IND vs ENG: ಹಾರ್ದಿಕ್ ಪಾಂಡ್ಯ ಅರ್ಧ ಶತಕ; ಇಂಗ್ಲೆಂಡ್‌ಗೆ ಬೃಹತ್ ರನ್ ಗುರಿ ನೀಡಿದ ಭಾರತ

ಭಾರತ ಹಾಗೂ ಇಂಗ್ಲೆಂಡ್ ತಂಡಗಳ ನಡುವಿನ ಟಿ20 ಸರಣಿ ಗುರುವಾರ ಆರಂಭವಾಗಿದ್ದು, ಮೊದಲ ಪಂದ್ಯದಲ್ಲಿ ಭಾರತದ ಯುವ ಆಟಗಾರ ಪಡೆಯನ್ನು ರೋಹಿತ್ ಶರ್ಮಾ ಮುನ್ನಡೆಸುತ್ತಿದ್ದಾರೆ. ಹಾರ್ದಿಕ್ ಪಾಂಡ್ಯ ಅರ್ಧ ಶತಕ ನೆರವಿನಿಂದ ಪ್ರವಾಸಿ ಭಾರತ ತಂಡ ಆತಿಥೇಯ ಇಂಗ್ಲೆಂಡ್‌ಗೆ ಬೃಹತ್ ರನ್ ಗುರಿ ನೀಡಿದೆ.
ಸೌತಾಂಪ್ಟನ್‌ನ ಏಜಿಯಾಸ್ ಬೌಲ್ ಸ್ಟೇಡಿಯಂನಲ್ಲಿ ಮೂರು ಪಂದ್ಯಗಳ ಸರಣಿಯ ಮೊದಲ ಟಿ20 ಪಂದ್ಯದಲ್ಲಿ ಟಾಸ್ ಗೆದ್ದು, ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ನಿಗದಿತ 20 ಓವರ್‌ಗಳಲ್ಲಿ ವಿಕೆಟ್ 8 ನಷ್ಟಕ್ಕೆ 198 ರನ್ ಗಳಿಸಿತು. ಇಂಗ್ಲೆಂಡ್ ಗೆಲ್ಲಲು 199 ರನ್‌ಗಳ ಗುರಿ ನೀಡಲಾಗಿದೆ.
ಭಾರತ ಬ್ಯಾಟಿಂಗ್ ಇನ್ನಿಂಗ್ಸ್ ಆರಂಭಿಸಿದ ನಾಯಕ ರೋಹಿತ್ ಶರ್ಮಾ ಮತ್ತು ಇಶಾನ್ ಕಿಶನ್ ಉತ್ತಮ ಆರಂಭ ಒದಗಿಸಿದರು. ರೋಹಿತ್ ಶರ್ಮಾ ಔಟ್ ಆಗುವ ಮೊದಲು 2.5 ಓವರ್‌ಗಳಲ್ಲಿ 29 ರನ್ ಗಳಿಸಿತು. ಈ ವೇಳೆ ಮೊಯಿನ್ ಅಲಿ ಬೌಲಿಂಗ್‌ನಲ್ಲಿ ರೋಹಿತ್ ಶರ್ಮಾ (24) ರನ್ ಗಳಿಸಿ ವಿಕೆಟ್ ಒಪ್ಪಿಸಿದರು.
ನಂತರ ಬಂದ ದೀಪಕ್ ಹೂಡಾ ಆರಂಭದಿಂದಲೇ ಅಬ್ಬರಿಸಿದರು. ಇದೇ ವೇಳೆ ನೆಲೆ ಕಂಡುವಾಗಲೇ ಇಶಾನ್ ಕಿಶನ್ 8 ರನ್ ಗಳಿಸಿ ಔಟಾದರು. ಇನ್ನು ಕೇವಲ 17 ಎಸೆತಗಳಲ್ಲಿ 33 ರನ್ ಗಳಿಸಿದ ಹೂಡಾ ಕೂಡಾ ವಿಕೆಟ್ ನೀಡಿದರು.
ಮಧ್ಯಮ ಕ್ರಮಾಂಕದಲ್ಲಿ ಸೂರ್ಯಕುಮಾರ್ ಯಾದವ್ (39) ಅಬ್ಬರಿಸಿದರೆ, ಹಾರ್ದಿಕ್ ಪಾಂಡ್ಯ (31 ಎಸೆತಗಳಲ್ಲಿ 51 ರನ್) ಭರ್ಜರಿ ಅರ್ಧ ಶತಕ ಗಳಿಸಿ ಭಾರತ ಮೊತ್ತ ಹೆಚ್ಚಾಗುವಲ್ಲಿ ಕಾರಣರಾದರು. ಆಲ್‌ರೌಂಡರ್ ಅಕ್ಷರ್ ಪಟೇಲ್ (17) ರನ್ ಗಳಿಸಿ ತಂಡಕ್ಕೆ ರನ್ ಕೊಡುಗೆ ನೀಡಿದರು. ಕೊನೆಯಲ್ಲಿ ದಿನೇಶ್ ಕಾರ್ತಿಕ್ (11) ರನ್ ಗಳಿಸಿ ಔಟಾದರು.
ಇನ್ನು ಇಂಗ್ಲೆಂಡ್ ಪರ ಬೌಲಿಂಗ್‌ನಲ್ಲಿ ಕ್ರಿಸ್ ಜೋರ್ಡಾನ್ 4 ಓವರ್‌ಗಳಲ್ಲಿ 23 ರನ್ ನೀಡಿ 2 ವಿಕೆಟ್ ಪಡೆದರು. ಮೊಯಿನ್ ಅಲಿ 2 ಓವರ್‌ಗಳಲ್ಲಿ 26 ರನ್ ನೀಡಿ 2 ಪ್ರಮುಖ ವಿಕೆಟ್ ಪಡೆದರು. ಇನ್ನು ಟೈಮಲ್ ಮಿಲ್ಸ್, ರೀಸ್ ಟೋಪ್ಲಿ ಮತ್ತು ಮ್ಯಾಟ್ ಪಾರ್ಕಿನ್ಸನ್ ತಲಾ ಒಂದೊಂದು ವಿಕೆಟ್ ಪಡೆದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications