India Vs Bangladesh : ನಾವು ಟಿ20 ವಿಶ್ವಕಪ್ ಗೆಲ್ಲಲು ಬಂದಿಲ್ಲ, ಶಕೀಬ್ ಅಲ್ ಹಸನ್ ಅಚ್ಚರಿಯ ಹೇಳಿಕೆ

ಟಿ20 ವಿಶ್ವಕಪ್ ಸೆಮಿಫೈನಲ್ ಸ್ಪರ್ಧೆ ಸಾಕಷ್ಟು ರೋಚಕವಾಗುತ್ತಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಸೋಲಿನ ಬಳಿಕ ಭಾರತ ತಂಡಕ್ಕೆ ಬಾಂಗ್ಲಾದೇಶದ ವಿರುದ್ಧದ ಪಂದ್ಯ ಮಹತ್ವದ್ದಾಗಿದೆ. ಸೆಮಿಫೈನಲ್ ತಲುಪಲು ಬಾಂಗ್ಲಾದೇಶದ ವಿರುದ್ಧ ಗೆಲ್ಲಲೇಬೇಕಾದ ಒತ್ತಡದಲ್ಲಿ ಸಿಲುಕಿದೆ.
ಆದರೆ, ಭಾರತದ ವಿರುದ್ಧದ ಪಂದ್ಯಕ್ಕೆ ಮುನ್ನ ಶಕೀಬ್ ಅಲ್ ಹಸನ್ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಬಾಂಗ್ಲಾದೇಶದ ನಾಯಕ ಶಕೀಬ್ ಅಲ್ ಹಸನ್ ಮಂಗಳವಾರ ಮಾತನಾಡಿದ್ದು, "ನಾವು ಟಿ20 ವಿಶ್ವಕಪ್ ಗೆಲ್ಲಲು ನಾವು ಇಲ್ಲಿಗೆ ಬಂದಿಲ್ಲ, ಆದರೆ ಟೀಂ ಇಂಡಿಯಾ ವಿಶ್ವಕಪ್ ಗೆಲ್ಲಲು ಬಂದಿದ್ದಾರೆ. ನಾವು ಭಾರತ ತಂಡವನ್ನು ಸೋಲಿಸಿದರೆ ನಿಜಕ್ಕೂ ಒಂದು ಸಾಧನೆ" ಎಂದು ಹೇಳಿದರು.
ಭಾರತ ಮತ್ತು ಬಾಂಗ್ಲಾದೇಶ ಎರಡೂ ತಂಡಗಳು ಪ್ರಸ್ತುತ ಗುಂಪು 2 ರಲ್ಲಿ 4 ಅಂಕಗಳನ್ನು ಹೊಂದಿದ್ದು, ಗೆಲ್ಲುವ ತಂಡಕ್ಕೆ ಸೆಮಿಫೈನಲ್ ಹಾದಿ ಸುಲಭವಾಗಲಿದೆ. ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ ಭಾರತವೇ ಗೆಲ್ಲುವ ಫೇವರಿಟ್ ಎನಿಸಿಕೊಂಡಿದೆ. ಆದರೆ, ಕೊನೆಯ ಪಂದ್ಯದಲ್ಲಿ ಜಿಂಬಾಬ್ವೆ ವಿರುದ್ಧ 3 ರನ್‌ಗಳ ರೋಚಕ ಜಯ ಸಾಧಿಸಿರುವ ಬಾಂಗ್ಲಾ ಆತ್ಮವಿಶ್ವಾಸದಿಂದಲೇ ಕಣಕ್ಕಿಳಿಯಲಿದೆ.

ಪ್ರತಿ ಪಂದ್ಯ ನಮಗೆ ಮುಖ್ಯವಾಗುತ್ತದೆ
ಪ್ರತಿಯೊಂದು ಪಂದ್ಯವೂ ನಮಗೆ ಮುಖ್ಯವಾಗಿದೆ. ನಾವು ಅದೇ ವಿಧಾನದೊಂದಿಗೆ ಆಡಲು ಬಯಸುತ್ತೇವೆ. ಯಾವುದೇ ವಿರೋಧದ ಮೇಲೆ ನಮ್ಮ ಗಮನ ನೀಡುವುದಿಲ್ಲ. ನಾವು ನಮ್ಮ ಯೋಜನೆಗಳಿಗೆ ಬದ್ಧರಾಗಿ ಆಡಲು ಬಯಸುತ್ತೇವೆ ಎಂದು ಅವರು ಹೇಳಿದರು.
ಈ ವಿಶ್ವಕಪ್‌ನಲ್ಲಿ ನಾವು ಆಟದ ಎಲ್ಲಾ ವಿಭಾಗಗಳಲ್ಲಿ ಸಂಪೂರ್ಣ ತಂಡದ ಪ್ರದರ್ಶನ ನೀಡುವತ್ತ ಗಮನಹರಿಸಿದ್ದೇವೆ. ಭಾರತದ ವಿರುದ್ಧದ ಪಂದ್ಯದಲ್ಲೂ ಅದನ್ನೇ ಮಾಡಲಿದ್ದೇವೆ ಎಂದು ಶಕೀಬ್ ಪತ್ರಿಕಾಗೋಷ್ಠಿಯಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಟಿ20 ವಿಶ್ವಕಪ್: KL ರಾಹುಲ್‌ಗೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದ ರಾಹುಲ್ ದ್ರಾವಿಡ್

ಉತ್ತಮ ಪ್ರದರ್ಶನ ನೀಡುವತ್ತ ಗಮನ ಹರಿಸುತ್ತೇವೆ
ನಾವು ನಮ್ಮ ಉಳಿದ ಎರಡು ಪಂದ್ಯಗಳಲ್ಲಿ ಉತ್ತಮವಾಗಿ ಆಡಲು ಬಯಸುತ್ತೇವೆ. ನಾವು ಭಾರತ ಅಥವಾ ಪಾಕಿಸ್ತಾನದ ವಿರುದ್ಧ ಗೆಲ್ಲಲು ಸಾಧ್ಯವಾದರೆ, ಅದು ಆ ತಂಡಗಳಿಗೆ ಆಘಾತ ನೀಡಿದಂತಾಗುತ್ತದೆ. ಎರಡೂ ತಂಡಗಳು ನಮಗಿಂತ ಉತ್ತಮವಾಗಿವೆ. ನಾವು ಉತ್ತಮವಾಗಿ ಆಡಿದರೆ, ಆ ದಿನ ನಮ್ಮದಾಗಿದ್ದರೆ ನಾವು ಗೆಲ್ಲಬಹುದು ಎಂದು ಹೇಳಿದರು.
ಐರ್ಲೆಂಡ್ ಮತ್ತು ಜಿಂಬಾಬ್ವೆಯಂತಹ ತಂಡಗಳು ಇಂಗ್ಲೆಂಡ್ ಮತ್ತು ಪಾಕಿಸ್ತಾನವನ್ನು ಸೋಲಿಸುವುದನ್ನು ನಾವು ನೋಡಿದ್ದೇವೆ. ನಾವು ಅದೇ ರೀತಿ ಮಾಡಲು ಸಾಧ್ಯವಾದರೆ, ಸಂತೋಷಪಡುತ್ತೇನೆ, ಎಂದು ಶಕೀಬ್ ಹೇಳಿದ್ದಾರೆ.

ಟೀಂ ಇಂಡಿಯಾ ಎಲ್ಲೇ ಆಡಿದರು ಬೆಂಬಲ ಸಿಗುತ್ತದೆ
ಭಾರತ ತಂಡ ಎಲ್ಲೇ ಆಡಿದರೂ ಅದಕ್ಕೆ ಉತ್ತಮ ಬೆಂಬಲ ಸಿಗುತ್ತದೆ ಎಂದು ನಾನು ಭಾವಿಸುತ್ತೇನೆ ಎಂದು ಶಕೀಬ್ ಹೇಳಿದರು. ಸ್ಟೇಡಿಯಂ ಕಿಕ್ಕಿರಿದು ತುಂಬಿರುತ್ತದೆ, ಇದು ಉತ್ತಮ ಪಂದ್ಯವಾಗುತ್ತದೆ ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದರು.
ಭಾರತ ಗೆಲ್ಲುವ ಫೇವರಿಟ್ ತಂಡವಾಗಿದೆ. ಅವರು, ವಿಶ್ವಕಪ್ ಗೆಲ್ಲಲು ಇಲ್ಲಿಗೆ ಬಂದಿದ್ದಾರೆ, ನಾವು ವಿಶ್ವಕಪ್ ಗೆಲ್ಲಲು ಬಂದಿಲ್ಲ, ನೀವು ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಬಹುದು, ನಾವು ಭಾರತದ ವಿರುದ್ಧ ಗೆದ್ದರೆ ಅದು ಅವರಿಗೆ ದೊಡ್ಡ ಆಘಾತ ನೀಡಿದಂತಾಗುತ್ತದೆ, ಭಾರತವನ್ನು ಸೋಲಿಸಲು ನಾವು ನಮ್ಮ ಕೈಲಾದಷ್ಟು ಪ್ರಯತ್ನಿಸುತ್ತೇವೆ ಎಂದು ಹೇಳಿದ್ದಾರೆ.

ಸೂರ್ಯಕುಮಾರ್ ಯಾದವ್ ಆಟಕ್ಕೆ ಪ್ರಶಂಸೆ
ಭಾರತದ ಬ್ಯಾಟರ್ ಸೂರ್ಯಕುಮಾರ್ ಯಾದವ್ ಅಮೋಘ ಫಾರ್ಮ್‌ನಲ್ಲಿದ್ದಾರೆ ಮತ್ತು ಅವರು ಇಲ್ಲಿಯವರೆಗೆ ಎರಡು ಅರ್ಧಶತಕಗಳನ್ನು ದಾಖಲಿಸಿದ್ದಾರೆ. ಶಕೀಬ್ ಅಲ್ ಹಸನ್ ಸೂರ್ಯಕುಮಾರ್ ಆಟಕ್ಕೆ ಪ್ರಶಂಸೆ ವ್ಯಕ್ತಪಡಿಸಿದರು.
"ಸೂರ್ಯಕುಮಾರ್ ಯಾದವ್ ನಿಜವಾಗಿಯೂ ಚೆನ್ನಾಗಿ ಆಡುತ್ತಿದ್ದಾರೆ. ಕಳೆದ ವರ್ಷದ ದಾಖಲೆಯ ವಿಷಯದಲ್ಲಿ ಅವರು ಬಹುಶಃ ಅವರ ನಂ.1 ಬ್ಯಾಟರ್ ಎಂದು ನಾನು ಭಾವಿಸುತ್ತೇನೆ. ಟೀಂ ಇಂಡಿಯಾ ವಿಶ್ವ ದರ್ಜೆಯ ಆಟಗಾರರನ್ನು ಹೊಂದಿದ್ದಾರೆ, ನಾವು ಇನ್ನೂ ನಮ್ಮ ತಂಡದ ಜೊತೆ ಚರ್ಚೆ ಮಾಡಿಲ್ಲ. ನಾವು ಮಾತನಾಡುತ್ತೇವೆ ತಂಡದ ಸಭೆಗಳಲ್ಲಿ ನಾವು ನೋಡಿಕೊಳ್ಳಬೇಕಾದ ಕ್ಷೇತ್ರಗಳ ಬಗ್ಗೆ, ನಾವು ಗೆಲ್ಲಬೇಕಾದರೆ, ನಾವು ಎಲ್ಲಾ ವಿಭಾಗಗಳಲ್ಲಿ ಉತ್ತಮವಾಗಿ ಆಡಬೇಕು" ಎಂದು ಶಕೀಬ್ ಹೇಳಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications