India Vs Bangladesh: ಅಡಿಲೇಡ್‌ಗೆ ಬಂದಿಳಿದ ರೋಹಿತ್ ಶರ್ಮಾ ಪಡೆ, ಮಂಗಳವಾರ ಕಠಿಣ ಅಭ್ಯಾಸ

ಪರ್ತ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಸೋಲಿನ ಬಳಿಕ ಟೀಂ ಇಂಡಿಯಾ ತಮ್ಮ ಮುಂದಿನ ಪಂದ್ಯಕ್ಕಾಗಿ ಅಡಿಲೇಡ್‌ಗೆ ಪ್ರಯಾಣಿಸಿದೆ. ನವೆಂಬರ್ 2ರಂದು ಸೂಪರ್ 12 ಹಂತದ ಮುಂದಿನ ಪಂದ್ಯದಲ್ಲಿ ಭಾರತ ಬಾಂಗ್ಲಾದೇಶದ ವಿರುದ್ಧ ಸೆಣಸಲಿದೆ.
ಸೋಮವಾರ ಬೆಳಗ್ಗೆ ಅಡಿಲೇಡ್ ತಲುಪಿರುವ ಭಾರತದ ಆಟಗಾರರು ಒಂದು ದಿನ ವಿಶ್ರಾಂತಿ ಪಡೆಯಲಿದ್ದಾರೆ. ಆದರೆ, ಮಂಗಳವಾರ ಟೀಂ ಇಂಡಿಯಾ ಸಂಪೂರ್ಣ ಅಭ್ಯಾಸ ನಡೆಸಲಿದೆ. ಅಡಿಲೇಡ್ ಓವಲ್ ಕ್ರೀಡಾಂಗಣದಲ್ಲಿ ಬುಧವಾರ ಬಾಂಗ್ಲಾದೇಶವನ್ನು ಎದುರಿಸಲಿದೆ. ಭಾರತದ ಸೆಮಿಫೈನಲ್ ತಲುಪಬೇಕಾದರೆ ಈ ಪಂದ್ಯ ಗೆಲ್ಲುವುದು ಮುಖ್ಯವಾಗಲಿದೆ.
ಭಾರತ ಟಿ20 ವಿಶ್ವಕಪ್ 2022ರಲ್ಲಿ ಇದುವರೆಗೂ ಮೂರು ಪಂದ್ಯಗಳನ್ನಾಡಿದ್ದು ಎರಡರಲ್ಲಿ ಜಯ ಗಳಿಸಿದ್ದು, ಒಂದು ಪಂದ್ಯದಲ್ಲಿ ಸೋಲನುಭವಿಸುವ ಮೂಲಕ ನಾಲ್ಕು ಪಾಯಿಂಟ್‌ಗಳೊಂದಿದೆ ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ದಕ್ಷಿಣ ಆಫ್ರಿಕಾ ವಿರುದ್ಧ ಜಯ ಗಳಿಸಿದ್ದರೆ ಭಾರತದ ಸೆಮಿಫೈನಲ್ ಬಹುತೇಕ ಖಚಿತವಾಗುತ್ತಿತ್ತು, ಆದರೆ ಹರಿಣಗಳ ವಿರುದ್ಧ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲವಾಯಿತು. ಬಾಂಗ್ಲಾ ವಿರುದ್ಧ ಗೆದ್ದರೆ ಭಾರತದ ಸೆಮಿಫೈನಲ್ ಹಾದಿ ಸುಲಭವಾಗಲಿದೆ.
ಜಿಂಬಾಬ್ವೆ ವಿರುದ್ಧ 3 ರನ್‌ಗಳ ರೋಚಕ ಜಯ ಸಾಧಿಸಿದ ನಂತರ ಶಕೀಬ್ ಅಲ್ ಹಸನ್ ನೇತೃತ್ವದ ಬಾಂಗ್ಲಾದೇಶ ತಂಡ ಕೂಡ ಬ್ರಿಸ್ಬೇನ್‌ನಿಂದ ಅಡಿಲೇಡ್‌ಗೆ ಪ್ರಯಾಣಿಸಿದೆ.

ಬಾಂಗ್ಲಾದೇಶವನ್ನು ಕಡೆಗಣಿಸಿದರೆ ಅಪಾಯ
ಬಾಂಗ್ಲಾದೇಶ ಈವರೆಗೂ ಟಿ20 ವಿಶ್ವಕಪ್‌ನಲ್ಲಿ ಉತ್ತಮ ಪ್ರದರ್ಶನ ನೀಡಿಲ್ಲದಿದ್ದರೂ, ಭಾರತ ತಂಡ ಅವರನ್ನು ಲಘುವಾಗಿ ಪರಿಗಣಿಸುವಂತಿಲ್ಲ. ದಕ್ಷಿಣ ಆಫ್ರಿಕಾ ವಿರುದ್ಧ ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡಿರುವುದು ತಂಡದ ಆತಂಕಕ್ಕೆ ಕಾರಣವಾಗಿದೆ.
ಬಾಂಗ್ಲಾದೇಶ ತಂಡದಲ್ಲಿ ಉತ್ತಮ ಬೌಲರ್ ಗಳು ಇದ್ದಾರೆ, ಈ ಬಗ್ಗೆ ರೋಹಿತ್ ಶರ್ಮಾ ಗಂಭೀರವಾಗಿ ಚಿಂತಿಸಬೇಕಾಗುತ್ತದೆ. ಟೀಂ ಇಂಡಿಯಾ ಆಡುವ ಬಳಗದಲ್ಲಿ ಬದಲಾವಣೆ ಆಗುವ ಸಾಧ್ಯತೆ ಇದ್ದು, ಪಂತ್‌ಗೆ ಅವಕಾಶ ನೀಡಬಹುದಾಗಿದೆ.
T20 World Cup 2022: ಟೀಂ ಇಂಡಿಯಾ ಸೆಮಿಫೈನಲ್ ಹಾದಿ ಕಠಿಣ; ಗ್ರೂಪ್ 2ರ ಅಂಕಪಟ್ಟಿ

ಅಡಿಲೇಡ್ ಬ್ಯಾಟಿಂಗ್ ಸ್ನೇಹಿ ಪಿಚ್
ಅಡಿಲೇಡ್ ಆಸ್ಟ್ರೇಲಿಯಾದಲ್ಲಿ ಅತ್ಯಂತ ಬ್ಯಾಟರ್ ಸ್ನೇಹಿ ಪಿಚ್‌ಗಳಲ್ಲಿ ಒಂದಾಗಿದೆ. ಭಾರತದ ಬ್ಯಾಟರ್ ಗಳಿಗೆ ಉತ್ತಮ ಪ್ರದರ್ಶನ ನೀಡುವ ಅವಕಾಶ ಸಿಗಲಿದೆ. ರೋಹಿತ್ ಶರ್ಮಾ, ಕೆಎಲ್ ರಾಹುಲ್ ಇದುವರೆಗೂ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದು ಬಾಂಗ್ಲಾ ವಿರುದ್ಧ ಉತ್ತಮ ಇನ್ನಿಂಗ್ಸ್ ಆಡಬೇಕಿದೆ.
ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್ ಉತ್ತಮ ಫಾರ್ಮ್‌ನಲ್ಲಿರುವುದು ಭಾರತಕ್ಕೆ ಸಮಾಧಾನಕರ ವಿಚಾರವಾಗಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ದಿನೇಶ್ ಕಾರ್ತಿಕ್ ಬೆನ್ನು ನೋವಿನಿಂದ ಬಳಲುತ್ತಿದ್ದರು, ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ ಅವರು ಆಡುವುದು ಅನುಮಾನ ಎನ್ನಲಾಗುತ್ತಿದ್ದು, ರಿಷಬ್ ಪಂತ್ ಸ್ಥಾನ ಪಡೆಯುವ ಸಾಧ್ಯತೆ ಇದೆ. ಅಕ್ಷರ್ ಪಟೇಲ್ ಬದಲಿಗೆ ತಂಡದಲ್ಲಿ ಸ್ಥಾನ ಪಡೆದ ದೀಪಕ್ ಹೂಡಾ ಕೂಡ ವಿಫಲರಾಗಿದ್ದು, ಪಟೇಲ್ ತಂಡಕ್ಕೆ ಮರಳಲಿದ್ದಾರೆ.

ಉಭಯ ತಂಡಗಳ ವಿವರ
ಟೀಂ ಇಂಡಿಯಾ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್, ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯ, ಆರ್ ಅಶ್ವಿನ್, ಯುಜ್ವೇಂದ್ರ ಚಾಹಲ್, ಅಕ್ಸರ್ ಪಟೇಲ್, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಅರ್ಶ್ದೀಪ್ ಸಿಂಗ್ ಮೊಹಮ್ಮದ್ ಶಮಿ
ಸ್ಟ್ಯಾಂಡ್‌ಬೈ ಆಟಗಾರರು: ಮೊಹಮ್ಮದ್ ಸಿರಾಜ್, ಶ್ರೇಯಸ್ ಅಯ್ಯರ್, ರವಿ ಬಿಷ್ಣೋಯ್, ಶಾರ್ದೂಲ್ ಠಾಕೂರ್
ಬಾಂಗ್ಲಾದೇಶ: ಶಕೀಬ್ ಅಲ್ ಹಸನ್ (ನಾಯಕ), ನೂರುಲ್ ಹಸನ್, ಅಫೀಫ್ ಹೊಸೈನ್, ಎಬಾಡೋತ್ ಹೊಸೈನ್, ಹಸನ್ ಮಹ್ಮದ್, ಲಿಟ್ಟನ್ ದಾಸ್, ಮೆಹಿದಿ ಹಸನ್ ಮಿರಾಜ್, ಮುಸ್ತಫಿಜುರ್ ರೆಹಮಾನ್, ನಜ್ಮುಲ್ ಹೊಸೈನ್ ಶಾಂಟೊ, ಶೋರಿಫುಲ್ ಇಸ್ಲಾಂ, ಸೌಮ್ಯ್ ಸರ್ಕಾರ್, ಹೊಮದ್ ಸರ್ಕಾರ್, ಮುಸಾದ್ ಸರ್ಕಾರ್ ತಸ್ಕಿನ್ ಅಹ್ಮದ್, ಯಾಸಿರ್ ಅಲಿ ಚೌಧರಿ
ಸ್ಟ್ಯಾಂಡ್‌ಬೈ ಆಟಗಾರರು: ಮಹೇದಿ ಹಸನ್, ರಿಶಾದ್ ಹೊಸೈನ್, ಸಬ್ಬಿರ್ ರೆಹಮಾನ್, ಮೊಹಮ್ಮದ್ ಸೈಫುದ್ದೀನ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications