ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

T20 World Cup 2022: ಟೀಂ ಇಂಡಿಯಾ ಸೆಮಿಫೈನಲ್ ಹಾದಿ ಕಠಿಣ; ಗ್ರೂಪ್ 2ರ ಅಂಕಪಟ್ಟಿ

T20 World Cup 2022: Team Indias Semi-final Path Tough; Here Is The Group 2 Points Table

ಭಾನುವಾರ (ಅಕ್ಟೋಬರ್ 30) ಪರ್ತ್‌ನಲ್ಲಿ ನಡೆದ ಟಿ20 ವಿಶ್ವಕಪ್ 2022 ಗ್ರೂಪ್ 2ರ ಪಂದ್ಯದಲ್ಲಿ ಟೆಂಬಾ ಬವುಮಾ ನಾಯಕತ್ವದ ದಕ್ಷಿಣ ಆಫ್ರಿಕಾದ ವಿರುದ್ಧ ರೋಹಿತ್ ಶರ್ಮಾ ನಾಯಕತ್ವದ ಟೀಂ ಇಂಡಿಯಾ ಐದು ವಿಕೆಟ್‌ಗಳ ಆಘಾತಕಾರಿ ಸೋಲು ಅನುಭವಿಸಿದೆ.

ಭಾನುವಾರದ ಗೆಲುವಿನಿಂದ ದಕ್ಷಿಣ ಆಫ್ರಿಕಾ ತಂಡವು ಐದು ಅಂಕಗಳೊಂದಿಗೆ ಭಾರತವನ್ನು ಹಿಂದಿಕ್ಕಿ ಗುಂಪು 2ರಲ್ಲಿ ಅಗ್ರಸ್ಥಾನಕ್ಕೆ ಏರಿದೆ. ಗುಂಪಿನಲ್ಲಿ ಅಗ್ರ ಎರಡು ಸ್ಥಾನ ಪಡೆಯುವ ತಂಡಗಳು ಮಾತ್ರ ಸೆಮಿಫೈನಲ್ ಹಂತಕ್ಕೆ ಅರ್ಹತೆ ಪಡೆಯುತ್ತವೆ.

T20 World Cup 2022: ಸೂರ್ಯಕುಮಾರ್ ಬೌಲರ್‌ಗಳ ಮನಸ್ಸಿನೊಂದಿಗೆ ಆಡುತ್ತಾರೆ; ಪಾಕ್ ಕ್ರಿಕೆಟಿಗT20 World Cup 2022: ಸೂರ್ಯಕುಮಾರ್ ಬೌಲರ್‌ಗಳ ಮನಸ್ಸಿನೊಂದಿಗೆ ಆಡುತ್ತಾರೆ; ಪಾಕ್ ಕ್ರಿಕೆಟಿಗ

ಸದ್ಯ ನಡೆಯುತ್ತಿರುವ ಟಿ20 ವಿಶ್ವಕಪ್‌ನಲ್ಲಿ ಸೂಪರ್ 12 ಹಂತದ 2ನೇ ಗುಂಪಿನ ಸೆಮಿಫೈನಲ್ ಸ್ಪರ್ಧೆಯು ಭಾನುವಾರ ಕುತೂಹಲಕಾರಿ ತಿರುವು ಪಡೆದುಕೊಂಡಿದೆ. ಪಾಕಿಸ್ತಾನವು ನೆದರ್ಲ್ಯಾಂಡ್ಸ್ ವಿರುದ್ಧ ಗೆದ್ದರೆ, ದಕ್ಷಿಣ ಆಫ್ರಿಕಾ ತಂಡವು ಭಾರತವನ್ನು ಸೋಲಿಸಿತು. ಮೂರು ಸುತ್ತಿನ ಪಂದ್ಯಗಳ ಬಳಿಕ ಗ್ರೂಪ್ 2ರಲ್ಲಿ ದಕ್ಷಿಣ ಆಫ್ರಿಕಾ ಅಗ್ರಸ್ಥಾನದಲ್ಲಿದ್ದು, ಭಾರತ ಎರಡನೇ ಸ್ಥಾನಕ್ಕೆ ಕುಸಿದಿದೆ.

ಭಾರತ ಮತ್ತು ಬಾಂಗ್ಲಾದೇಶ ತಲಾ 4 ಅಂಕಗಳು

ಭಾರತ ಮತ್ತು ಬಾಂಗ್ಲಾದೇಶ ತಲಾ 4 ಅಂಕಗಳು

ಭಾರತ ತಂಡ ಸೋಲಿನ ಹೊರತಾಗಿಯೂ, ಭಾರತ ಮತ್ತು ಬಾಂಗ್ಲಾದೇಶ ತಲಾ 4 ಅಂಕಗಳನ್ನು ಹೊಂದಿದೆ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿವೆ. ಜಿಂಬಾಬ್ವೆ 3 ಅಂಕಗಳನ್ನು ಹೊಂದಿದ್ದರೆ, ಪಾಕಿಸ್ತಾನ 2 ಅಂಕ ಹೊಂದಿದೆ. ಆದಾಗ್ಯೂ, ಭಾರತದ ನೆಟ್ ರನ್ ರೇಟ್ +0.844 ಇದ್ದರೂ ಬುಧವಾರದ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಪಂದ್ಯವು ಸೆಮಿಫೈನಲ್ ಹಾದಿಗೆ ನಿರ್ಣಾಯಕವಾಗಿರುತ್ತದೆ.

ಬಾಂಗ್ಲಾದೇಶ ವಿರುದ್ಧ (ನವೆಂಬರ್ 2) ಮತ್ತು ಜಿಂಬಾಬ್ವೆ (ನವೆಂಬರ್ 6) ವಿರುದ್ಧದ ತನ್ನ ಕೊನೆಯ ಎರಡು ಪಂದ್ಯಗಳಲ್ಲಿ ಭಾರತ ತಂಡವು ಗೆಲ್ಲಬೇಕಾಗಿದೆ. ಒಂದು ಪಂದ್ಯ ಸೋತರೂ ಸೆಮಿಫೈನಲ್‌ನ ಹಾದಿಯ ಲೆಕ್ಕಾಚಾರ ಬದಲಾಗಲಿವೆ.

ಬಾಂಗ್ಲಾದೇಶ ವಿರುದ್ಧ ನಾಟಕೀಯ ಸೋಲು ಕಂಡ ಜಿಂಬಾಬ್ವೆ

ಬಾಂಗ್ಲಾದೇಶ ವಿರುದ್ಧ ನಾಟಕೀಯ ಸೋಲು ಕಂಡ ಜಿಂಬಾಬ್ವೆ

ಪಾಕಿಸ್ತಾನ ವಿರುದ್ಧ ಜಿಂಬಾಬ್ವೆ ತಂಡದ ಅದ್ಭುತ ಗೆಲುವು ಅವರಿಗೆ ಸೆಮಿಫೈನಲ್ ಅವಕಾಶವನ್ನು ಜೀವಂತವಾಗಿಟ್ಟಿತ್ತು. ಆದರೆ ಬಾಂಗ್ಲಾದೇಶ ವಿರುದ್ಧದ ನಾಟಕೀಯ ಸೋಲು ಅಗ್ರ ಎರಡು ಸ್ಥಾನಗಳಲ್ಲಿ ಸ್ಥಾನ ಪಡೆಯಲು ಪವಾಡವೇ ನಡೆಯಬೇಕಾಗುತ್ತದೆ. ಇನ್ನು ಬಾಂಗ್ಲಾದೇಶದ ವಿರುದ್ಧ 104 ರನ್‌ಗಳ ಭರ್ಜರಿ ಜಯದಿಂದ +2.772 ರನ್‌ರೇಟ್‌ನೊಂದಿಗೆ ದಕ್ಷಿಣ ಆಫ್ರಿಕಾ ಈಗ ಗುಂಪಿನಲ್ಲಿ ಸೆಮಿಫೈನಲ್ ಅರ್ಹತೆ ಪಡೆಯಲು ಸ್ಪಷ್ಟ ಮೆಚ್ಚಿನ ತಂಡವಾಗಿದೆ.

ಭಾರತ ಮತ್ತು ಜಿಂಬಾಬ್ವೆ ವಿರುದ್ಧ ಸೋಲು ಕಂಡಿರುವ ಬಾಬರ್ ಅಜಂ ನಾಯಕತ್ವದ ಪಾಕಿಸ್ತಾನ ಇನ್ನೂ ಸೆಮಿಫೈನಲ್‌ಗೆ ಸ್ಪರ್ಧೆಯಿಂದ ಹೊರಬಂದಿಲ್ಲ. ಏಕೆಂದರೆ, ಅವರು ನೆದರ್ಲ್ಯಾಂಡ್ಸ್ ವಿರುದ್ಧ ದೊಡ್ಡ ಅಂತರದಲ್ಲಿ ಗೆಲುವು ಗಳಿಸಿದ್ದಾರೆ.

ಮುಂದಿನ ಪಂದ್ಯಗಳಲ್ಲಿ ದಕ್ಷಿಣ ಆಫ್ರಿಕಾ ಮತ್ತು ಬಾಂಗ್ಲಾದೇಶವನ್ನು ಸೋಲಿಸಿದರೆ ಪಾಕಿಸ್ತಾನವು 6 ಅಂಕಗಳನ್ನು ತಲುಪುತ್ತದೆ. ತದನಂತರ ಅವರು ಸೆಮಿಫೈನಲ್‌ಗೆ ಹೋಗಲು ಇತರ ತಂಡಗಳ ಫಲಿತಾಂಶ ನಿರ್ಣಾಯಕವಾಗಿರಲಿದೆ.

ಟಿ20 ವಿಶ್ವಕಪ್ ಸೂಪರ್ 12 ಹಂತದಲ್ಲಿ ಉಳಿದಿರುವ ಗುಂಪು 2ರ ಪಂದ್ಯಗಳು

ಟಿ20 ವಿಶ್ವಕಪ್ ಸೂಪರ್ 12 ಹಂತದಲ್ಲಿ ಉಳಿದಿರುವ ಗುಂಪು 2ರ ಪಂದ್ಯಗಳು

2 ನವೆಂಬರ್: ಜಿಂಬಾಬ್ವೆ vs ನೆದರ್ಲ್ಯಾಂಡ್ಸ್, ಅಡಿಲೇಡ್ ಓವಲ್

2 ನವೆಂಬರ್: ಭಾರತ vs ಬಾಂಗ್ಲಾದೇಶ, ಅಡಿಲೇಡ್ ಓವಲ್

3 ನವೆಂಬರ್: ಪಾಕಿಸ್ತಾನ vs ದಕ್ಷಿಣ ಆಫ್ರಿಕಾ, SCG, ಸಿಡ್ನಿ

ನವೆಂಬರ್ 6: ದಕ್ಷಿಣ ಆಫ್ರಿಕಾ vs ನೆದರ್ಲ್ಯಾಂಡ್ಸ್, ಅಡಿಲೇಡ್ ಓವಲ್

ನವೆಂಬರ್ 6: ಪಾಕಿಸ್ತಾನ vs ಬಾಂಗ್ಲಾದೇಶ, ಅಡಿಲೇಡ್ ಓವಲ್

ನವೆಂಬರ್ 6: ಜಿಂಬಾಬ್ವೆ vs ಭಾರತ, MCG, ಮೆಲ್ಬೋರ್ನ್

Story first published: Monday, October 31, 2022, 12:06 [IST]
Other articles published on Oct 31, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X