For Quick Alerts
ALLOW NOTIFICATIONS  
For Daily Alerts
 

ದಾಖಲೆಯ ಮೇಲೆ ಸೂರ್ಯ, ತಿಲಕ್‌ ಕಣ್ಣು

ಭಾರತ ಹಾಗೂ ಬಾಂಗ್ಲಾದೇಶ ನಡುವಣ ಏಷ್ಯಾ ಕಪ್‌ ಸೂಪರ್‌ 4 ಹಂತದ ಪಂದ್ಯ ಬುಧವಾರ ನಡೆಯಲಿದೆ. ಈ ಪಂದ್ಯ ಉಭಯ ತಂಡಗಳಿಗೆ ಮಹತ್ವದಾಗಿದೆ. ಈ ಪಂದ್ಯದಲ್ಲಿ ಜಯ ಸಾಧಿಸಿ ಫೈನಲ್‌ಗೆ ಪ್ರವೇಶಿಸುವ ಆಸೆಯನ್ನು ಎರಡೂ ತಂಡಗಳು ಹೊಂದಿವೆ. ಉಭಯ ತಂಡಗಳ ಅಂಕಿ ಅಂಶಗಳನ್ನು ನೋಡಿದ್ರೆ, ಭಾರತ ಬಲಿಷ್ಠವಾಗಿದೆ. ಟೀಮ್ ಇಂಡಿಯಾ ಪಂದ್ಯವನ್ನು ಗೆಲ್ಲುವ ನೆಚ್ಚಿನ ತಂಡ ಎಂದು ಪರಿಗಣಿಸಲಾಗಿದೆ. ಇದೇ ಪಂದ್ಯದಲ್ಲಿ ಟೀಮ್ ಇಂಡಿಯಾದ ಸೂಪರ್ ಸ್ಟಾರ್ ಆಟಗಾರ ತಿಲಕ್ ವರ್ಮಾ ಹಾಗೂ ಸೂರ್ಯಕುಮಾರ್ ಯಾದವ್ ದೊಡ್ಡ ದಾಖಲೆಯ ಮೇಲೆ ಕಣ್ಣು ನೆಟ್ಟಿದ್ದಾರೆ.

ಅಬುದಾಬಿ ಅಂಗಳದಲ್ಲಿ ಟೀಮ್ ಇಂಡಿಯಾ ಸ್ಟಾರ್ ಆಟಗಾರರು ನೈಜ್ಯ ಆಟವನ್ನು ಆಡುವಲ್ಲಿ ಸಫಲರಾದರೆ, ದೊಡ್ಡ ದಾಖಲೆಯನ್ನು ನಿರ್ಮಿಸಬಹುದು. ಈ ಪಂದ್ಯದಲ್ಲಿ ಸ್ಥಿರ ಬ್ಯಾಟಿಂಗ್ ಪ್ರದರ್ಶನ ನೀಡುವತ್ತ ಸೂರ್ಯಕುಮಾರ್ ಯಾದವ್ ಹಾಗೂ ತಿಲಕ್ ವರ್ಮಾ ಕಣ್ಣು ನೆಟ್ಟಿದ್ದಾರೆ. ಈ ಇಬ್ಬರೂ ಆಟಗಾರರು ಟಿ20 ಕ್ರಿಕೆಟ್‌ನಲ್ಲಿ ಹೊಸ ದಾಖಲೆ ನಿರ್ಮಿಸುವ ಕನಸಿನಲ್ಲಿದ್ದಾರೆ.

India vs Bangladesh Asia Cup Suryakumar Yadav Tilak Varma on the brink of major T20 records

ಟೀಮ್ ಇಂಡಿಯಾದ ನಾಯಕ ಸೂರ್ಯಕುಮಾರ್ ಯಾದವ್ ಸೂಪರ್ 4 ಹಂತದ ಮೊದಲ ಪಂದ್ಯದಲ್ಲಿ ಪಾಕ್‌ ವಿರುದ್ಧ ದೊಡ್ಡ ಇನಿಂಗ್ಸ್ ಕಟ್ಟುವಲ್ಲಿ ವಿಫಲರಾಗಿದ್ದರು. ಹೀಗಾಗಿ ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ ಇವರು ಅಬ್ಬರಿಸಬಲ್ಲರು ಎಂಬ ಲೆಕ್ಕಾಚಾರವನ್ನು ಹಾಕಿಕೊಳ್ಳಲಾಗಿದೆ. ಈ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ 2 ಸಿಕ್ಸರ್‌ಗಳನ್ನು ಬಾರಿಸುವಲ್ಲಿ ಯಶಸ್ವಿ ಆದರೆ, ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 150 ಸಿಕ್ಸರ್‌ಗಳನ್ನು ಬಾರಿಸಿದ ದಾಖಲೆಯನ್ನು ತಮ್ಮದಾಗಿಸಿಕೊಳ್ಳಲಿದ್ದಾರೆ. ಈ ಮೂಲಕ ಈ ಸಾಧನೆ ಮಾಡಿದ 2ನೇ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಇವರಿಗೂ ಮೊದಲು ಈ ಸಾಧನೆಯನ್ನು ರೋಹಿತ್‌ ಶರ್ಮಾ ಮಾಡಿದ್ದಾರೆ.

ದಾಖಲೆಯ ಹೊಸ್ತಿಲಲ್ಲಿ ತಿಲಕ್

ಇನ್ಜು ಟೀಮ್ ಇಂಡಿಯಾದ ಮಧ್ಯಮ ಕ್ರಮಾಂಕದ ಭರವಸೆಯ ಆಟಗಾರ ತಿಲಕ್ ವರ್ಮಾ ಸಹ ಈ ಪಂದ್ಯದಲ್ಲಿ ದೊಡ್ಡ ದಾಖಲೆಯ ಮೇಲೆ ಕಣ್ಣು ನೆಟ್ಟಿದ್ದಾರೆ. ಇವರು ಸಹ ತಾವು ಎದುರಿಸುವ ಮೊದಲ ಎಸೆತದಿಂದಲೇ ಆಕ್ರಮಣಕಾರಿ ಆಟವನ್ನು ಅಡುವ ಮನಸ್ಥಿತಿಯನ್ನು ಹೊಂದಿದ್ದಾರೆ. ಇವರು ಈಗಾಗಲೇ ಆಡಿರುವ 29 ಪಂದ್ಯಗಳ 27 ಇನಿಂಗ್ಸ್‌ಗಳಲ್ಲಿ 48 ಸಿಕ್ಸರ್‌ ಬಾರಿಸಿದ್ದಾರೆ. ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ ಇವರು ಮೂರು ಸಿಕ್ಸರ್‌ ಬಾರಿಸುವಲ್ಲಿ ಸಫಲರಾದರೆ, ದೊಡ್ಡ ದಾಖಲೆ ನಿರ್ಮಿಸಲಿದ್ದಾರೆ.

India vs Bangladesh Asia Cup Suryakumar Yadav Tilak Varma on the brink of major T20 records

ಬಾಂಗ್ಲಾ ವಿರುದ್ದದ ಪಂದ್ಯದಲ್ಲಿ 2 ಸಿಕ್ಸರ್ ಬಾರಿಸುವಲ್ಲೇ ತಿಲಕ್‌ ವರ್ಮಾ ಟಿ20 ಕ್ರಿಕೆಟ್‌ನಲ್ಲಿ 50 ಸಿಕ್ಸರ್‌ ಬಾರಿಸಿದ ಹಿರಿಮೆ ತಮ್ಮದಾಗಿಸಿಕೊಳ್ಳಲಿದ್ದಾರೆ. ಇನ್ನು ಮೂರು ಸಿಕ್ಸರ್ ಬಾರಿಸುತ್ತಲೇ ಶಿಖರ್ ಧವನ್ ದಾಖಲೆ ಮೀರಿ ನಿಲ್ಲಲಿದ್ದಾರೆ. ಈ ಮೂಲಕ ಈ ಸಾಧನೆಯನ್ನು ಮಾಡಿದ ಭಾರತದ 12ನೇ ಆಟಗಾರ ಎಂಬ ಹಿರಿಮೆ ತಮ್ಮದಾಗಿಸಿಕೊಳ್ಳಲಿದ್ದಾರೆ.

Story first published: Wednesday, September 24, 2025, 12:55 [IST]
Other articles published on Sep 24, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+