೀಡಿದ್ದು ಮುಖಭಂಗ ಅನುಭವಿಸಿದೆ. ಎರಡು ಪಂದ್ಯದಲ್ಲಿಯೂ ಬ್ಯಾಟಿಂಗ್ ವಿಭಾಗ ನೀರಸ ಪ್ರದರ್ಶನ ನೀಡಿದೆ. ಇನ್ನು ಬೌಲಿಂಗ್ ವಿಭಾಗ ಆರಂಭದಲ್ಲಿ ಸಾಧಿಸಿದ ಯಶಸ್ಸನ್ನು ಅಂತಿಮ ಹಂತದಲ್ಲಿ ಮುಂದುವರಿಸಲು ಪದೇ ಪದೇ ವಿಫಲವಾಗುತ್ತಿರುವುದು ತಂಡಕ್ಕೆ ದೊಡ್ಡ ಹಿನ್ನಡೆಗೆ ಕಾರಣವಾಗಿದೆ. ಈ ಮಧ್ಯೆ ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮಾ ಅಂತಿಮ ಪಂದ್ಯದಿಂದ ಹೊರಗುಳಿಯಲಿದ್ದು ದೀಪಕ್ ಚಾಹರ್ ಕೂಡ ಅಲಭ್ಯವಾಗಿದ್ದಾರೆ. ಹೀಗಾಗಿ ಅಂತಿಮ ಪಂದ್ಯದಲ್ಲಿ ಟೀಮ್ ಇಂಡಿಯಾ ಪ್ರದರ್ಶನ ಹೇಗಿರಲಿದೆ ಎಂಬುದು ಕುತೂಹಲ ಮೂಡಿಸಿದೆ.

ಪಂದ್ಯದ ಸಮಯ, ನೇರಪ್ರಸಾರದ ಮಾಹಿತಿ
ಭಾರತ ಹಾಗೂ ಬಾಂಗ್ಲಾದೇಶ ತಂಡಗಳ ನಡುವಿನ ಮೂರನೇ ಏಕದಿನ ಪಂದ್ಯ ಡಿಸೆಂಬರ್ 10 ಶನಿವಾರ ನಡೆಯಲಿದೆ. ಚಿತ್ತಗಾಂಗ್‌ನ ಜಹೂದ್ ಅಹ್ಮದ್ ಚೌಧರಿ ಕ್ರೀಡಾಂಗಣ ಈ ಪಂದ್ಯಕ್ಕೆ ಕೂಡ ಆತಿಥ್ಯ ವಹಿಸಿಕೊಳ್ಳಲಿದೆ. ಬೆಳಿಗ್ಗೆ 11:30ಕ್ಕೆ ಈ ಪಂದ್ಯ ಆರಂಭವಾಗಲಿದ್ದು 11 ಗಂಟೆಗೆ ಟಾಸ್ ಪ್ರಕ್ರಿಯೆ ನಡೆಯಲಿದೆ.
ನೇರಪ್ರಸಾರ: ಭಾರತದಲ್ಲಿ ಈ ಪಂದ್ಯ ಸೋನಿ ನೆಟ್‌ವರ್ಕ್‌ನಲ್ಲಿ ನೇರಪ್ರಸಾರವಾಗಲಿದೆ. ಅಲ್ಲದೆ ಸೋನಿ ಲಿವ್‌ನಲ್ಲಿಯೂ ಈ ಪಂದ್ಯವನ್ನು ವೀಕ್ಷಿಸುವ ಅವಕಾಶವಿದೆ.

ಪಿಚ್ ವರದಿ ಹೀಗಿದೆ
ಮೂರನೇ ಪಂದ್ಯ ನಡೆಯುವ ಜಹೂದ್ ಅಹ್ಮದ್ ಚೌಧರಿ ಕ್ರೀಡಾಂಗಣದ ಪಿಚ್ ಕೂಡ ಬ್ಯಾಟಿಂಗ್ ವಿಭಾಗಕ್ಕೆ ಅತ್ಯಂತ ಸವಾಲೆನಿಸುವ ಪಿಚ್ ಆಗಿರಲಿದೆ. ಅದರಲ್ಲೂ ಆರಂಭದಲ್ಲಿ ಬ್ಯಾಟರ್‌ಗಳು ರನ್‌ಗಳಿಸಲು ಸಾಕಷ್ಟು ಪರದಾಡಬೇಕಾಗುತ್ತದೆ. ಆದರೆ ಎರಡನೇ ಅವಧಿಯಲ್ಲಿ ಬ್ಯಾಟಿಂಗ್ ನಡೆಸುವುವುದು ಮತ್ತಷ್ಟು ಕಠಿಣ ಎಂಬುದು ಗಮನಾರ್ಹ ಅಂಶ. ಮೊದಲ ಇನ್ನಿಂಗ್ಸ್‌ನ ಬ್ಯಾಟಿಂಗ್ ಸರಾಸರಿ ಇಲ್ಲಿ 220 ರನ್ ಇದ್ದರೆ ಎರನೇ ಇನ್ನಿಂಗ್ಸ್‌ನ ಸರಾಸರಿ 200ಕ್ಕಿಂತ ಕಡಿಮೆಯಿದೆ ಎಂಬುದು ಗಮನಾರ್ಹ. ಹೀಗಾಗಿ ಮೊದಲ ಎರಡು ಏಕದಿನ ಪಂದ್ಯಗಳಲ್ಲಿ ಯಾವ ರೀತಿಯ ಪ್ರದರ್ಶನ ಬಂದಿತ್ತೋ ಅದೇ ರೀತಿ ಅಂತಿಮ ಪಂದ್ಯವೂ ನಡೆಯಬಹುದು ಎಂದು ಊಹಿಸಬಹುದಾಗಿದೆ.

ಎರಡನೇ ಪಂದ್ಯದಲ್ಲಿ ಕಣಕ್ಕಿಳಿಯುವ ಸಂಭಾವ್ಯ XI
ಬಾಂಗ್ಲಾದೇಶ XI: ನಜ್ಮುಲ್ ಹೊಸೈನ್ ಶಾಂಟೊ, ಲಿಟನ್ ದಾಸ್ (ನಾಯಕ), ಅನಾಮುಲ್ ಹಕ್, ಶಕೀಬ್ ಅಲ್ ಹಸನ್, ಮುಶ್ಫಿಕರ್ ರಹೀಮ್ (ವಿಕೆಟ್ ಕೀಪರ್), ಮಹಮ್ಮದುಲ್ಲಾ ರಿಯಾದ್, ಅಫೀಫ್ ಹೊಸೈನ್, ಮೆಹಿದಿ ಹಸನ್ ಮಿರಾಜ್, ಮುಸ್ತಾಫಿಜುರ್ ರೆಹಮಾನ್, ಎಬಾಡೋತ್ ಹೊಸೈನ್ ಮತ್ತು ಹಸನ್ ಮಹಮೂದ್.
ಟೀಮ್ ಇಂಡಿಯಾ XI: ಇಶಾನ್ ಕಿಶನ್, ಶಿಖರ್ ಧವನ್, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್(ನಾಯಕ), ಶ್ರೇಯಸ್ ಅಯ್ಯರ್, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್, ಶಹಬಾಜ್ ಅಹ್ಮದ್, ಉಮ್ರಾನ್ ಮಲಿಕ್

ಎರಡು ತಂಡಗಳ ಸಂಪೂರ್ಣ ಸ್ಕ್ವಾಡ್ ಹೀಗಿದೆ
ಬಾಂಗ್ಲಾದೇಶ ಸ್ಕ್ವಾಡ್: ಲಿಟನ್ ದಾಸ್ (ನಾಯಕ), ನೂರುಲ್ ಹಸನ್ (ವಿಕೆಟ್ ಕೀಪರ್), ಅನಾಮುಲ್ ಹಕ್, ಶಕೀಬ್ ಅಲ್ ಹಸನ್, ಮುಶ್ಫಿಕರ್ ರಹೀಮ್, ಅಫೀಫ್ ಹೊಸೈನ್, ಮಹಮ್ಮದುಲ್ಲಾ, ಮೆಹಿದಿ ಹಸನ್ ಮಿರಾಜ್, ಮುಸ್ತಾಫಿಜುರ್ ರೆಹಮಾನ್, ಹಸನ್ ಮಹಮೂದ್, ಎಬಾಡೋತ್ ಹೊಸೈನ್, ಯಾಸಿರ್ ಅಲಿ, ನಜ್ಮುಲ್ ಹೊಸೈನ್ ಶಾಂಟೊ, ತಸ್ಕಿನ್ ಅಹ್ಮದ್, ನಸುಮ್ ಅಹ್ಮದ್
ಟೀಮ್ ಇಂಡಿಯಾ ಸ್ಕ್ವಾಡ್: ಶಿಖರ್ ಧವನ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್(ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್, ಇಶಾನ್ ಕಿಶನ್, ರಾಹುಲ್ ತ್ರಿಪಾಠಿ, ರಜತ್ ಪಾಟಿದಾರ್, ಶಹಬಾಜ್ ಅಹ್ಮದ್, ಉಮ್ರಾನ್ ಮಲಿಕ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications