ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟಿ20 ವಿಶ್ವಕಪ್‌: KL ರಾಹುಲ್‌ಗೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದ ರಾಹುಲ್ ದ್ರಾವಿಡ್

KL Rahul and Rahul dravid

ಟೀಂ ಇಂಡಿಯಾ ಓಪನರ್ ಕೆ.ಎಲ್ ರಾಹುಲ್ ಪ್ರಸಕ್ತ ಟಿ20 ವಿಶ್ವಕಪ್‌ನಲ್ಲಿ ಸಂಪೂರ್ಣ ವೈಫಲ್ಯಗೊಂಡಿದ್ದು, ಭಾರತಕ್ಕೆ ಉತ್ತಮ ಆರಂಭ ನೀಡುವಲ್ಲಿ ವಿಫಲಗೊಂಡಿದ್ದಾರೆ. ಕನ್ನಡಿಗನ ಪ್ರದರ್ಶನಕ್ಕೆ ಈಗಾಗಲೇ ಸಾಕಷ್ಟು ಟೀಕೆಗಳು ಸಹ ವ್ಯಕ್ತವಾಗಿದೆ.

ಆಡಿರುವ 3 ಪಂದ್ಯಗಳಲ್ಲಿ ಕೆ.ಎಲ್ ರಾಹುಲ್‌ ಗಳಿಸಿರುವುದು ಕೇವಲ 22 ರನ್‌ಗಳಾಗಿವೆ. ಸಾಕಷ್ಟು ಪೈಪೋಟಿ ಹೊಂದಿರುವ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದಿರುವ ರಾಹುಲ್ ಆಡಿರುವ ಮೂರು ಪಂದ್ಯಗಳಲ್ಲಿ ರನ್‌ಗಳಿಸಲು ವಿಫಲರಾಗಿದ್ದಾರೆ.

ಮತ್ತೊಂದೆಡೆ ತಂಡದ ನಾಯಕ ರೋಹಿತ್ ಶರ್ಮಾ ಮೊದಲ ಪಂದ್ಯದಲ್ಲಿ ವಿಫಲಗೊಂಡ ಬಳಿಕ ನೆದರ್ಲ್ಯಾಂಡ್ಸ್ ವಿರುದ್ಧ ಅರ್ಧಶತಕ ದಾಖಲಿಸಿ ಉತ್ತಮ ಆಟವಾಡಿದ್ರು. ಆದ್ರೆ ದ.ಆಫ್ರಿಕಾ ವಿರುದ್ಧ ಮತ್ತೆ ವೈಫಲ್ಯಗೊಂಡರು. ಇನ್ನು ಕೆ.ಎಲ್ ರಾಹುಲ್ ಮಾತ್ರ ಒಂದು ಇನ್ನಿಂಗ್ಸ್‌ನಲ್ಲೂ ಉತ್ತಮವಾಗಿ ಆಡದಿದ್ದರೂ ತಂಡದ ಕೋಚ್ ರಾಹುಲ್ ದ್ರಾವಿಡ್‌ರಿಂದ ಬೆಂಬಲ ವ್ಯಕ್ತವಾಗಿದೆ.

ಮೂರು ಪಂದ್ಯಗಳಲ್ಲಿ ಮುಗ್ಗರಿಸಿರುವ ಕೆ.ಎಲ್ ರಾಹುಲ್

ಮೂರು ಪಂದ್ಯಗಳಲ್ಲಿ ಮುಗ್ಗರಿಸಿರುವ ಕೆ.ಎಲ್ ರಾಹುಲ್

ಕಳೆದ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಸಿಕ್ಸರ್ ಸಿಡಿಸಿ ಖಾತೆ ತೆರೆದಿದ್ದ ಕೆ.ಎಲ್ ರಾಹುಲ್ ಬಹುಬೇಗನೆ ಔಟಾಗಿ ಪೆವಿಲಿಯನ್ ಸೇರಿಕೊಂಡರು. ರಾಹುಲ್ 14 ಎಸೆತಗಳಲ್ಲಿ 9ರನ್‌ಗೆ ಔಟಾಗುವ ಮೂಲಕ ಮೂರನೇ ಪಂದ್ಯದಲ್ಲಿ ವಿಫಲಗೊಂಡರು.

ಇದಕ್ಕೂ ಮುನ್ನ ರಾಹುಲ್ ಪಾಕಿಸ್ತಾನ ವಿರುದ್ಧ 8 ಎಸೆತಗಳಲ್ಲಿ 4 ರನ್ ಕಲೆಹಾಕಿ ವಿಕೆಟ್ ಒಪ್ಪಿಸಿದ್ರೆ, ನೆದರ್ಲ್ಯಾಂಡ್ಸ್ ವಿರುದ್ಧ 12 ಎಸೆತಗಳಲ್ಲಿ ಕೇವಲ 9ರನ್ ಕಲೆಹಾಕಿ ತಮ್ಮ ಇನ್ನಿಂಗ್ಸ್ ಮುಗಿಸಿದ್ರು. ರಾಹುಲ್ ಓಪನಿಂಗ್ ಆಟವು ಕಳಪೆಯಾದ ಪರಿಣಾಮ ಟೀಂ ಇಂಡಿಯಾ ಟೂರ್ನಿಯಲ್ಲಿ ಉತ್ತಮ ಆರಂಭ ಪಡೆಯುವಲ್ಲಿ ವಿಫಲಗೊಂಡಿದೆ.

ಮುಂದಿನ ಟಿ20 ವಿಶ್ವಕಪ್‌ಗೆ ಈತನೇ ನಾಯಕ !, ಟಿ20 ವಿಶ್ವಕಪ್ ಮುಗಿದ ನಂತರ ತಂಡದಲ್ಲಿ ಹಲವು ಬದಲಾವಣೆ

ರಾಹುಲ್‌ ಗೆ ಕೋಚ್ ರಾಹುಲ್‌ರಿಂದ ಬೆಂಬಲ

ರಾಹುಲ್‌ ಗೆ ಕೋಚ್ ರಾಹುಲ್‌ರಿಂದ ಬೆಂಬಲ

ಕೆ.ಎಲ್ ರಾಹುಲ್ ಕಳಪೆ ಆಟದಿಂದ ಆತನನ್ನು ಪ್ಲೇಯಿಂಗ್ ಇಲವೆನ್‌ನಿಂದ ಕೈ ಬಿಡಬೇಕು ಎಂದು ಟೀಕೆಗಳು ಕೇಳಿಬಂದ ಬೆನ್ನಲ್ಲೇ ಕೋಚ್ ರಾಹುಲ್ ರಾಹುಲ್ ಓಪನರ್‌ಗೆ ಬೆಂಬಲ ನೀಡಿದ್ದಾರೆ.

''ನಮ್ಮ ಮಾತಿನಲ್ಲಿ ಮತ್ತು ಆ್ಯಕ್ಷನ್‌ನಲ್ಲಿ ಕೆ.ಎಲ್‌ ರಾಹುಲ್‌ಗೆ ನಾವು ಸಂಪೂರ್ಣ ಬೆಂಬಲ ನೀಡುತ್ತೇವೆ'' ಎಂದು ರಾಹುಲ್ ದ್ರಾವಿಡ್ ಹೇಳಿದ್ದಾರೆ ಎಂದು ಪಿಟಿಐ ಪತ್ರಕರ್ತ ಕುಶಾನ್ ಸರ್ಕಾರ್ ಟ್ವೀಟ್ ಮಾಡಿದ್ದಾರೆ.

''ಕೆ.ಎಲ್‌ ರಾಹುಲ್ ಅದ್ಭುತ ಆಟಗಾರ, ಆತ ಬಲಿಷ್ಠವಾಗಿ ಕಂಬ್ಯಾಕ್ ಮಾಡುತ್ತಾನೆ ಎಂದು ನಮಗೆ ನಂಬಿಕೆಯಿದೆ. ಈ ಪಿಚ್‌ಗಳು ವಿಶ್ವದ ಯಾವುದೇ ಬ್ಯಾಟರ್‌ಗಳಿಗೆ ಸವಾಲನ್ನು ಒಡ್ಡುತ್ತವೆ. ಯಾರು ಓಪನಿಂಗ್ ಮಾಡಬೇಕು ಎಂಬುದರ ಕುರಿತು ನನಗೆ ಹಾಗೂ ರೋಹಿತ್‌ಗೆ ಯಾವುದೇ ಅನುಮಾನವಿಲ್ಲ. ಕೆ.ಎಲ್ ರಾಹುಲ್ ಓಪನಿಂಗ್ ಮಾಡಿದ್ರೆ ಎಷ್ಟು ಪರಿಣಾಮ ಇರುತ್ತದೆ ಎಂದು ತಿಳಿದಿದೆ'' ಎಂದು ಪತ್ರಿಕಾಗೋಷ್ಟಿಯಲ್ಲಿ ರಾಹುಲ್ ದ್ರಾವಿಡ್ ಮಾತನಾಡಿದ್ದಾರೆ.

ಬಾಂಗ್ಲಾ & ನ್ಯೂಜಿಲೆಂಡ್ ವಿರುದ್ಧ ಸರಣಿಗೆ ಅಯ್ಕೆಯಾಗದ ಹಿನ್ನಲೆ: ಸಾಯಿ ಬಾಬಾ ಮೊರೆ ಹೋದ ಪೃಥ್ವಿ ಶಾ

ದಕ್ಷಿಣ ಆಫ್ರಿಕಾ ವಿರುದ್ಧ ಕೆಲವು ತಪ್ಪುಗಳನ್ನ ಮಾಡಿದ್ದೇವೆ ಎಂದ ದ್ರಾವಿಡ್

ದಕ್ಷಿಣ ಆಫ್ರಿಕಾ ವಿರುದ್ಧ ಕೆಲವು ತಪ್ಪುಗಳನ್ನ ಮಾಡಿದ್ದೇವೆ ಎಂದ ದ್ರಾವಿಡ್

ಭಾರತದ ಮಾಜಿ ನಾಯಕ ರಾಹುಲ್ ದ್ರಾವಿಡ್, ದಕ್ಷಿಣ ಆಫ್ರಿಕಾ ವಿರುದ್ಧ ಟೀಂ ಇಂಡಿಯಾ ಮಾಡಿದ ಕೆಲವು ತಪ್ಪುಗಳನ್ನ ಒಪ್ಪಿಕೊಂಡಿದ್ದಾರೆ. ಸೂರ್ಯಕುಮಾರ್ ಯಾದವ್ ಹೊರತುಪಡಿಸಿಬೇರೆ ಎಲ್ಲಾ ಬ್ಯಾಟರ್‌ಗಳು ರನ್‌ಗಳಿಸಲು ವಿಫಲಗೊಂಡರು. ಟೀಂ ಇಂಡಿಯಾ ಎರಡನೇ ಬಾರಿಗೆ ಟಿ20 ವಿಶ್ವಕಪ್‌ ಗೆಲ್ಲಬೇಕಾದ್ರೆ ಬ್ಯಾಟಿಂಗ್ ಆರ್ಡರ್‌ನಲ್ಲಿ ಸುಧಾರಿಸಬೇಕಿದೆ ಎಂದಿದ್ದಾರೆ.

''ನಾವು ಅದನ್ನು ಗೆಲ್ಲಬೇಕಾದ್ರೆ (ಟಿ20 ವಿಶ್ವಕಪ್) ಉತ್ತಮವಾಗಿ ಆಡಲೇಬೇಕು. ನಾವು ಕಳೆದ ಪಂದ್ಯದಲ್ಲಿ ತಪ್ಪುಗಳನ್ನ ಮಾಡಿದ್ದೇವೆ'' ಎಂದು 49 ವರ್ಷದ ರಾಹುಲ್ ದ್ರಾವಿಡ್ ಹೇಳಿದ್ದಾರೆ ಎಂದು ಪತ್ರಕರ್ತ ವಿಕ್ರಾಂತ್ ಗುಪ್ತಾ ಟ್ವೀಟ್ ಮಾಡಿದ್ದಾರೆ.

ಇದೇ ವೇಳೆಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಇಂಜ್ಯುರಿಯಾದ ದಿನೇಶ್ ಕಾರ್ತಿಕ್ ಕುರಿತು ಮಾತನಾಡಿರುವ ದ್ರಾವಿಡ್, ಕಾರ್ತಿಕ್ ಬೆರಳಿಗೆ ಗಾಯವಾಗಿದ್ದು, ಆತನು ಗುಣಮುಖರಾಗುತ್ತಿದ್ದು, ಪಂದ್ಯದ ದಿನವು ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.

Story first published: Tuesday, November 1, 2022, 14:36 [IST]
Other articles published on Nov 1, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X