ಟೀಮ್ ಇಂಡಿಯಾ ವಿರುದ್ಧದ ಟಿ20 ಸರಣಿಗೆ ತಂಡ ಪ್ರಕಟಿಸಿದ ಬಾಂಗ್ಲಾದೇಶ

ಧಾಕಾ, ಅಕ್ಟೋಬರ್ 26: ಬಾಂಗ್ಲಾದೇಶ ಕ್ರಿಕೆಟ್ ತಂಡದ ಅನುಭವಿ, ಆರಂಭಿಕ ಆಟಗಾರ ತಮೀಮ್ ಇಕ್ಬಾಲ್ ಭಾರತ ಪ್ರವಾಸ ಸರಣಿಯಿಂದ ಹಿಂದೆ ಸರಿದಿದ್ದಾರೆ. ಇಕ್ಬಾಲ್ ಪತ್ನಿ ಎರಡನೇ ಮಗುವಿಗೆ ಜನ್ಮ ನೀಡಲಿರುವುದರಿಂದ ಅವರಿಗೆ ಪ್ರವಾಸ ಸರಣಿಯಲ್ಲಿ ಪಾಲ್ಗೊಳ್ಳಲಾಗುತ್ತಿಲ್ಲ.
3 ಪಂದ್ಯಗಳ ಟಿ20 ಸರಣಿಗಾಗಿ ತಮೀಮ್ ಇಕ್ಬಾಲ್ ಬದಲಿಗೆ ಬಾಂಗ್ಲಾದೇಶ ಕ್ರಿಕೆಟ್ ಬೋರ್ಡ್ (ಬಿಸಿಬಿ) ಎಡಗೈ ಬ್ಯಾಟ್ಸ್‌ಮನ್ ಇಮರುಲ್ ಕಾಯೆಸ್ ಅವರನ್ನು ಹೆಸರಿಸಿದೆ. ಬಾಂಗ್ಲಾ vs ಭಾರತ ಸರಣಿ ನವೆಂಬರ್ 3ರಿಂದ ದೆಹಲಿಯಲ್ಲಿ ಟಿ20 ಮೂಲಕ ಆರಂಭವಾಗಲಿದೆ.
ಇಎಸ್‌ಪಿಎನ್ ಕ್ರಿಕ್ ಇನ್ಫೋ ವರದಿಯಲ್ಲಿ, 'ಪಕ್ಕೆಲುಬು ಗಾಯಕ್ಕೆ ಚಿಕಿತ್ಸೆ ಪಡೆಯುತ್ತಿರುವ ತಮೀಮ್, ಟಿ20 ತಂಡದಲ್ಲಿ ಹೆಸರಿಸಲ್ಪಟ್ಟಿದ್ದರು. ಆದರೆ ಅವರ ಪತ್ನಿ ಎರಡನೇ ಮಗುವಿಗೆ ಜನ್ಮ ನೀಡಲಿರುವುದರಿಂದ ಡೆಲಿವರಿ ದಿನ ಅವರು ಪತ್ನಿ ಜೊತೆಗಿರಬೇಕಿದೆ. ದ್ವಿತೀಯ ಟೆಸ್ಟ್ ಟೆಸ್ಟ್ ಅನ್ನು ತಪ್ಪಿಸಿಕೊಳ್ಳಬೇಕಿದೆ. ಹೀಗಾಗಿ ತಮೀಮ್ ಸರಣಿಯಿಂದ ಹಿಂದೆ ಸರಿದಿದ್ದಾರೆ,' ಎಂದು ಹೇಳಲಾಗಿದೆ.
ಬಾಂಗ್ಲಾ ಟಿ20 ತಂಡ: ಶಕೀಬ್ ಅಲ್ ಹಸನ್ (ಕ್ಯಾಪ್ಟನ್), ಲಿಟಾನ್ ದಾಸ್, ಇಮರುಲ್ ಕಾಯೆಸ್, ಸೌಮ್ಯಾ ಸರ್ಕಾರ್, ಮೊಹಮ್ಮದ್ ನೈಮ್, ಮುಶ್ಫಿಕರ್ ರಹೀಮ್, ಮಹಮ್ಮದುಲ್ಲಾ, ಅಫಿಫ್ ಹೊಸೈನ್, ಮೊಸದ್ದೆಕ್ ಹೊಸೈನ್, ಅಮಿನೂಲ್ ಇಸ್ಲಾಂ, ಅರಾಫತ್ ಸನ್ನಿ, ಅಲ್-ಅಮೀನ್ ಹೊಸೈನ್, ಮುಸ್ತಾಫಿಜುರ್ ಇಸ್ಲಾಂ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications