Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IND vs BAN: ಭಾರತ, ಬಾಂಗ್ಲ ನಡುವಣ ಹೆಡ್ ಟು ಹೆಡ್‌ ದಾಖಲೆ

ಚೆನ್ನೈನಲ್ಲಿ ಭಾರತ ಹಾಗೂ ಬಾಂಗ್ಲಾದೇಶ ತಂಡಗಳು ಮೊದಲ ಟೆಸ್ಟ್‌ನಲ್ಲಿ ಕಾದಾಟ ನಡೆಸಲಿವೆ. ಈ ಸರಣಿಯ ಮೇಲೆ ಕ್ರಿಕೆಟ್‌ ಅಭಿಮಾನಿಗಳ ಕಣ್ಣು ನೆಟ್ಟಿದೆ. ಈ ಟೆಸ್ಟ್ ಪಂದ್ಯವನ್ನು ಗೆದ್ದು ಇತಿಹಾಸದ ಪುಟದಲ್ಲಿ ಸ್ಥಾನ ಪಡೆಯುವ ಕನಸು ಭಾರತ ತಂಡದ್ದಾಗಿದೆ. ಇನ್ನು ಈ ಸರಣಿಯಲ್ಲಿ ವೈಟ್ ವಾಶ್‌ ಸಾಧನೆ ಮಾಡಿ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ನ ಅಂಕ ಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಕಾಯ್ದುಕೊಳ್ಳುವುದು ಮಹತ್ವದಾಗಿದೆ.

ಈಗಾಗಲೇ ಉಭಯ ತಂಡಗಳು ಈ ಟೆಸ್ಟ್‌ಗೆ ಅಭ್ಯಾಸ ಆರಂಭಿಸಿವೆ. ಚೆನ್ನೈ ಸ್ಪಿನ್‌ ಬೌಲರ್‌ಗಳಿಗೆ ಹೆಚ್ಚಿನ ನೆರವು ನೀಡಲಿದೆ. ಉಭಯ ತಂಡಗಳಲ್ಲೂ ಖ್ಯಾತ ನಾಮ ಸ್ಪಿನ್ ಬೌಲರ್‌ಗಳು ಇದ್ದಾರೆ. ಸ್ಟಾರ್ ಬ್ಯಾಟರ್‌ಗಳ ಅಂಗಳ ಪ್ರವೇಶಿಸಲಿದ್ದು, ದಾಖಲೆಯ ಪುಟಕ್ಕೆ ಎಂಟ್ರಿ ನೀಡುವ ಕನಸು ಕಾಣುತ್ತಿದ್ದಾರೆ. ಹಾಗಿದ್ದರೆ ಉಭಯ ದೇಶಗಳ ನಡುವಿನ ಅಂಕಿ ಅಂಶಗಳು ಏನು ಹೇಳುತ್ತವೆ ಇಲ್ಲಿದೆ ಮಾಹಿತಿ.

India vs Bangladesh Head-to-Head Record in Tests and Preview of the Upcoming Series

ಏನು ಹೇಳುತ್ತೆ ಅಂಕಿ ಅಂಶ?

ಟೀಮ್ ಇಂಡಿಯಾ ಹಾಗೂ ಬಾಂಗ್ಲಾ ತಂಡಗಳ ನಡುವೆ ಒಟ್ಟು 8 ಟೆಸ್ಟ್‌ ಪಂದ್ಯಗಳು ನಡೆದಿವೆ. ಇದರಲ್ಲಿ ಒಂದು ಸರಣಿಯನ್ನು ಬಿಟ್ಟರೆ ಉಳಿದ ಎಲ್ಲ ಸರಣಿಗಳಲ್ಲಿ ಭಾರತ ಮೇಲುಗೈ ಸಾಧಿಸಿದೆ. ಆ ಒಂದು ಸರಣಿ ಸಹ ಡ್ರಾದಲ್ಲಿ ಅಂತ್ಯವಾಗಿದೆ. ಬಾಂಗ್ಲಾದೇಶವು ಇಲ್ಲಿಯವರೆಗೆ ಭಾರತದ ವಿರುದ್ಧ ಒಂದೇ ಒಂದು ಟೆಸ್ಟ್‌ ಸರಣಿ ಗೆದ್ದಿಲ್ಲ. ಈ ಅಂಕಿ ಅಂಶಗಳನ್ನು ನೋಡಿದರೆ ಈ ಸರಣಿಯನ್ನು ಗೆಲ್ಲುವ ನೆಚ್ಚಿನ ತಂಡ ಭಾರತ ಎಂದು ತಿಳಿಯುತ್ತದೆ.

ಈ ಎರಡೂ ತಂಡಗಳ ನಡುವೆ ಈ ವರೆಗೆ ಒಟ್ಟು 13 ಟೆಸ್ಟ್ ಪಂದ್ಯಗಳನ್ನು ನಡೆದಿವೆ. ಇದರಲ್ಲಿ ಭಾರತ 11ರಲ್ಲಿ ಗೆಲುವು ದಾಖಲಿಸಿದೆ. ಮತ್ತು 2 ಟೆಸ್ಟ್ ಡ್ರಾದಲ್ಲಿ ಅಂತ್ಯವಾಗಿವೆ. ಈಗ ಭಾರತ ಈ ಟೆಸ್ಟ್‌ ಸರಣಿಯನ್ನು ಗೆದ್ದು ತನ್ನ ದಾಖಲೆಯನ್ನು ಮತ್ತಷ್ಟು ಬಲ ಪಡಿಸಿಕೊಳ್ಳಲು ಪ್ಲ್ಯಾನ್ ಮಾಡಿಕೊಂಡಿದೆ. ಸದ್ಯ ವಿಶ್ವ ಟೆಸ್ಟ್ ಚಾಂಪಿಯನ್‌ ಶಿಪ್‌ನಲ್ಲಿ ಮೊದಲ ಸ್ಥಾನದಲ್ಲಿರುವ ಭಾರತ, ಈ ಎರಡೂ ಪಂದ್ಯಗಳನ್ನು ಗೆದ್ದಲ್ಲಿ ತನ್ನ ಅಗ್ರ ಸ್ಥಾನವನ್ನು ಭಧ್ರ ಪಡಿಸಿಕೊಳ್ಳುತ್ತದೆ.

ಗರಿಷ್ಠ ಸ್ಕೋರ್ ಎಷ್ಟು?

2017ರಲ್ಲಿ ಬಾಂಗ್ಲಾ ಭಾರತ ಪ್ರವಾಸ ಬೆಳೆಸಿದ್ದಾಗ, ಭಾರತ 687 ರನ್‌ ಸಿಡಿಸಿದ್ದು ಅಧಿಕ ಸ್ಕೋರ್ ಆಗಿದೆ. ಇನ್ನು 2007ರಲ್ಲಿ ಭಾರತ ಇನಿಂಗ್ಸ್‌ ಹಾಗೂ 239 ರನ್‌ಗಳಿಂದ ಜಯ ಸಾಧಿಸಿದ್ದು ದೊಡ್ಡ ಅಂತರದ ಗೆಲುವು ಆಗಿದೆ. ಸಕ್ರೀಯ ಆಟಗಾರರ ಪೈಕಿ ಮುಷ್ಪೀಕರ್ ರಹೀಮ್‌ ಅತಿ ಹೆಚ್ಚು ರನ್ ಬಾರಿಸಿದ ಆಟಗಾರ. ಇವರು 8 ಪಂದ್ಯಗಳ 15 ಇನಿಂಗ್ಸ್‌ಗಳಲ್ಲಿ 604 ರನ್‌ ಸಿಡಿಸಿದ್ದಾರೆ.

Story first published: Saturday, September 14, 2024, 22:24 [IST]
Other articles published on Sep 14, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+