For Quick Alerts
ALLOW NOTIFICATIONS  
For Daily Alerts
 

IND vs ENG 1ನೇ ಟಿ20: ಹಾರ್ದಿಕ್ ಪಾಂಡ್ಯ ಆಲ್‌ರೌಂಡ್ ಆಟ; ಸೇಡು ತೀರಿಸಿಕೊಂಡ ಭಾರತ

India vs England 1st T20: India Won Against England By 50 Runs

ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮೂರು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಭಾರತ ಭರ್ಜರಿ ಗೆಲುವು ಸಾಧಿಸಿ, ಟೆಸ್ಟ್ ಪಂದ್ಯದ ಸೋಲಿಗೆ ಪ್ರತೀಕಾರ ತೀರಿಸಿಕೊಂಡಿತು. ಹಾರ್ದಿಕ್ ಪಾಂಡ್ಯ ಆಲ್‌ರೌಂಡ್ ಆಟದ ನೆರವಿನಿಂದ ಇಂಗ್ಲೆಂಡ್ ವಿರುದ್ಧ 50 ರನ್‌ಗಳ ಭರ್ಜರಿ ಜಯ ಸಾಧಿಸಿತು.

ಸೌತಾಂಪ್ಟನ್‌ನ ಏಜಿಯಾಸ್ ಬೌಲ್ ಸ್ಟೇಡಿಯಂನಲ್ಲಿ ಮೂರು ಪಂದ್ಯಗಳ ಸರಣಿಯ ಮೊದಲ ಟಿ20 ಪಂದ್ಯದಲ್ಲಿ ಟಾಸ್ ಗೆದ್ದು, ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ನಿಗದಿತ 20 ಓವರ್‌ಗಳಲ್ಲಿ ವಿಕೆಟ್ 8 ನಷ್ಟಕ್ಕೆ 198 ರನ್ ಗಳಿಸಿತು. ಇಂಗ್ಲೆಂಡ್ ಗೆಲ್ಲಲು 199 ರನ್‌ಗಳ ಗುರಿ ನೀಡಿತ್ತು. ಆದರೆ ಇಂಗ್ಲೆಂಡ್ 20 ಓವರ್‌ಗಳಲ್ಲಿ 148 ರನ್ ಗಳಿಸಲಷ್ಟೇ ಶಕ್ತವಾಯಿತು.

ಬೃಹತ್ ರನ್ ಗುರಿ ಬೆನ್ನತ್ತಿದ ಆತಿಥೇಯ ತಂಡ ಆರಂಭದಿಂದಲೇ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿತು. ಭುವನೇಶ್ವರ್ ಕುಮಾರ್ ಎಸೆದ ಮೊದಲ ಓವರ್‌ನಲ್ಲಿಯೇ ನಾಯಕ ಜೋಸ್ ಬಟ್ಲರ್ ವಿಕೆಟ್ ಕಳೆದುಕೊಂಡಿತು. ನಂತರ ಬಂದ ಡೇವಿಡ್ ಮಲಾನ್ ಅಬ್ಬರಿಸಿದರಾದರೂ, ದೊಡ್ಡ ಮೊತ್ತವಾಗಿ ಪರಿವರ್ತಿಸಲು ವಿಫಲರಾಗಿ ಹಾರ್ದಿಕ್ ಪಾಂಡ್ಯ ಬೌಲಿಂಗ್‌ನಲ್ಲಿ ಬೌಲ್ಡ್ ಆದರು.

ಸ್ಫೋಟಕ ಆಟಗಾರ ಎದುರಿಸಿದ ಮೂರನೇ ಎಸೆತದಲ್ಲಿಯೇ ಹಾರ್ದಿಕ್ ಪಾಂಡ್ಯ ಬೌಲಿಂಗ್‌ನಲ್ಲಿ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್‌ಗೆ ಕ್ಯಾಚ್ ನೀಡಿ ಹೊರನಡೆದರು. ಆರಂಭಿಕ ಜೇಸನ್ ರಾಯ್ ಕೂಡ ಅದೇ ಓವರ್ನಲ್ಲಿ ಔಟಾದರು.

India vs England 1st T20: India Won Against England By 50 Runs

ಹ್ಯಾರಿ ಬ್ರೂಕ್ (28) ಮತ್ತು ಮೊಯಿನ್ ಅಲಿ (36) ಕೆಲಹೊತ್ತು ಭಾರತದ ಬೌಲಿಂಗ್‌ಗೆ ಪ್ರತಿರೋಧ ವ್ಯಕ್ತಪಡಿಸಿದರಾದರೂ, ಇವರಿಬ್ಬರ ವಿಕೆಟ್ ಬೀಳುತ್ತಿದ್ದಂತೆ ಇಂಗ್ಲೆಂಡ್‌ನ ಸೋಲು ಖಚಿತವಾಯಿತು.

ಭಾರತದ ಪರ ಬೌಲಿಂಗ್‌ನಲ್ಲಿ ಹಾರ್ದಿಕ್ ಪಾಂಡ್ಯ 4 ಓವರ್‌ಗಳಲ್ಲಿ 33 ರನ್ ನೀಡಿ 4 ವಿಕೆಟ್ ಪಡೆದರು. ಯುಜ್ವೇಂದ್ರ ಚಹಾಲ್ 4 ಓವರ್‌ಗಳಲ್ಲಿ 32 ರನ್ ನೀಡಿ 2 ಪ್ರಮುಖ ವಿಕೆಟ್ ಪಡೆದರು. ಅರ್ಶ್‌ದೀಪ್ ಸಿಂಗ್ 2 ವಿಕೆಟ್ ಪಡೆದರೆ, ಇನ್ನುಳಿದಂತೆ ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್ ತಲಾ ಒಂದೊಂದು ವಿಕೆಟ್ ಪಡೆದು ಭಾರತ ಗೆಲುವಿಗೆ ಪ್ರಮುಖ ಕೊಡುಗೆ ನೀಡಿದರು.

ಭಾರತ ಬ್ಯಾಟಿಂಗ್ ಇನ್ನಿಂಗ್ಸ್
ಭಾರತ ಬ್ಯಾಟಿಂಗ್ ಇನ್ನಿಂಗ್ಸ್ ಆರಂಭಿಸಿದ ನಾಯಕ ರೋಹಿತ್ ಶರ್ಮಾ ಮತ್ತು ಇಶಾನ್ ಕಿಶನ್ ಉತ್ತಮ ಆರಂಭ ಒದಗಿಸಿದರು. ರೋಹಿತ್ ಶರ್ಮಾ ಔಟ್ ಆಗುವ ಮೊದಲು 2.5 ಓವರ್‌ಗಳಲ್ಲಿ 29 ರನ್ ಗಳಿಸಿತು. ಈ ವೇಳೆ ಮೊಯಿನ್ ಅಲಿ ಬೌಲಿಂಗ್‌ನಲ್ಲಿ ರೋಹಿತ್ ಶರ್ಮಾ (24) ರನ್ ಗಳಿಸಿ ವಿಕೆಟ್ ಒಪ್ಪಿಸಿದರು.

ನಂತರ ಬಂದ ದೀಪಕ್ ಹೂಡಾ ಆರಂಭದಿಂದಲೇ ಅಬ್ಬರಿಸಿದರು. ಇದೇ ವೇಳೆ ನೆಲೆ ಕಂಡುವಾಗಲೇ ಇಶಾನ್ ಕಿಶನ್ 8 ರನ್ ಗಳಿಸಿ ಔಟಾದರು. ಇನ್ನು ಕೇವಲ 17 ಎಸೆತಗಳಲ್ಲಿ 33 ರನ್ ಗಳಿಸಿದ ಹೂಡಾ ಕೂಡಾ ವಿಕೆಟ್ ನೀಡಿದರು.

ಮಧ್ಯಮ ಕ್ರಮಾಂಕದಲ್ಲಿ ಸೂರ್ಯಕುಮಾರ್ ಯಾದವ್ (39) ಅಬ್ಬರಿಸಿದರೆ, ಹಾರ್ದಿಕ್ ಪಾಂಡ್ಯ (31 ಎಸೆತಗಳಲ್ಲಿ 51 ರನ್) ಭರ್ಜರಿ ಅರ್ಧ ಶತಕ ಗಳಿಸಿ ಭಾರತ ಮೊತ್ತ ಹೆಚ್ಚಾಗುವಲ್ಲಿ ಕಾರಣರಾದರು. ಆಲ್‌ರೌಂಡರ್ ಅಕ್ಷರ್ ಪಟೇಲ್ (17) ರನ್ ಗಳಿಸಿ ತಂಡಕ್ಕೆ ರನ್ ಕೊಡುಗೆ ನೀಡಿದರು. ಕೊನೆಯಲ್ಲಿ ದಿನೇಶ್ ಕಾರ್ತಿಕ್ (11) ರನ್ ಗಳಿಸಿ ಔಟಾದರು.

ಇನ್ನು ಇಂಗ್ಲೆಂಡ್ ಪರ ಬೌಲಿಂಗ್‌ನಲ್ಲಿ ಕ್ರಿಸ್ ಜೋರ್ಡಾನ್ 4 ಓವರ್‌ಗಳಲ್ಲಿ 23 ರನ್ ನೀಡಿ 2 ವಿಕೆಟ್ ಪಡೆದರು. ಮೊಯಿನ್ ಅಲಿ 2 ಓವರ್‌ಗಳಲ್ಲಿ 26 ರನ್ ನೀಡಿ 2 ಪ್ರಮುಖ ವಿಕೆಟ್ ಪಡೆದರು. ಇನ್ನು ಟೈಮಲ್ ಮಿಲ್ಸ್, ರೀಸ್ ಟೋಪ್ಲಿ ಮತ್ತು ಮ್ಯಾಟ್ ಪಾರ್ಕಿನ್ಸನ್ ತಲಾ ಒಂದೊಂದು ವಿಕೆಟ್ ಪಡೆದರು.

Story first published: Friday, July 8, 2022, 9:13 [IST]
Other articles published on Jul 8, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+